More

    ದಾವೂದ್ ಇಬ್ರಾಹಿಂ ಈಗ ಹೇಗೆ ಕಾಣಿಸುತ್ತಾನೆ? ಭೂಗತ ಪಾತಕಿಯ ಲೆಟೆಸ್ಟ್​ ಫೋಟೋ ನೋಡಿ….

    ನವದೆಹಲಿ: ಭೂಗತ ಪಾತಕಿ, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂಗೆ ಹಾಕಲಾಗಿದೆಯೋ, ಆತನ ಬದುಕಿದ್ದಾನೋ ಅಥವಾ ಸತ್ತಿದ್ದಾನೋ ಎಂಬ ಊಹಾಪೋಹಗಳು ಹಾಗೆಯೇ ಮುಂದುವರಿದಿವೆ.

    1993ರ ಬಾಂಬೆ ಸರಣಿ ಸ್ಫೋಟದ ಮಾಸ್ಟರ್‌ಮೈಂಡ್‌ನ ಕೆಲವೇ ಕೆಲವು ಛಾಯಾಚಿತ್ರಗಳು ಭಾರತದ ತನಿಖಾ ಸಂಸ್ಥೆಗಳ ಬಳಿ ಇವೆ. ಇವುಗಳಲ್ಲಿ ಬಹುತೇಕವಾಗಿ ಆತ ಭಾರತದಿಂದ ಪಾಕಿಸ್ತಾನಕ್ಕೆ ಪಲಾಯನ ಮಾಡುವ ಮುಂಚಿನ ಚಿತ್ರಗಳಾಗಿವೆ. ಆತನ ಲೆಟೆಸ್ಟ್​ ಚಿತ್ರಗಳು ಲಭ್ಯವಿಲ್ಲ.

    ಹಾಗಿದ್ದರೆ ದಾವೂದ್ ಇಬ್ರಾಹಿಂ ಈಗ ಹೇಗಿದ್ದಾನೆ? ಆತನ ಸದ್ಯದ ಫೋಟೋಗ್ರಾಫ್​ ಹೇಗಿದೆ? ಚಿತ್ರದಲ್ಲಿ ಆತ ವಯಸ್ಸಾದವರಂತೆ ಕಾಣುತ್ತಾನೆಯೇ ಅಥವಾ ತನ್ನ ಯೌವ್ವನವನ್ನು ಕಾಪಾಡಿಕೊಂಡಿದ್ದಾನೆಯೇ?

    ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ (ಕೃತಕ ಬುದ್ಧಿಮತ್ತೆ- ಎಐ) ಬಳಸಿಕೊಂಡು ಆತನ ಚಿತ್ರಗಳನ್ನು ರಚಿಸಲಾಗಿದೆ. ಅದರ ಪ್ರಕಾರ ಆತ ಹೇಗೆ ಕಾಣಿಸುತ್ತಾನೆ ಎಂಬ ಚಿತ್ರವನ್ನು ಇಲ್ಲಿ ನೀಡಲಾಗಿದೆ. ಈ ಚಿತ್ರ ರಚಿಸುವ ಸಂದರ್ಭದಲ್ಲಿ ಆತನ ವಯಸ್ಸು ಮತ್ತು ಆರೋಗ್ಯವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

    ಈ ಚಿತ್ರದ ಪ್ರಕಾರ ಭಾರತದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂನು ನಿಗೂಢ ಫ್ಯಾಂಟಮ್‌ನಂತೆ ಗೋಚರಿಸುತ್ತಾನೆ.

    ಪಾಕಿಸ್ತಾನದ ಕರಾಚಿಯಲ್ಲಿ ಡಿಸೆಂಬರ್ 17 ರಂದು ದಾವೂದ್ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ದೃಢೀಕರಿಸದ ವರದಿಗಳು ಹೊರಬಂದ ನಂತರ ಆತ ಮತ್ತೆ ಸುದ್ದಿಯಲ್ಲಿದ್ದಾನೆ. ತಂದನಂತರದಲ್ಲಿ ಗೂಢಚರ ಮೂಲಗಳು ಈ ವದಂತಿಗಳನ್ನು ತಳ್ಳಿಹಾಕಿವೆ.

    ದಾವೂದ್ ಇಬ್ರಾಹಿಂ 1993 ರ ಬಾಂಬೆ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ. ಈ ಸ್ಫೋಟಗಳಲ್ಲಿ 257 ಜನರು ಸಾವನ್ನಪ್ಪಿ, 750 ಮಂದಿ ಗಾಯಗೊಂಡಿದ್ದರು.

    ದಾವೂದ್ ಕ್ಲಿಕ್ಕಿಸಿದ ಕ್ಷಣ:

    1985ರವರೆಗೆ, ದಾವೂದ್ ಭಾರತದ ಅತ್ಯಂತ ಕುಖ್ಯಾತ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ, ಆದರೆ, ಅತನ ಫೋಟೋಗಳು ವಿರಳವಾಗಿದ್ದವು. ದಾವೂದ್ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದರೆ ಅವನು ಹೇಗಿದ್ದಾನೆಂದು ಯಾರಿಗೂ ತಿಳಿದಿರಲಿಲ್ಲ.

    1986 ರಲ್ಲಿ ದುಬೈನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೊಂದರಲ್ಲಿ ದಾವೂದ್, ಆತನ ಗ್ಯಾಂಗ್ ಸದಸ್ಯರು ಭಾಗವಹಿಸಿದ್ದರು. ಆಗ ಕೆಲವು ಸುದ್ದಿ ಛಾಯಾಗ್ರಾಹಕರು ಆತನ ಚಿತ್ರಗಳನ್ನು ಸೆರೆಹಿಡಿದಿದ್ದರು.

    ಪಂದ್ಯ ನಡೆಯುತ್ತಿರುವಾಗ, ಯಾರೋ ಒಬ್ಬರು “ದಾವೂದ್… ದಾವೂದ್…” ಎಂಬ ಕೂಗಿದ್ದನ್ನು ಕೇಳಿದ ಛಾಯಾಗ್ರಾಹಕರು, ಅಂಗರಕ್ಷಕರಿಂದ ಸುತ್ತುವರಿದಿರುವ ವ್ಯಕ್ತಿಯ ಕಡೆಗೆ ತಮ್ಮ ಕ್ಯಾಮೆರಾ ತಿರುಗಿಸಿದ್ದರು.

    ದಾವೂದ್ ಇರಬಹುದೆಂದು ಅರಿತು ಫೋಟೋ ತೆಗೆಯಲು ತಯಾರಿ ನಡೆಸಿದರು. ಕ್ಲಿಕ್ಕಿಸಲು ಮುಂದಾದಾಗ ದಾವೂದನ ಜತೆಗಾರರು ಛಾಯಾಗ್ರಾಹಕರನ್ನು ತಡೆದರು, ಆದರೆ ದಾವೂದ್ ಫೋಟೋ ಕ್ಲಿಕ್ಕಿಸಲು ಅವಕಾಶ ನೀಡುವಂತೆ ಅವರಿಗೆ ಸೂಚಿಸಿದ. ಈ ಮೂಲಕ ಭಾರತವು ದಾವೂದ್ ಇಬ್ರಾಹಿಂನ ಮುಖವನ್ನು ಮೊದಲ ಬಾರಿಗೆ ನೋಡಿತ್ತು.

    ಸಂಸದರ ಅಮಾತನು ಮಂಗಳವಾರವೂ ಮುಂದುವರಿರಿಕೆ: ಹಾಗಾದರೆ ಸಸ್ಪೆಂಡ್​ ಆದ ಎಂಪಿಗಳ ಸಂಖ್ಯೆ ಎಷ್ಟಾಯಿತು?

    ಟಿಎಂಸಿ ಸಂಸದನಿಂದ ಧನಖರ್​ ಮಿಮಿಕ್ರಿ, ರಾಹುಲ್​ ಗಾಂಧಿಯಿಂದ ಚಿತ್ರೀಕರಣ: ನಾಚಿಕೆಗೇಡು ಎಂದು ಹರಿಹಾಯ್ದ ಉಪರಾಷ್ಟ್ರಪತಿ

    ಬೆದರಿಸುವವ, ಅನೇಕ ಕೊಲೆಗಳಲ್ಲಿ ಭಾಗಿಯಾದವ: ಕೇರಳ ಸಿಎಂ ವಿರುದ್ಧ ರಾಜ್ಯಪಾಲ ಖಾನ್​ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts