ನ್ಯೂಸ್

ಕಂಠಪೂರ್ತಿ ಕುಡಿದು ಸ್ವಂತ ಕಾರನ್ನೇ ಅಪರಿಚಿತನಿಗೆ ಕೊಟ್ಟು ಮನೆಗೆ ಬಂದ; ಮರುದಿನ ಕಾದಿತ್ತು ಶಾಕ್​

ನವದೆಹಲಿ: ಕುಡಿದ ಮತ್ತಿನಲ್ಲಿ ವ್ಯಕ್ತಿ ಓರ್ವ ಅಪರಿಚಿತನಿಗೆ ತನ್ನ ಕಾರು, ಲ್ಯಾಪ್​ಟಾಪ್​ ಹಾಗು 18 ಸಾವಿರ ರೂ. ನಗದನ್ನು ನೀಡಿ ಮೋಸ ಹೋಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಘಟನೆಐ ಜೂನ್​ 9ರಂದು ನಡೆದಿದ್ದು ದೆಹಲಿ ಮೂಲದ ಅಮಿತ್​ ಪ್ರಕಾಶ್​ ಮೋಸ ಹೋಗಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ವಂಚಕನಿಗಾಗಿ ಶೋಧ ನಡೆಸುತ್ತಿದ್ದಾರೆ.

ಘಟನೆಯ ಹಿನ್ನಲೆ?

ಗುರುಗ್ರಾಮದ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಆಮಡುತ್ತಿರುವ ಅಮಿತ್​ ಶುಕ್ರವಾರ ಸಂಜೆ ಎಂದಿನಂತೆ ತಮ್ಮ ಕೆಲಸ ಮುಗಿದ ಬಳಿಕ ಗಾಲ್ಫ್​ ಕೋರ್ಸ್​ ರಸ್ತೆಯಲ್ಲಿರುವ ಲೇಕ್​ ಫಾರೆಸ್ಟ್​ ವೈನ್​ ಶಾಪ್​ಗೆ ಹೋಗಿದ್ದಾರೆ. ಈ ವೇಳೆ ಇವರು ಕುಡಿದ ಮತ್ತಿನಲ್ಲಿ ಇರುವುದನ್ನು ಗಮನಿಸಿದ ವಂಚಕ ತಾನು ಕೂಡ ಸೇರಿಕೊಳ್ಲಬಹುದೆ ಎಂದು ಕೇಳಿದ್ದಾನೆ.

ಬಳಿಕ ಅಮಿತ್​ ಕುಡಿದ ಮತ್ತಿನಲ್ಲಿ ಇನ್ನೊಂದು ವೈನ್​ ಬಾಟಲಿ ಖರೀದಿಸುವಂತೆ ಹೇಳಿದ್ದಾನೆ. ಈ ಸಮಯದಲ್ಲಿ ವಂಚಕ 2 ಸಾವಿರ ರೂಪಾಯಿ ಬೆಲೆ ಬಾಳುವ ಬಾಟಲಿಗೆ 20,000 ರೂ. ಪಡೆದಿದ್ದಾನೆ. ಇದಾದ ಕೆಲ ಹೊತ್ತಿನ ಬಳಿಕ ಆತನೇ ದೂರುದಾರರ ಕಾರ್​ ಡ್ರೈವ್​ ಮಾಡಿಕೊಂಡು ಬಂದಿದ್ದು, ಅವರನ್ನು ದೆಹಲಿಯಲ್ಲಿರುವ ಸುಭಾಷ್​ ಚೌಕ್​ ಮೆಟ್ರೋ ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದಾನೆ.

ಮಾರನೆಯ ದಿನ ಬೆಳಗ್ಗೆ ಅಮಿತ್​ ಅವರಿಗೆ ಹಿಂದಿನ ದಿನ ನಡೆದ ಘಟನೆಗಳು ಜ್ಞಾಪಕವಾಗಿದ್ದು, ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿ ದೂರು ದಾಖಲಿಸಿದ್ದಾರೆ. ಘಟನೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿರಗು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದು ಕುಡಿದ ಮತ್ತಿನಲ್ಲಿ ಮಾಡಿದ ಕೆಲಸಕ್ಕೆ ಕಿಡಿಕಾರುತ್ತಿದ್ದಾರೆ.