More

    ಅಲ್ಪಸಂಖ್ಯಾತ ವಿದ್ಯಾರ್ಥಿವೇತನದಲ್ಲಿ ಭಾರಿ ಹಗರಣ; ಅರ್ಧಕ್ಕರ್ಧ ಫಲಾನುಭವಿಗಳು ನಕಲಿ!; ಸಿಬಿಐ ತನಿಖೆಗೆ ಆದೇಶ

    ನವದೆಹಲಿ: ಅಲ್ಪಸಂಖ್ಯಾತರ ವಿದ್ಯಾರ್ಥಿವೇತನದಲ್ಲಿ ಭಾರಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದ್ದು, ಅದರಲ್ಲಿನ ಅರ್ಧಕ್ಕರ್ಧ ಫಲಾನುಭವಿಗಳು ನಕಲಿ ಎಂಬುದು ಕೂಡ ಬಹಿರಂಗಗೊಂಡಿದೆ. ಈ ಸಂಬಂಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಿಬಿಐ ತನಿಖೆಗೆ ಆದೇಶ ಮಾಡಿದ್ದಾರೆ.

    ಕಳೆದ ಐದು ವರ್ಷಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಲ್ಲಿ ಒಟ್ಟು 144.83 ಕೋಟಿ ರೂಪಾಯಿಗೂ ಅಧಿಕ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಇದು ದೇಶದ ಅತಿ ದೊಡ್ಡ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಹಗರಣವಾಗಿದ್ದು, ಫಲಾನುಭವಿಗಳ ಪೈಕಿ ಶೇ. 53ಕ್ಕೂ ಅಧಿಕ ಮಂದಿ ನಕಲಿ ಎಂಬುದು ಗೊತ್ತಾಗಿದೆ. ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ ನಡೆಸಿದ ತನಿಖೆಯಲ್ಲಿ ಸುಮಾರು 830 ಸಂಸ್ಥೆಗಳ ಮೂಲಕ ಈ ಹಗರಣ ನಡೆದಿರುವುದು ಕಂಡುಬಂದಿದೆ.

    ಇದನ್ನೂ ಓದಿ: ಅತ್ತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ನಟಿ; ಕಾರಣದ ಕುರಿತು ಸುದೀರ್ಘ ಬರಹ!

    34 ರಾಜ್ಯಗಳ 100 ಜಿಲ್ಲೆಗಳ ಒಟ್ಟು 1572 ಸಂಸ್ಥೆಗಳನ್ನು ಪರಿಶೀಲಿಸಿದಾಗ 830 ಸಂಸ್ಥೆಗಳು ಹಗರಣದಲ್ಲಿ ಶಾಮೀಲಾಗಿರುವುದು ಕಂಡುಬಂದಿದೆ. 34 ರಾಜ್ಯಗಳ ಪೈಕಿ 21 ರಾಜ್ಯಗಳಲ್ಲಿ ಈ ಪ್ರಮಾಣದ ಹಗರಣ ಬೆಳಕಿಗೆ ಬಂದಿದ್ದು, ಉಳಿದ ರಾಜ್ಯಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಸದ್ಯ ಈ 830 ಸಂಸ್ಥೆಗಳಿಗೆ ಸಂಬಂಧಿಸಿದ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಲಾಗಿದೆ.

    ಇದನ್ನೂ ಓದಿ: ಇನ್ನುಮುಂದೆ ಕರಿಮಣಿ ಮಾಲೀಕ ನಾನಲ್ಲ: ವಿಚ್ಛೇದನ ಘೋಷಿಸಿದ ಕಿರಿಕ್ ಕೀರ್ತಿ

    ಈ ಹಗರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಶೇ. 64 ಸಂಸ್ಥೆಗಳು ನಕಲಿ ಎಂಬುದುಗ ಗೊತ್ತಾಗಿದೆ. ಹಾಗೇ ಛತ್ತೀಸ್​ಗಡದಲ್ಲಿ ಪರಿಶೀಲನೆಗೆ ಒಳಪಟ್ಟ ಎಲ್ಲ 62 ಸಂಸ್ಥೆಗಳು ನಕಲಿ, ರಾಜಸ್ಥಾನದಲ್ಲಿ ಪರಿಶೀಲನೆಗೆ ಒಳಪಟ್ಟ 128 ಸಂಸ್ಥೆಗಳ ಪೈಕಿ 99 ನಕಲಿ ಇಲ್ಲವೇ ಕಾರ್ಯಾಚರಣೆಯಲ್ಲಿಲ್ಲ ಎಂಬದು ತಿಳಿದುಬಂದಿದೆ. ಅಸ್ಸಾಂನ ಶೇ. 68, ಉತ್ತರಪ್ರದೇಶದ ಶೇ. 44, ಪಶ್ಚಿಮ ಬಂಗಾಳದ ಶೇ. 39 ಸಂಸ್ಥೆಗಳು ನಕಲಿ ಎಂಬುದು ಕಂಡುಬಂದಿದೆ.

    ‘ಅಯ್ಯೋ ಪಾಪ..’ ಎಂದು ಹಣ ಹಾಕುವ ಮುನ್ನ ಹುಷಾರು: ಹೀಗೂ ವಂಚಿಸುತ್ತಾರೆ!

    ಮನೆ ಬಳಿ ಬಂದವರಿಗೆ ಸಾಕುನಾಯಿ ಕಚ್ಚಿದರೆ ಮಾಲೀಕರಿಗೆ 6 ತಿಂಗಳು ಜೈಲು, ದಂಡ: ಪೊಲೀಸರ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts