ನ್ಯೂಸ್

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಕಸ್ಮಿಕ ಧನಾಗಮನ, ವ್ಯವಹಾರದಲ್ಲಿ ಲಾಭ

ಮೇಷ: ಮಾತಿನಿಂದ ಸಮಸ್ಯೆ. ಕೋರ್ಟ್ ವ್ಯವಹಾರದಲ್ಲಿ ಅನುಕೂಲವಾಗುವುದು. ಆರ್ಥಿಕ ಹಿನ್ನಡೆ ಸಾಧ್ಯತೆ. ವಿದೇಶ ಪ್ರಯಾಣ. ಶುಭಸಂಖ್ಯೆ: 4

ವೃಷಭ: ಹೊಸವಿದ್ಯೆ ಕಲಿಯುವಿರಿ. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಅಧಿಕ ಲಾಭ. ಗುಪ್ತ ಶತ್ರು ಕಾಟ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 4

ಮಿಥುನ: ಶೈಕ್ಷಣಿಕ ಸಂಸ್ಥೆ ನಡೆಸುವವರಿಗೆ ತೊಂದರೆ. ನ್ಯಾಯಾಲಯದ ಕೆಲಸ ವಿಳಂಬ. ಮಕ್ಕಳಿಂದ ಅನುಕೂಲ. ವಿದ್ಯಾಭ್ಯಾಸ ಪ್ರಗತಿ. ಶುಭಸಂಖ್ಯೆ: 8

ಕಟಕ: ಲಾಭದಲ್ಲಿ ಕುಂಠಿತ. ಮಿತ್ರರಿಂದ ಅಂತರ ಕಾಯ್ದು ಕೊಳ್ಳಿ. ಸಿರಾಸ್ತಿಯಿಂದ ಕುಟುಂಬದಲ್ಲಿ ಘರ್ಷಣೆ. ಮೋಜು ಮಸ್ತಿಗಳಿಂದ ನಷ್ಟ. ಶುಭಸಂಖ್ಯೆ: 6

ಸಿಂಹ: ಬಂಧುಗಳಿಂದ ಆರ್ಥಿಕ ಸಹಾಯ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಕೃಷಿ ವ್ಯವಹಾರದಲ್ಲಿ ಲಾಭ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 5

ಕನ್ಯಾ: ವ್ಯವಹಾರದಲ್ಲಿ ಆಕಸ್ಮಿಕ ಧನಾಗಮನ. ಟ್ರಾವೆಲ್ಸ್ ವ್ಯವಹಾರದಲ್ಲಿ ಲಾಭ. ಕೋರ್ಟ್​ನಲ್ಲಿ ಜಯ. ದುಡುಕಿನ ಮಾತಿನಿಂದ ಸಮಸ್ಯೆ. ಶುಭಸಂಖ್ಯೆ: 9

ತುಲಾ: ಸಂಗಾತಿಯ ನೆರವು. ವಿವಾಹ ಯತ್ನದಲ್ಲಿ ವೈಫಲ್ಯ. ಉದ್ಯೋಗ ಬದಲಾವಣೆ ತೊಂದರೆ. ಉನ್ನತ ವಿದ್ಯೆಯ ಕನಸು ಸಾಕಾರ. ಶುಭಸಂಖ್ಯೆ: 3

ವೃಶ್ಚಿಕ: ದಾಂಪತ್ಯದಲ್ಲಿ ಕಲಹ. ಪಾಲುದಾರಿಕೆಯಲ್ಲಿ ನಂಬಿದವರಿಂದಲೇ ಮೋಸ. ದುಶ್ಚಟಗಳಿಗೆ ವೆಚ್ಚ. ಸಾಲಗಾರರ ಕಾಟ ನಿವಾರಣೆ. ಶುಭಸಂಖ್ಯೆ: 1

ಧನುಸ್ಸು: ಮಕ್ಕಳ ಭವಿಷ್ಯದ ಚಿಂತೆ. ಪ್ರೇಮದ ಪ್ರಸ್ತಾವನೆ. ತರಕಾರಿ ಮತ್ತು ದಿನಸಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಆರೋಗ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ: 3

ಮಕರ: ಅಧಿಕಾರ ಪ್ರಾಪ್ತಿಯಲ್ಲಿ ಶತ್ರುಗಳಿಂದ ತೊಂದರೆ. ಉದ್ಯೋಗಸ್ಥರಿಗೆ ಅಧಿಕಾರಿಗಳಿಂದ ಸಹಕಾರ. ಪತಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 9

ಕುಂಭ: ಕಟ್ಟಡಗಳ ವ್ಯವಹಾರದಲ್ಲಿ ನಿಧಾನಗತಿ. ನೂತನ ಗೃಹ ಖರೀದಿಸುವಿರಿ. ಶತ್ರು ದಮನ. ಆರೋಗ್ಯದಲ್ಲಿ ಚೇತರಿಕೆ ಕಾಣಿಸುವುದು. ಶುಭಸಂಖ್ಯೆ:7

ಮೀನ: ವ್ಯವಹಾರದಲ್ಲಿ ಉತ್ತಮ ಅವಕಾಶ. ಆರ್ಥಿಕ ಚೇತರಿಕೆ. ಕಚೇರಿಯಲ್ಲಿ ಮಾತಿನಿಂದ ಕಲಹ. ಬಂಧು ಬಾಂಧವರಿಂದ ನಿರಾಸೆ. ಶುಭಸಂಖ್ಯೆ: 1