ನ್ಯೂಸ್

ದರ್ಶನ್ 3 ತಿಂಗಳೊಳಗೆ ರಿಲೀಸ್ ಆಗ್ತಾರೆ​! ಭವಿಷ್ಯ ನುಡಿದ ಕೌಡೇಪಿರ ಲಾಲಸಾಬ​

ಕೊಪ್ಪಳ:  ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಹಾಗೂ ಸಹಚರರಿಗೆ ಸದ್ಯಕ್ಕೆ ಜಾಮೀನು ಸಿಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇತ್ತ ನೆಚ್ಚಿನ ನಟ ಜೈಲಿನಿಂದ ಬಿಡುಗಡೆಯಾಗುವುದನ್ನು ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಒಂದು ಹೊರಬಿದ್ದಿದ್ದು, ದರ್ಶನ್​ ಮುಂದಿನ ಮೂರು ತಿಂಗಳ ಒಳಗೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂಬ ಭವಿಷ್ಯವಾಣಿ ಹೊರಬಿದ್ದಿದೆ.

ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​, ಪವಿತ್ರ ಗೌಡ ಸೇರಿದಂತೆ ಪ್ರಕರಣದ 17 ಆರೋಪಿಗಳು ಬಂಧನವಾಗಿ ಒಂದೂವರೆ ತಿಂಗಳಾಗುತ್ತ ಬಂದಿದೆ. ಇತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​​ಶೀಟ್​ ಸಲ್ಲಿಸದ ಕಾರಣ ನಟ ದರ್ಶನ್​ ಸೇರಿದಂತೆ ಪ್ರಕರಣದ ಇತರೆ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರೋಪಿಗಳಿಗೆ ಜಾಮೀನು ಸಿಗೋದು ಡೌಟ್​ ಎಂದು ಹೇಳಲಾಗಿದೆ. ಇತ್ತ ಅಭಿಮಾನಿಗಳಿಗೂ ತಮ್ಮ ನೆಚ್ಚಿನ ನಟ ಯಾವಾಗ ಹೊರಕ್ಕೆ ಬರೋದು ಎನ್ನುವ ಪ್ರಶ್ನೆ ಕಾಡಿದೆ. ಇದಕ್ಕೆ ದೇವರಿಂದ ಉತ್ತರ ಸಿಕ್ಕಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಇರಿಸಲಾಗಿದ್ದ ಕೌಡೇಪಿರ ಲಾಲಸಾಬ ದೇವರ ಬಳಿ ಅಭಿಮಾನಿಗಳು ನಟ ದರ್ಶನ್ ಜೈಲಿನಿಂದ ಯಾವಾಗ ಬಿಡುಗಡೆಯಾಗಲಿದ್ದಾರೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ದೇವರು ಮೂರೇ ತಿಂಗಳಲ್ಲಿ ದರ್ಶನ್ ಹೊರಕ್ಕೆ ಬರುತ್ತಾರೆ ಎಂದು ಭವಿಷ್ಯ ನುಡಿದಿದೆ. 2019ರಲ್ಲಿ ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕ ಡಿಕೆ ಶಿವಕುಮಾರ್ ಅರೆಸ್ಟ್ ಆಗಿದ್ದರು. ಆ ಸಂದರ್ಭದಲ್ಲೂ ಕೌಡೇಪಿರ ಲಾಲಸಾಬ ದೇವರು ಭವಿಷ್ಯ ನುಡಿದಿತ್ತು.  ಅದು ನಿಜ ಆಗಿತ್ತು. ಇದೀಗ ದರ್ಶನ್​ ವಿಚಾರವಾಗಿ ದೇವರು ಭವಿಷ್ಯ ನುಡಿದಿದ್ದು, ದರ್ಶನ್ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಕೌಡೇಪಿರ ಲಾಲಸಾಬ ದೇವರನ್ನು ಕೂರಿಸೋ ಪದ್ಧತಿ ಮುಸ್ಲಿಂ ಧರ್ಮದಲ್ಲಿ ಇದೆ. ಪ್ರತಿವರ್ಷವೂ ಕೊಪ್ಪಳ ಜಿಲ್ಲೆಯ ಸುತ್ತಮುತ್ತ ದೇವರ ಉತ್ಸವ ಜರುಗಲಿದ್ದು, ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಜಾಮೀನು ಸಿಗೋದು ಡೌಟ್?

ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಹಾಗೂ ಸಹಚರರಿಗೆ ಸದ್ಯಕ್ಕೆ ಜಾಮೀನು ಸಿಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್​ 14 ದಿನಗಳ ಕಾಲ ವಿಸ್ತರಿಸಿದ್ದು, ದಾಸನ ಗ್ಯಾಂಗ್​ ಆಗಷ್ಟ್​ 01ರ ವರೆಗೆ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುವುದು ಅನಿವಾರ್ಯವಾಗಿದೆ.