More

    ಟಿಎಂಸಿ ಸಂಸದನಿಂದ ಧನಖರ್​ ಮಿಮಿಕ್ರಿ, ರಾಹುಲ್​ ಗಾಂಧಿಯಿಂದ ಚಿತ್ರೀಕರಣ: ನಾಚಿಕೆಗೇಡು ಎಂದು ಹರಿಹಾಯ್ದ ಉಪರಾಷ್ಟ್ರಪತಿ

    ನವದೆಹಲಿ: ಸಂಸತ್ತಿನಿಂದ ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್‌ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಸಂಸತ್ತಿನ ಆವರಣದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ತಮ್ಮನ್ನು ಅನುಕರಿಸಿ ಮಿಮಿಕ್ರಿ ಮಾಡುವುದು ಹಾಸ್ಯಾಸ್ಪದ ಮತ್ತು ಸ್ವೀಕಾರಾರ್ಹವಲ್ಲ ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನಖರ್ ಅವರು ಮಂಗಳವಾರ ಟೀಕಿಸಿದ್ದಾರೆ.

    ಕಲ್ಯಾಣ್ ಬ್ಯಾನರ್ಜಿ ಅವರು ಸಂಸತ್ತಿನ ಮಕರ ದ್ವಾರದಲ್ಲಿ ಅಮಾನತುಗೊಂಡ ಇತರ ಸಂಸದರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾಗ, ಉಪರಾಷ್ಟ್ರಪತಿ ಅವರನ್ನು ಅನುಕರಿಸಿ ಕಲ್ಯಾಣ್​ ಬ್ಯಾನರ್ಜಿ ಅವರು ಮಿಮಿಕ್ರಿ ಮಾಡುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಫೋನ್ ಬಳಸಿ ಚಿತ್ರೀಕರಿಸುತ್ತಿರುವುದು ಕಂಡುಬಂದಿದೆ.

    ಮುಂದೂಡಲಾದ ಸದನವು ಮಧ್ಯಾಹ್ನ 12 ಗಂಟೆಗೆ ಮತ್ತೆ ಸೇರುತ್ತಿದ್ದಂತೆ, ಧನಖರ್ ಅವರು ಈ ಘಟನೆಯನ್ನು ಗಮನಿಸಿದ್ದಾರೆ. “ಸಭಾಪತಿ, ರಾಜ್ಯಸಭೆ ಮತ್ತು ಸ್ಪೀಕರ್ ಕಚೇರಿ ತುಂಬಾ ವಿಭಿನ್ನವಾಗಿದೆ. ರಾಜಕೀಯ ಪಕ್ಷಗಳು ತಮ್ಮ ವಿಚಾರಧಾರೆಗಳನ್ನು ಹೊಂದಿದ್ದು, ಅವುಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಆದರೆ, ಊಹಿಸಿಕೊಳ್ಳಿ. ನಿಮ್ಮ ಪಕ್ಷದ ಹಿರಿಯ ನಾಯಕ, ಇನ್ನೊಂದು ಪಕ್ಷದ ಇನ್ನೊಬ್ಬ ಸದಸ್ಯನ ವಿಡಿಯೋ ಚಿತ್ರೀಕರಿಸುವುದು. ಸಭಾಪತಿಯ ಮಿಮಿಕ್ರಿ, ಸ್ಪೀಕರ್‌ ಮಿಮಿಕ್ರಿ. ಎಷ್ಟು ಹಾಸ್ಯಾಸ್ಪದ, ಎಷ್ಟು ನಾಚಿಕೆಗೇಡು, ಎಷ್ಟು ಸ್ವೀಕಾರಾರ್ಹವಲ್ಲ” ಎಂದು ಧನಖರ್ ಆಕ್ಷೇಪಿಸಿದರು. ಬಳಿಕ ಸದನವನ್ನು ಮಧ್ಯಾಹ್ನ 2 ಗಂಟೆಗೆ ಅವರು ಮುಂದೂಡಿದರು.

    ಏತನ್ಮಧ್ಯೆ, ಇಂಡಿಯಾ ಮೈತ್ರಿಕೂಟ ಪಕ್ಷಗಳ ಅಮಾನತುಗೊಂಡ ಸಂಸದರು ಮಂಗಳವಾರ ಬೆಳಗ್ಗೆ ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಅಮಾನತುಗೊಂಡಿರುವ ಸಂಸದರ ಜತೆಗೆ ಸೇರಿಕೊಂಡ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಮಾನತುಗೊಂಡ ಸದಸ್ಯರು ಸಂಸತ್ತಿನ ಮಕರ ದ್ವಾರದಲ್ಲೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

    ಸಂಸತ್​ ಭದ್ರತಾ ಲೋಪ ಪ್ರಕರಣ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಅವರ ಹೇಳಿಕೆಗೆ ಒತ್ತಾಯಿಸಿ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಸದಸ್ಯರು ಕೋಲಾಹಲ ಸೃಷ್ಟಿಸಿದ್ದರಿಂದ ಉಭಯ ಸದನಗಳ 78 ಸಂಸದರನ್ನು ‘ಚಳಿಗಾಲದ ಅಧಿವೇಶನ’ದ ಉಳಿದ ಅವಧಿಗೆ ಅಮಾನತುಗೊಳಿಸಿದ ಒಂದು ದಿನದ ನಂತರ ಪ್ರತಿಭಟನೆಗಳು ನಡೆಯುತ್ತಿವೆ.

    ಲೋಕಸಭೆಯಿಂದ 33 ಮತ್ತು ರಾಜ್ಯಸಭೆಯಿಂದ 45 ಸೇರಿ ಒಟ್ಟು 78 ಸಂಸದರನ್ನು ಸೋಮವಾರ ಮಾನತುಗೊಳಿಸಲಾಗಿದೆ. ಈ ಮೂಲಕ ಅಮಾನತುಗೊಂಡಿರುವ ಸಂಸದರ ಸಂಖ್ಯೆ 92ಕ್ಕೆ ಏರಿದೆ.

    ಬೆದರಿಸುವವ, ಅನೇಕ ಕೊಲೆಗಳಲ್ಲಿ ಭಾಗಿಯಾದವ: ಕೇರಳ ಸಿಎಂ ವಿರುದ್ಧ ರಾಜ್ಯಪಾಲ ಖಾನ್​ ವಾಗ್ದಾಳಿ

    ಜ್ಞಾನವಾಪಿ ಪ್ರಕರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ಹಿನ್ನಡೆ: ಪೂಜೆ, ಸಮೀಕ್ಷೆ ವಿರುದ್ಧದ ಮನವಿ ತಿರಸ್ಕರಿಸಿದ ನ್ಯಾಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts