More

    ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು: ಮಮತಾ ಬ್ಯಾನರ್ಜಿ ಪ್ರಸ್ತಾಪಕ್ಕೆ ಬೆಂಬಲ ದೊರೆತಿದ್ದೇಕೆ? ಖರ್ಗೆ ಹೇಳಿದ್ದೇನು?

    ನವದೆಹಲಿ: ಲೋಕಸಭೆ ಚುನಾವಣೆ ಮುಗಿಯುವವರೆಗೆ ಇಂಡಿಯಾ ಮೈತ್ರಿಕೂಟದ ವತಿಯಿಂದ ಪ್ರಧಾನಿ ಅಭ್ಯರ್ಥಿಯನ್ನು ಘೋಪಿಸುವುದಿಲ್ಲ ಎಂದು ನಿನ್ನೆಯಷ್ಟೇ (ಸೋಮವಾರ) ಹೇಳಿದ್ದ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್​ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಇಂದು (ಮಂಗಳವಾರ) ಉಲ್ಟಾ ಹೊಡೆದಿದ್ದಾರೆ. ಇಂಡಿಯಾ ಬಣದ ಪರವಾಗಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಎಐಸಿಸಿ ಅಧ್ಯಕ್ಷ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಮಮತಾ ಪ್ರಸ್ತಾಪಿಸುವ ಮೂಲಕ ಅಚ್ಚರಿಯ ಹೆಜ್ಜೆ ಇಟ್ಟಿದ್ದಾರೆ.

    ಇಂಡಿಯಾ ಮೈತ್ರಿಕೂಟದ ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಬ್ಯಾನರ್ಜಿ ಈ ಪ್ರಸ್ತಾಪವನ್ನು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಖರ್ಗೆ ಅವರು ದಲಿತ ಮುಖಂಡರಾಗಿರುವುದರಿಂದ ಮಮತಾ ಅವರ ಪ್ರಸ್ತಾಪಕ್ಕೆ ಮೈತ್ರಿಕೂಟದಲ್ಲಿ ಪಕ್ಷಗಳಿಂದ ವ್ಯಾಪಕ ಅನುಮೋದನೆ ಸಿಕ್ಕಿದೆ ಎನ್ನಲಾಗಿದೆ.

    ಸಭೆಯಲ್ಲಿ ಪಾಲ್ಗೊಂಡ 12 ಪಕ್ಷಗಳು ಈ ಪ್ರಸ್ತಾಪವನ್ನು ಶ್ಲಾಘಿಸಿವೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್​ ನೇತೃತ್ವದ ಈ ಮೈತ್ರಿಕೂಟದಿಂದ ಬಹುತೇಕವಾಗಿ ಹೊರಗುಳಿದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಖರ್ಗೆ ಹೆಸರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    “ದೇಶದ ಮೊದಲ ದಲಿತ ಪ್ರಧಾನಿಯನ್ನು ಹೊಂದಲು ಇದು ಒಂದು ಅವಕಾಶ” ಎಂದೂ ಕೇಜ್ರಿವಾಲ್​ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಆದರೂ ಖರ್ಗೆ ಅವರು ನಯವಾಗಿ ಈ ಪ್ರಸ್ತಾಪವನ್ನು ನಿರಾಕರಿಸುವ ಮೂಲಕ ಮಮತಾ ಅವರ ಯೋಜನೆಗೆ ತಣ್ಣೀರು ಸುರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸುದ್ದಿಗಾರರರು ಈ ವಿಷಯದ ಬಗ್ಗೆ ಖರ್ಗೆ ಅವರನ್ನು ಪ್ರಶ್ನಿಸಿದಾಗ, “ನಾವು ಮೊದಲು ಗೆಲ್ಲಬೇಕು, ಪ್ರಧಾನಿ ನಿರ್ಧಾರವನ್ನು ನಂತರ ತೆಗೆದುಕೊಳ್ಳಬಹುದು” ಎಂದು ಪ್ರತಿಕ್ರಿಯಿಸಿದ್ದಾರೆ.

    ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸದಸ್ಯರಾದ ರಾಮನಾಥ್ ಕೋವಿಂದ್ ಮತ್ತು ದ್ರೌಪದಿ ಮುರ್ಮು ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಆಡಳಿತಾರೂಢ ಬಿಜೆಪಿಯಿಂದ ಪ್ರತಿಪಕ್ಷಗಳು ತೀವ್ರ ಟೀಕೆಗಳನ್ನು ಎದುರಿಸಿವೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ದಲಿತರು ಮತ್ತು ಆದಿವಾಸಿಗಳ ವಿರುದ್ಧವಾಗಿವೆ ಎಂದು ಈ ಸಂದರ್ಭದಲ್ಲಿ ಬಿಜೆಪಿ ಆರೋಪಿಸಿತ್ತು.

    ಈ ಹಿನ್ನೆಲೆಯಲ್ಲಿ ದಲಿತ ನಾಯಕರಾಗಿರುವ ಖರ್ಗೆ ಅವರನ್ನು ಪ್ರಧಾನಿಯವರನ್ನು ಅಭ್ಯರ್ಥಿಯನ್ನಾಗಿ ಬಿಂಬಿಸುವ ಸಲಹೆಗೆ ವ್ಯಾಪಕ ಬೆಂಬಲವು ಇಂಡಿಯಾ ಮೈತ್ರಿಕೂಟದಲ್ಲಿ ವ್ಯಕ್ತವಾಗಿದೆ. ಅಲ್ಲದೆ, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸುವ ವಿಚಾರಕ್ಕೆ ಪ್ರತಿಪಕ್ಷಗಳಲ್ಲಿ ಇದುವರೆಗೂ ಒಮ್ಮತ ಮೂಡಿಲ್ಲ.

    ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಸೀಟು ಹಂಚಿಕೆ ವಿವಾದವನ್ನು ರಾಜ್ಯ ಮಟ್ಟದಲ್ಲಿ ನಿರ್ವಹಿಸಲಾಗುವುದು. ಸಮಸ್ಯೆ ಇದ್ದಲ್ಲಿ ಕೇಂದ್ರ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

    ತೃಣಮೂಲ ಕಾಂಗ್ರೆಸ್ ಮತ್ತು ಇತರ ಹಲವು ಪಕ್ಷಗಳು ಡಿಸೆಂಬರ್ 31ರಂದು ಸೀಟು ಹಂಚಿಕೆ ಮಾತುಕತೆಗೆ ಗಡುವು ನೀಡಿವೆ ಎಂದು ಮೂಲಗಳು ತಿಳಿಸಿವೆ. ಭಾರತ ಬ್ಲಾಕ್‌ನ ಮಂಗಳವಾರದ ಸಭೆಯಲ್ಲಿ 28 ಪಕ್ಷಗಳು ಭಾಗವಹಿಸಿದ್ದವು.

    ಬಿಟ್‌ಕಾಯಿನ್ ವಂಚನೆ ಯೋಜನೆಯಲ್ಲಿ ಮಹಿಳೆ ಬಂಧನ: ಈ ದಂಧೆಯಲ್ಲಿ ವಂಚಿಸಿದ ಮೊತ್ತ ಎಷ್ಟು ಸಾವಿರ ಕೋಟಿ ಗೊತ್ತೆ?

    ದಾವೂದ್ ಇಬ್ರಾಹಿಂ ಈಗ ಹೇಗೆ ಕಾಣಿಸುತ್ತಾನೆ? ಭೂಗತ ಪಾತಕಿಯ ಲೆಟೆಸ್ಟ್​ ಫೋಟೋ ನೋಡಿ….

    ಸಂಸದರ ಅಮಾತನು ಮಂಗಳವಾರವೂ ಮುಂದುವರಿರಿಕೆ: ಹಾಗಾದರೆ ಸಸ್ಪೆಂಡ್​ ಆದ ಎಂಪಿಗಳ ಸಂಖ್ಯೆ ಎಷ್ಟಾಯಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts