ನ್ಯೂಸ್

Salman Khan Death Threat | ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯಿಂದ ಕ್ಷಮೆಯಾಚನೆ; ​ಮೆಸೇಜ್​​​ನಲ್ಲಿ ತಿಳಿಸಿರೋದಿಷ್ಟು ..

ಮುಂಬೈ: ಬಾಲಿವುಡ್ ಭಾಯಿಜಾನ್​​​​ ಸಲ್ಮಾನ್ ಖಾನ್​ಗೆ ಕೊಲೆ ಮಾಡುವುದಾಗಿ ಬೆದರಿಕೆ(Salman Khan Death Threat) ಬಂದಿರುವುದು ಗೊತ್ತೆ ಇದೆ. ಸದ್ಯ ಈ ಪ್ರಕರಣದಲ್ಲಿ ಹೊಸ ಟ್ವಿಸ್ಟ್​​ ಕಂಡುಬಂದಿದೆ. ಬೆದರಿಕೆ ಹಾಕಿದ ವ್ಯಕ್ತಿಯೆ ಕ್ಷಮೆಯಾಚಿಸಿರುವುದಾಗಿ ಮಾಹಿತಿ ಸಿಕ್ಕಿದೆ.

ಅಸಲಿಗೆ ಸಲ್ಮಾನ್​ ಖಾನ್​ ಅವರನ್ನು ಕೊಲ್ಲುವುದಾಗಿ ಬೆದರಿಕೆಯನ್ನು ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸ್​​ಆ್ಯಪ್​​​​ಸಂಖ್ಯೆಗೆ ಕಳುಹಿಸಲಾಗಿತ್ತು. ಈಗ ಮುಂಬೈ ಟ್ರಾಫಿಕ್ ಪೊಲೀಸರಿಗೆ ಅದೇ ವಾಟ್ಸ್​​ಆ್ಯಪ್ ಸಂಖ್ಯೆಯಿಂದ ಮತ್ತೊಂದು ಸಂದೇಶ ಬಂದಿದೆ. ಅದರಲ್ಲಿ ಬೆದರಿಕೆ ಹಾಕಿದ ವ್ಯಕ್ತಿಯೇ ಕ್ಷಮೆಯಾಚಿಸಿದ್ದಾನೆ. ಮೆಸೇಜ್​​ ಕಳುಹಿಸಿರುವ ವ್ಯಕ್ತಿ, ನಾನು ಈ ಸಂದೇಶವನ್ನು ತಪ್ಪಾಗಿ ಕಳುಹಿಸಿದ್ದೇನೆ ಮತ್ತು ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಜಾರ್ಖಂಡ್‌ನಲ್ಲಿ ಈ ಮೆಸೇಜ್​​ ಕಳುಹಿಸಿದ ವ್ಯಕ್ತಿ ಇರುವ ಸ್ಥಳವನ್ನು ಪೊಲೀಸರು ಪತ್ತೆ ಮಾಡಿದ್ದು ಸದ್ಯ ಆತನ ಹುಡುಕಾಟದಲ್ಲಿ ಪೊಲೀಸ್ ತಂಡ ಅಲ್ಲಿಗೆ ಹೋಗಿದೆ. ಈ ಮೊದಲು ಮಾಡಿದ ಮೆಸೇಜ್​ನಲ್ಲಿ ಸಲ್ಮಾನ್​ ಖಾನ್​ ಮತ್ತು ಲಾರೆನ್ಸ್​​ ಗ್ಯಾಂಗ್​ ನಡುವೆ ರಾಜಿ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಅದಕ್ಕಾಗಿ ನೀವು 5 ಕೋಟಿ ರೂಪಾಯಿ ನೀಡಬೇಕು. ಹಣ ನೀಡದಿದ್ದರೆ ಸಲ್ಮಾನ್ ಖಾನ್ ಸ್ಥಿತಿ ಬಾಬಾ ಸಿದ್ದಿಕಿಗಿಂತ ಹೀನಾಯವಾಗಲಿದೆ ಎಂದು ಎಚ್ಚರಿಸಿದ್ದ.

ನನ್ನ ಮಗ ನಿರಪರಾಧಿ ಎಂದಿದ್ದ ಸಲ್ಮಾನ್​​ ಖಾನ್​​ ತಂದೆ ಸಲೀಂ ಖಾನ್​​​

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ತಂದೆ ಸಲೀಂ ಖಾನ್ ಅವರು ಇತ್ತೀಚೆಗೆ ತಮ್ಮ ಮಗ ನಿರಪರಾಧಿ ಎಂದು ಹೇಳಿದ್ದರು. ಸಲ್ಮಾನ್ ಕ್ಷಮೆ ಕೇಳುವುದಿಲ್ಲ, ಏಕೆಂದರೆ ಕ್ಷಮೆಯಾಚಿಸಿದರೆ ಅವನು ತಪ್ಪು ಮಾಡಿದ್ದಾನೆ ಎಂದು ಅರ್ಥವಾಗುತ್ತದೆ. ಸಲ್ಮಾನ್ ಯಾವುದೇ ಪ್ರಾಣಿಯನ್ನು ಕೊಲ್ಲಲಿಲ್ಲ. ಈ ವಿಷಯಗಳಲ್ಲಿ ನಮಗೆ ನಂಬಿಕೆ ಇಲ್ಲ. ಅವರು ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿದ್ದರು.

ಈ ಬೆದರಿಕೆಗಳ ನಡುವೆ ಸಲ್ಮಾನ್ ಖಾನ್ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ.ಇತ್ತೀಚೆಗೆ ಅವರು ಬಿಗ್ ಬಾಸ್‌ನ ವಾರಾಂತ್ಯದ ಸಂಚಿಕೆಯನ್ನು ಚಿತ್ರೀಕರಿಸಿದರು. ಬೆದರಿಕೆ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ನಂತರ ಪೊಲೀಸರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ .(ಏಜೆನ್ಸೀಸ್​​)