ನ್ಯೂಸ್

ಫೈಟ್ ಮಾಡ್ತಾರೆ ಎಂದುಕೊಂಡಿದ್ದೆ, ಎದುರಾಳಿಗಳು ಅಷ್ಟೊಂದು ವೀಕ್‌ ಎಂದು ತಿಳಿದಿರಲಿಲ್ಲ: DCM DK Shivakumar

Webdesk - Manjunatha B

ಬೆಂಗಳೂರು: ರಾಜ್ಯದ ಮೂರು ವಿಧಾನಸಭೆ ಉಪಚುನಾವಣೆಗೆ (By Election) ದಿನಗಣನೆ ಆರಂಭವಾಗಿದ್ದು, ಬಿಜೆಪಿ (BJP) ಈಗಾಗಲೇ ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ. ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಇನ್ನಷ್ಟೇ ಆಗಬೇಕಿದ್ದು, ಶೀಘ್ರದಲ್ಲೇ ಈ ವಿಚಾರಕ್ಕೆ ತೆರೆ ಬೀಳಲಿದೆ. ಇತ್ತ ಕಾಂಗ್ರೆಸ್​ ಪಾಳಯದಲ್ಲೂ ಅಭ್ಯರ್ಥಿ ಆಯ್ಕೆ ಸಂಬಂಧ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯ ಕಾಂಗ್ರಸ್​ ನಾಯಕರು (Congress Leadres) ಸರಣಿ ಸಭೆಗಳನ್ನು ನಡೆಸುತ್ತಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆಯಿದೆ.

ಇನ್ನೂ ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್​ (DK Shivakumar) ಎದುರಾಳಿಗಳು ಅಷ್ಟೊಂದು ವೀಕ್ ಆಗ್ತಾರೆ ಎಂದು ನಾನು ತಿಳಿದುಕೊಂಡಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್​ ನಾಯಕರ ಹಾಗೂ ಮುಖಂಡರ ಸಭೆ ಬಳಿಕ ಈ ಬಗ್ಗೆ ಮಾತನಾಡಿದ್ದು, ಜೆಡಿಎಸ್​ ಪಕ್ಷವನ್ನು ಟೀಕಿಸಿದ್ದಾರೆ.

ನಾನು ಜನರನ್ನು ಭೇಟಿ ಮಾಡಿದ್ದೇನೆ. ನಾನೇ ಅಭ್ಯರ್ಥಿ ಎಂದು ಕೆಲಸ ಮಾಡುವಂತೆ ಹೇಳಿದ್ದೇನೆ. ವಿರೋಧ ಪಕ್ಷಗಳು ರಾತ್ರಿ ಎಲ್ಲಾ ಸಭೆ ನಡೆಸಿದ್ದಾರೆ. ಜೆಡಿಎಸ್‌ನವರು ಸೀಟು ಬಿಟ್ಟು ಕೊಡುತ್ತಾರೆ ಎಂದು ಯಾರೋ ಫೋನ್ ಮಾಡಿದ್ದರು. ಎದುರಾಳಿಗಳು ಅಷ್ಟೊಂದು ವೀಕ್‌ ಎಂದು ತಿಳಿದಿರಲಿಲ್ಲ. ಫೈಟ್ ಮಾಡ್ತಾರೆ ಎಂದುಕೊಂಡಿದ್ದೆ. ನಾನು ನಮ್ಮ ಕಾರ್ಯಕರ್ತರ ಮುಖಂಡರ ಅಭಿಪ್ರಾಯವನ್ನು ಕೇಳಿದ್ದೇನೆ. ಯಾರೇ ಅಭ್ಯರ್ಥಿಯಾದರು, ಡಿ.ಕೆ ಶಿವಕುಮಾರ್ ಅಭ್ಯರ್ಥಿ ಎಂದು ಕೆಲಸ ಮಾಡಬೇಕು ಎಂದು ಹೇಳಿದ್ದೇನೆ. ನಮ್ಮ ಕಾರ್ಯಕರ್ತರ ಜೊತೆಗೆ ನಾನು ಮಾತನಾಡುತ್ತಿದ್ದೇನೆ. ನಾನು ಕ್ಷೇತ್ರಕ್ಕೆ ಹೋಗಲೇಬೇಕು, ಸೇವೆ ಮಾಡುವ ಸಲುವಾಗಿ ಹೋಗ್ತಿದ್ದೆ.

ಕಾರ್ಯಕರ್ತರು ಎಲ್ಲರ ಜೊತೆಗೂ ಮಾತನಾಡಿದ್ದೇನೆ. ರಾಜಕಾರಣದಲ್ಲಿ ಹಲವು ಸಾಧ್ಯತೆಗಳು ಇರುತ್ತವೆ. ಯಾರು ಬೇಕಾದರೂ ಅಭ್ಯರ್ಥಿ ಆಗಬಹುದು. ಕಾರ್ಯಕರ್ತರನ್ನು ನಿಲ್ಲಿಸಿದರೂ ಕೂಡ ತಯಾರಿರಬೇಕು. ಡಿ.ಕೆ ಸುರೇಶ್ ಅವರ ಹೆಸರು ಕೂಡ ಹೇಳಿದ್ದಾರೆ. ಅವರಿಗೂ ಜವಾಬ್ದಾರಿ ಇದೆ. ನಾವು ಯಾರ ಮನವೊಲಿಸುವುದಿಲ್ಲ, ಇಂಥವರು ಅಭ್ಯರ್ಥಿ ಎಂದು ಹೇಳುತ್ತೇವೆ. ಸುರೇಶ್ ಹೇಳಲಿ ನಾನು ಹೇಳಲಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ (Dk Shivakumar) ಸಭೆ ಬಳಿಕ ಹೇಳಿದ್ದಾರೆ.