ನ್ಯೂಸ್

ಈ ರಾಶಿಯವರಿಗಿಂದು ಪರಿಶ್ರಮಕ್ಕೆ ತಕ್ಕ ಆದಾಯ, ಸ್ತ್ರೀಯರಿಗೆ ಚಿನ್ನಾಭರಣ ಯೋಗ: ನಿತ್ಯಭವಿಷ್ಯ

ಮೇಷ: ಮಹಿಳೆಯರಿಗೆ ಆಭರಣ ಲಾಭ. ತಂದೆಗೆ, ರೋಗಬಾಧೆೆ. ಕುಟುಂಬದಲ್ಲಿ ಅಶಾಂತಿ. ಅಕಾಲ ಭೋಜನ ಮಾಡಬೇಕಾಗುವುದು. ಶುಭಸಂಖ್ಯೆ: 1

ವೃಷಭ: ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿ. ಸಾಮಾನ್ಯ ಕೆಲಸದಲ್ಲಿ ಒತ್ತಡ ಎದುರಿಸುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ: 5

ಮಿಥುನ: ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ವಿಪರೀತ ಖರ್ಚು. ಆಲಸ್ಯ ಮನೋಭಾವ. ಮಿತ್ರರಲ್ಲಿ ಮನಸ್ತಾಪ, ಸಾಧಾರಣ ಫಲ. ಶುಭಸಂಖ್ಯೆ:3

ಕಟಕ: ಶ್ರಮಕ್ಕೆ ತಕ್ಕ ಫಲ ದೊರೆಯುವುದು. ಅವಿವಾಹಿತರಿಗೆ ವಿವಾಹ ಯೋಗ. ಶತ್ರು ನಾಶ. ಸಮಾಜದಲ್ಲಿ ಗೌರವ ದೊರೆಯುವುದು. ಶುಭಸಂಖ್ಯೆ: 8

ಸಿಂಹ: ಚಂಚಲ ಮನಸ್ಸಿನಿಂದ ಗೃಹ ನಿರ್ಮಾಣ ಮಂದಗತಿ. ಆದಾಯ ಕಡಿಮೆ. ಖರ್ಚು ಜಾಸ್ತಿ. ಮನಕ್ಲೇಷ. ಯತ್ನ ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ: 3

ಕನ್ಯಾ: ಬಂಧುಗಳಿಗೆ ಉಪಕಾರ ಮಾಡುವಿರಿ. ದುಷ್ಟ ಜನರಿಂದ ದೂರವಿರಿ. ಆಕಸ್ಮಿಕ ಖರ್ಚು. ವಿಪರೀತ ವ್ಯಸನ ಒಳ್ಳೆಯದಲ್ಲ. ಶುಭಸಂಖ್ಯೆ:3

ತುಲಾ: ಸಲ್ಲದ ಅಪವಾದ. ಅನಾರೋಗ್ಯ ಕಾಡಬಹುದು. ದಾಯಾದಿಗಳಿಂದ ತೊಂದರೆ. ಮಹಿಳಾ ಉದ್ಯೋಗಿಗಳಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 6

ವೃಶ್ಚಿಕ: ಗೆಳೆಯರಿಂದ ಅನರ್ಥವಾಗುವ ಅಪಾಯವಿದೆ. ದೃಷ್ಟಿ ದೋಷ. ವಿಪರೀತ ಖರ್ಚು. ಕಾರ್ಯ ಸಿದ್ದಿಯಾಗುವುದು. ಋಣ ಬಾಧೆ. ಶುಭಸಂಖ್ಯೆ: 2

ಧನುಸ್ಸು: ಅಧಿಕಾರ ಪ್ರಾಪ್ತಿ. ಶರೀರದಲ್ಲಿ ಆತಂಕ. ಚಂಚಲ ಮನಸ್ಸು ನಿಯಂತ್ರಿಸಿ. ಅನವಶ್ಯಕ ವಸ್ತುಗಳ ಖರೀದಿ. ಹಿರಿಯರ ಭೇಟಿ. ಶುಭಸಂಖ್ಯೆ: 4

ಮಕರ: ರಾಜಕೀಯ ರಂಗದಲ್ಲಿ ಮುನ್ನಡೆ. ಅಧಿಕ ಕೆಲಸದಿಂದ ವಿಶ್ರಾಂತಿ. ಸುಖ ಭೋಜನ. ಅಶಾಂತಿ. ತಾಳ್ಮೆಯಿಂದ ಇರುವುದು ಕ್ಷೇಮ. ಶುಭಸಂಖ್ಯೆ: 5

ಕುಂಭ: ಸಣ್ಣಪುಟ್ಟ ವಿಷಯಗಳಲ್ಲಿ ಭಿನ್ನಾಭಿಪ್ರಾಯ. ಸುಳ್ಳು ಮಾತನಾಡುವಿರಿ. ಕೈಗಾರಿಕಾ ಉದ್ಯಮಿಗಳಿಗೆ ಲಾಭವಾಗುವುದು. ಶುಭಸಂಖ್ಯೆ: 7

ಮೀನ: ಕಾರ್ಯ ಸಾಧನೆ. ಸ್ತ್ರೀಯರಿಗೆ ಚಿನ್ನಾಭರಣ ಯೋಗ. ವಿವಾಹದ ಮಾತುಕತೆ. ಪರಿಶ್ರಮಕ್ಕೆ ತಕ್ಕ ಆದಾಯ ಬರುವುದು. ಶುಭಸಂಖ್ಯೆ: 1