More

    ಬಿಟ್‌ಕಾಯಿನ್ ವಂಚನೆ ಯೋಜನೆಯಲ್ಲಿ ಮಹಿಳೆ ಬಂಧನ: ಈ ದಂಧೆಯಲ್ಲಿ ವಂಚಿಸಿದ ಮೊತ್ತ ಎಷ್ಟು ಸಾವಿರ ಕೋಟಿ ಗೊತ್ತೆ?

    ನವದೆಹಲಿ: ‘ಬಿಟ್‌ಕಾಯಿನ್‌ ಪೊಂಜಿ ಸ್ಕೀಮ್‌’ (ವಂಚನೆ ಯೋಜನೆ) ಪ್ರವರ್ತಕರ ವಿರುದ್ಧ ಇತ್ತೀಚೆಗೆ ಮುಂಬೈನಲ್ಲಿ ನಡೆಸಿ, ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಮೂರು ಐಷಾರಾಮಿ ಕಾರುಗಳು ಮತ್ತು ಕೆಲವು ಆಭರಣಗಳನ್ನು ಈ ಮಹಿಳೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಂಗಳವಾರ ತಿಳಿಸಿದೆ.

    ಡಿಸೆಂಬರ್ 17 ರಂದು ಸಿಂಪಿ ಭಾರದ್ವಾಜ್ ಅಲಿಯಾಸ್ ಸಿಂಪಿ ಗೌರ್ ಎಂಬಾಕೆಯಲ್ಲಿ ಬಂಧಿಸಲಾಗಿದ್ದು, ಮರುದಿನ ಮುಂಬೈನಲ್ಲಿ ವಿಶೇಷ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನಂತರ ನ್ಯಾಯಾಲಯವು ಡಿಸೆಂಬರ್ 26 ರವರೆಗೆ ಈಕೆಯನ್ನು ಇಡಿ (ಜಾರಿ ನಿರ್ದೇಶನಾಲಯ) ಕಸ್ಟಡಿಗೆ ಕಳುಹಿಸಿದೆ.

    ‘ಗೇನ್ ಬಿಟ್‌ಕಾಯಿನ್ ಪೊಂಜಿ ಸ್ಕೀಮ್’ ಎಂದೂ ಕರೆಯಲಾಗುವ ವೇರಿಯಬಲ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಕಂಪನಿಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ.

    ಈ ಮನಿ ಲಾಂಡರಿಂಗ್ (ಕಪ್ಪು ಹಣ ವರ್ಗಾವಣೆ) ಪ್ರಕರಣದಲ್ಲಿ ಕಂಪನಿ ಮತ್ತು ಅದರ ಪ್ರವರ್ತಕರಾದ ಸಿಂಪಿ ಭಾರದ್ವಾಜ್, ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್, ವಿವೇಕ್ ಭಾರದ್ವಾಜ್, ಮಹೇಂದರ್ ಭಾರದ್ವಾಜ್ ಮತ್ತು ಹಲವಾರು MLM (ಮಲ್ಟಿ-ಲೆವೆಲ್ ಮಾರ್ಕೆಟಿಂಗ್) ಏಜೆಂಟ್‌ಗಳ ವಿರುದ್ಧ ಮಹಾರಾಷ್ಟ್ರ ಮತ್ತು ದೆಹಲಿ ಪೊಲೀಸರು ಹಲವು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

    ಈ ಕಂಪನಿಯು ಹಾಗೂ ಪ್ರವರ್ತಕರು ಬಿಟ್​ಕಾಯಿನ್​ ಹೆಸರಿನಲ್ಲಿ ಸಂಗ್ರಹಿಸಿರುವ ಮೊತ್ತ ಅಚ್ಚರಿ ಮೂಡಿಸುತ್ತದೆ. ಹೂಡಿಕೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಬಿಟ್‌ಕಾಯಿನ್ ರೂಪದಲ್ಲಿ ಅಂದಾಜು 6,600 ಕೋಟಿ ರೂಪಾಯಿಗಳನ್ನು ಇವರು ಸಂಗ್ರಹಿಸಿದ್ದಾರೆ ಎಂದು ಪೊಲೀಸ್ ದೂರುಗಳಲ್ಲಿ ಇಡಿ ಆರೋಪಿಸಿದೆ.

    ಸಿಂಪಿ ಭಾರದ್ವಾಜ್​ ಅವರ ಪತಿ ಅಜಯ್ ಭಾರದ್ವಾಜ್ ಮತ್ತು ಎಂಎಲ್‌ಎಂ ಏಜೆಂಟರು ಹೂಡಿಕೆಯ ಮೇಲೆ ಭಾರಿ ಆದಾಯದ ಭರವಸೆ ನೀಡುವ ಮೂಲಕ ಅಮಾಯಕ ಹೂಡಿಕೆದಾರರನ್ನು ಬಲೆಗೆ ಹಾಕಿಕೊಂಡು ಸಾರ್ವಜನಿಕರನ್ನು ವಂಚಿಸಿದ್ದಾರೆ ಎಂದು ತನಿಖೆಯಲ್ಲಿ ಇಡಿ ಹೇಳಿದೆ.

    ಈ ಹಗರಣದಿಂದ ಲಭ್ಯವಾದ “ಅಪರಾಧದ ಆದಾಯ”ವನ್ನು ವಿವಿಧ ಸಾಗರೋತ್ತರ ಕಂಪನಿಗಳಿಗೆ ವರ್ಗಾಯಿಸಲಾಗಿದೆ. ಅಲ್ಲದೆ, ವಿದೇಶದಲ್ಲಿ ಆಸ್ತಿಗಳನ್ನು ಖರೀದಿಸಲು ಬಳಸಲಾಗಿದೆ. ಸಿಂಪಿ ಭಾರದ್ವಾಜ್ ಅಪರಾಧದ ಆದಾಯವನ್ನು ಸೃಷ್ಟಿಸಲು, ಮರೆಮಾಚಲು ಮತ್ತು ಕಪ್ಪು ಹಣವನ್ನು ಸಕ್ರಮಗೊಳಿಸಲು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಇಡಿ ಆರೋಪಿಸಿದೆ.

    ಈ ದಾಳಿಯಲ್ಲಿ ಮರ್ಸಿಡಿಸ್ ಮತ್ತು ಆಡಿ ಸೇರಿದಂತೆ ಮೂರು ಕಾರುಗಳು, ಕೆಲವು “ಅಪರಾಧಿ” ದಾಖಲೆಗಳು ಮತ್ತು 18.91 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ 69 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕೂಡ ಜಪ್ತಿ ಮಾಡಲಾಗಿದೆ.

    ಪ್ರಮುಖ ಆರೋಪಿಗಳಾದ ಅಜಯ್ ಭಾರದ್ವಾಜ್ ಮತ್ತು ಮಹೇಂದರ್ ಭಾರದ್ವಾಜ್ ನಾಪತ್ತೆಯಾಗಿದ್ದಾರೆ ಎಂದು ಇಡಿ ತಿಳಿಸಿದೆ.

    ದಾವೂದ್ ಇಬ್ರಾಹಿಂ ಈಗ ಹೇಗೆ ಕಾಣಿಸುತ್ತಾನೆ? ಭೂಗತ ಪಾತಕಿಯ ಲೆಟೆಸ್ಟ್​ ಫೋಟೋ ನೋಡಿ….

    ಸಂಸದರ ಅಮಾತನು ಮಂಗಳವಾರವೂ ಮುಂದುವರಿರಿಕೆ: ಹಾಗಾದರೆ ಸಸ್ಪೆಂಡ್​ ಆದ ಎಂಪಿಗಳ ಸಂಖ್ಯೆ ಎಷ್ಟಾಯಿತು?

    ಟಿಎಂಸಿ ಸಂಸದನಿಂದ ಧನಖರ್​ ಮಿಮಿಕ್ರಿ, ರಾಹುಲ್​ ಗಾಂಧಿಯಿಂದ ಚಿತ್ರೀಕರಣ: ನಾಚಿಕೆಗೇಡು ಎಂದು ಹರಿಹಾಯ್ದ ಉಪರಾಷ್ಟ್ರಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts