ಚಿಕ್ಕಮಗಳೂರು: ಅವಧೂತ ವಿನಯ್ ಗುರೂಜಿ ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಮೂಲಕವಾಗಿ ಕಿಡಿಗೇಡಿಗಳು ಭಯ ಹುಟ್ಟಿಸುವ ಸಂದೇಶ ಕಳಿಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಹೆಸರಲ್ಲಿ ಕಿಡಿಗೆಡಿಗಳು ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಸಂದೇಶ ಕಳಹಿಸಿ ಭಯ ಹುಟ್ಟಿಸುತ್ತಿದ್ದಾರೆ. 45 ದಿನದೊಳಗೆ ನಿಮಗೆ ಗಂಡಾಂತರ ಅನ್ನೋ ರೀತಿ ಮೆಸೇಜ್ಗಳನ್ನು ಕಳುಹಿಸಿ ಭಯ ಹುಟ್ಟಿಸಿ ನಂತರ ಹಣವಸೂಲಿ ಮಾಡುತ್ತಿರುವ ಅರೋಪ ಕೇಳಿ ಬಂದಿದೆ.