ಮೇಷ: ಆಸ್ತಿ ವಿಚಾರದಲ್ಲಿ ಕುಟುಂಬದೊಂದಿಗೆ ತಾಳ್ಮೆ ಇರಲಿ. ಕ್ರಿಕೆಟ್, ಫುಟ್ಬಾಲ್ ಆಟಗಾರರಿಗೆ ಯಶ. ಧಾರ್ವಿುಕ ಸಮಾರಂಭದಲ್ಲಿ ಭಾಗಿ. ಶುಭಸಂಖ್ಯೆ: 9
ವೃಷಭ: ಪತ್ನಿಯ ಆರೋಗ್ಯದಲ್ಲಿ ಎಚ್ಚರ. ಪ್ರಯಾಣದಲ್ಲಿ ಆಕಸ್ಮಿಕವಾಗಿ ಧನಲಾಭ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮಾನಸಿಕ ಒತ್ತಡ. ಶುಭಸಂಖ್ಯೆ: 1
ಮಿಥುನ: ಹಿತಶತ್ರುಗಳ ಬಾಧೆ. ಲೇಖಕರು ಮತ್ತು ಪತ್ರಕರ್ತರಿಗೆ ಸಮಾಜದಲ್ಲಿ ಮನ್ನಣೆ ಸಿಗಲಿದೆ. ಆತ್ಮೀಯ ಬಂಧುಗಳ ಭೇಟಿಯಾಗುವುದು. ಶುಭಸಂಖ್ಯೆ: 5
ಕಟಕ: ದಾಂಪತ್ಯದಲ್ಲಿ ಸಾಮರಸ್ಯ ಕಾಣಿಸಿಕೊಳ್ಳುವುದು. ಸ್ವಂತ ಉದ್ಯೋಗದಲ್ಲಿ ಒತ್ತಡ ಎದುರಿಸುವಿರಿ. ಸಹೋದರರೊಂದಿಗೆ ಜಗಳ. ಶುಭಸಂಖ್ಯೆ: 2
ಸಿಂಹ: ಸಾಂಪ್ರದಾಯಿಕ ವಿದ್ಯೆಯಲ್ಲಿ ನಿರಾಸಕ್ತಿ. ಕಾರ್ವಿುಕ ವರ್ಗದವರಿಗೆ ಆರ್ಥಿಕ ಸಮಸ್ಯೆ ನಿವಾರಣೆ. ದಾಂಪತ್ಯದಲ್ಲಿ ಸಾಮರಸ್ಯ. ಶುಭಸಂಖ್ಯೆ: 7
ಕನ್ಯಾ: ಆಧ್ಯಾತ್ಮಿಕ ವಿದ್ಯೆಯಲ್ಲಿ ಆಸಕ್ತಿ. ದೂರಪ್ರಯಾಣಕ್ಕೆ ಅಧಿಕ ಖರ್ಚು. ಸೌಂದರ್ಯ ವರ್ಧಕಗಳ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 6
ತುಲಾ: ಹೂಡಿಕೆ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ. ವೈಭವೋಪೇತ ವಸ್ತುಗಳ ಖರೀದಿ. ಕಾನೂನು ವ್ಯಾಜ್ಯಗಳಲ್ಲಿ ಜಯ ಸಿಗಲಿದೆ. ಶುಭಸಂಖ್ಯೆ: 2
ವೃಶ್ಚಿಕ: ವರ್ಗದಿಂದ ಸಹಾಯ. ಬದಲಾಯಿಸಿದ ಉದ್ಯೋಗದಲ್ಲಿ ನೆಮ್ಮದಿ. ಕೌಟುಂಬಿಕ ಕಲಹ ತಾರಕಕ್ಕೆ. ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 6
ಧನಸ್ಸು: ಉದ್ಯೋಗ ನಿಮಿತ್ತ ವರ್ಗಾವಣೆ, ಸಹೋದ್ಯೋಗಿಗಳಿಂದ ಕಿರಿಕಿರಿ. ಮನೆಯಲ್ಲಿ ಶುಭ ಕಾರ್ಯಗಳಿಗೆ ಚಾಲನೆ ದೊರೆಯುವುದು. ಶುಭಸಂಖ್ಯೆ: 3
ಮಕರ: ಸಿನಿಮಾರಂಗದವರಿಗೆ ಶುಭದಾಯಕ ದಿನ. ಸಂಬಂಧಿಗಳಿಂದ ಧನಸಹಾಯ. ಯಂತ್ರೋಪಕರಣ ಗಳಿಂದ ತೊಂದರೆ. ಶುಭಸಂಖ್ಯೆ: 4
ಕುಂಭ: ಮಗನ ಭವಿಷ್ಯದ ಚಿಂತೆ. ಹಾಲು ಮತ್ತು ಬೇಕರಿ ಉತ್ಪನ್ನಗಳ ವ್ಯಾಪಾರದಲ್ಲಿ ಉತ್ತಮ ಆದಾಯ. ಔಷಧ ವ್ಯಾಪಾರಸ್ಥರಿಗೆ ನಷ್ಟ. ಶುಭಸಂಖ್ಯೆ: 8
ಮೀನ: ವಿಚ್ಛೇದಿತ ಮಹಿಳೆಯರಿಗೆ ವಿವಾಹ ಯೋಗ. ವಾಣಿಜ್ಯ ವಿದ್ಯಾರ್ಥಿಗಳಿಗೆ ಹಿನ್ನಡೆ. ರಾಜಕಾರಣಿಗಳ ಸಹಕಾರ ದೊರೆಯುವುದು. ಶುಭಸಂಖ್ಯೆ: 7