ನ್ಯೂಸ್

ಈ ರಾಶಿಯವರಿಗಿಂದು ಮನೆಯಲ್ಲಿ ಸಂತಸದ ವಾತಾವರಣ: ನಿತ್ಯಭವಿಷ್ಯ

ಮೇಷ: ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಪತಿ ಪತ್ನಿಯರಲ್ಲಿ ಸಂತೋಷ. ಕುಟುಂಬ ಸೌಖ್ಯ. ಆರೋಗ್ಯದಲ್ಲಿ ಏರುಪೇರು ಆಗಬಹುದು. ಶುಭಸಂಖ್ಯೆ: 2

ವೃಷಭ: ಉದ್ಯೋಗದಲ್ಲಿ ಕಿರಿಕಿರಿ. ಚಂಚಲ ಮನಸ್ಸು. ಅಕಾಲ ಭೋಜನ. ಮನಕ್ಲೇಷ. ಸಾಲದಿಂದ ಮುಕ್ತಿ. ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 8

ಮಿಥುನ: ಯತ್ನ ಕಾರ್ಯಗಳಲ್ಲಿ ಜಯ ಸಿಗಲಿದೆ. ಸ್ತ್ರೀಯರಿಗೆ ಆಭರಣ ಪ್ರಾಪ್ತಿ. ಸ್ತ್ರೀಯರಿಂದ ನೆರವು. ಬಂಧುಗಳ ಭೇಟಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 5

ಕಟಕ: ಸ್ಥಳ ಬದಲಾವಣೆ ಸಾಧ್ಯತೆ. ಗುಪ್ತ ವಿದ್ಯೆಯಲ್ಲಿ ಆಸಕ್ತಿ. ವಿಪರೀತ ಖರ್ಚು. ರಿಯಲ್ ಎಸ್ಟೇಟ್​ನವರಿಗೆ ಲಾಭ. ದೂರ ಪ್ರಯಾಣ. ಶುಭಸಂಖ್ಯೆ: 1

ಸಿಂಹ: ವ್ಯಾಪಾರದಲ್ಲಿ ಲಾಭ ಬರುವುದು. ಪರರಿಂದ ಸಹಾಯ ಸಿಗಲಿದೆ. ಮನಃಶಾಂತಿ. ವಿವಾಹ ಯೋಗ. ಋಣಬಾಧೆಯಿಂದ ಮುಕ್ತಿ. ಶುಭಸಂಖ್ಯೆ: 9

ಕನ್ಯಾ: ವಿದ್ಯಾರ್ಥಿಗಳಿಗೆ ಹಿನ್ನಡೆಯಾಗುವ ಸಾಧ್ಯತೆ. ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ. ಮಾತಾಪಿತರಲ್ಲಿ ವಾತ್ಸಲ್ಯ. ಆಕಸ್ಮಿಕ ಧನಲಾಭ. ಶುಭಸಂಖ್ಯೆ: 6

ತುಲಾ: ಸ್ತ್ರೀ ಸಂಬಂಧ ಮನಸ್ತಾಪವಾಗಬಹುದು. ನಿಂದನೆ ಕೇಳಬೇಕಾದೀತು. ಕೋಪ ಜಾಸ್ತಿ. ಶತ್ರುಗಳಿಂದ ಬೋಧನೆ. ಅಕಾಲ ಭೋಜನ. ಶುಭಸಂಖ್ಯೆ: 6

ವೃಶ್ಚಿಕ: ಹಣಕಾಸಿನಲ್ಲಿ ನಂಬಿಕೆ ದ್ರೋಹ ಅನುಭವಕ್ಕೆ ಬರಲಿದೆ. ಶ್ರಮಕ್ಕೆ ತಕ್ಕ ಫಲ ದೊರೆತು ನೆಮ್ಮದಿ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಶುಭಸಂಖ್ಯೆ: 4

ಧನುಸ್ಸು: ಆದಾಯಕ್ಕಿಂತ ಖರ್ಚು ಜಾಸ್ತಿ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಮನಃಶಾಂತಿ. ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು. ಶುಭಸಂಖ್ಯೆ: 9

ಮಕರ: ದುರಭ್ಯಾಸಕ್ಕೆ ಹಣ ವ್ಯಯ. ಕೃಷಿಯಲ್ಲಿ ಲಾಭ. ಕಾರ್ಯಸಿದ್ದಿ. ಸ್ವಯಂಕೃತ ಅಪರಾಧದಿಂದ ಮನೋವ್ಯಥೆ ಅನುಭವಿಸುವಿರಿ. ಶುಭಸಂಖ್ಯೆ: 5

ಕುಂಭ: ದುಷ್ಟ ಜನರಿಂದ ದೂರವಿರಿ. ಬಣ್ಣದ ಮಾತಿಗೆ ಮರುಳಾಗಬೇಡಿ. ಆಪ್ತರೊಡನೆ ಕಲಹ. ವಾಹನ ಅಪಘಾತವಾದೀತು ಎಚ್ಚರ. ಶುಭಸಂಖ್ಯೆ: 8

ಮೀನ: ಮನೆಯಲ್ಲಿ ಸಂತಸದ ವಾತಾವರಣ. ಇಷ್ಟ ವಸ್ತುಗಳ ಖರೀದಿ. ಋಣವಿಮೋಚನೆಯಾಗುವುದು. ಅವಾಚ್ಯ ಶಬ್ದಗಳ ಬಳಕೆ ಬೇಡ. ಶುಭಸಂಖ್ಯೆ: 3