ನ್ಯೂಸ್

ಈ ರಾಶಿಯವರಿಂದು ಖರೀದಿಯಲ್ಲಿ ಎಚ್ಚರಿಕೆಯಿಂದ ಇರಿ: ನಿತ್ಯಭವಿಷ್ಯ

ಮೇಷ: ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಡ. ದೂರ ಪ್ರಯಾಣ ಸಾಧ್ಯತೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಶುಭಸಂಖ್ಯೆ: 3

ವೃಷಭ: ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು. ಉದ್ವೇಗದ ಸ್ಥಿತಿ ಉಂಟಾದೀತು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ. ಶುಭಸಂಖ್ಯೆ: 8

ಮಿಥುನ: ವ್ಯಾಪಾರಿಗಳಿಗೆ ಲಾಭವಾಗಲಿದೆ. ಮೀನುಗಾರರಿಗೆ ಶುಭದಾಯಕ ದಿನ. ಕೃಷಿಕರು ಖರೀದಿಯಲ್ಲಿ ಎಚ್ಚರಿಕೆಯಿಂದ ಇರಿ. ಶುಭಸಂಖ್ಯೆ: 5

ಕಟಕ: ಸಮಾಧಾನವಾಗಿ ವ್ಯವಹರಿಸಿ. ಸಹೋದರರಿಂದ ಕಿರಿಕಿರಿ ಉಂಟಾಗಬಹುದು. ರೈತರಿಗೆ ಆದಾಯದ ಪ್ರಮಾಣ ಹೆಚ್ಚಲಿದೆ. ಶುಭಸಂಖ್ಯೆ: 1

ಸಿಂಹ: ನ್ಯಾಯಾಲಯದ ಕೆಲಸಗಳು ಯಶಸ್ವಿ. ವಿವಾಹದ ತೀರ್ವನಗಳಲ್ಲಿ ಎಚ್ಚರವಿರಲಿ. ಪ್ರಕಾಶಕರು ಮತ್ತು ಪತ್ರಕರ್ತರಿಗೆ ಒತ್ತಡ. ಶುಭಸಂಖ್ಯೆ: 3

ಕನ್ಯಾ: ಸರ್ಕಾರಿ ಕೆಲಸಗಳು ಯಶಸ್ವಿಯಾಗಿ ನಡೆಯುವವು. ಭೂ ಸಂಬಂಧಿತ ವ್ಯವಹಾರದಲ್ಲಿ ಜಾಗರೂಕತೆ ಯಿಂದ ಇರುವುದು ಸೂಕ್ತ. ಶುಭಸಂಖ್ಯೆ: 8

ತುಲಾ: ದಾಂಪತ್ಯದಲ್ಲಿ ಸಾಮರಸ್ಯ ಇರುವುದು. ವಿದ್ಯಾರ್ಥಿಗಳಿಗೆ ಗೌರವಧನ ಪ್ರಾಪ್ತಿ. ಬ್ಯಾಂಕ್ ವ್ಯವಹಾರದಲ್ಲಿ ಯಶಸ್ವಿಯಾಗುವಿರಿ. ಶುಭಸಂಖ್ಯೆ: 2

ವೃಶ್ಚಿಕ: ನೀವು ಸಹನೆಯಿಂದ ಇದ್ದಷ್ಟು ಜಯ ನಿಮ್ಮ ಕಡೆಗೇ ಇರಲಿದೆ. ಲೇವಾದೇವಿಯಲ್ಲಿ ಮಿಶ್ರ ಫಲ. ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 9

ಧನಸ್ಸು: ಬಂಧುಗಳಿಂದ ಕಿರಿಕಿರಿ ಆಗಬಹುದು. ಪೂರ್ವ ತಯಾರಿಯ ಅಗತ್ಯವಿದೆ. ವಾದಕರಿಗೆ ಮತ್ತು ಕಲಾವಿದರಿಗೆ ವೇದಿಕೆ ಲಭ್ಯ. ಶುಭಸಂಖ್ಯೆ: 4

ಮಕರ: ತಂದೆಯ ಆರೋಗ್ಯದಲ್ಲಿ ಏರುಪೇರು ಆದೀತು. ಹೂಡಿಕೆಯಲ್ಲಿ ಹೊಸ ಪಾಲುದಾರರ ಆಗಮನ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 1

ಕುಂಭ: ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ. ಆಹಾರ ಕ್ರಮದ ಬದಲಾವಣೆಯಿಂದ ಅನಾರೋಗ್ಯ. ಅಧಿಕಾರಿಗಳಿಗೆ ಜವಾಬ್ದಾರಿ ಜಾಸ್ತಿ. ಶುಭಸಂಖ್ಯೆ: 5

ಮೀನ: ದಾಂಪತ್ಯ ಜೀವನದಲ್ಲಿ ತಾಳ್ಮೆ ಅತ್ಯವಶ್ಯಕವಾಗಿದೆ. ದೀರ್ಘ ಕಾಲದ ಕೆಲಸ ಕೈಗೂಡಲಿದೆ. ಶಿಫಾರಸ್ಸಿನ ಅಗತ್ಯವಿಲ್ಲದೆ ಪ್ರಗತಿ. ಶುಭಸಂಖ್ಯೆ: 6