ಎತಾವ: ತಂದೆ ಮತ್ತು ತಂದೆಯ ಗರ್ಲ್ಫ್ರೆಂಡ್ ಏಕಾಂತದಲ್ಲಿ ಇರುವುದನ್ನು ನೋಡಿದ ಮಗನೊಬ್ಬ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಎತಾವದಲ್ಲಿ ನಡೆದಿದೆ.
ಘಟನೆಯ ವಿವರಣೆಗೆ ಬರುವುದಾದರೆ, ರಾಕೇಶ್ ಶಕ್ಯಾ (47) ಎಂಬುವರ 19 ವರ್ಷದ ಮಗ ಸೋಮವಾರ ರಾತ್ರಿ ಮನೆ ಬಿಡುತ್ತಾನೆ. ಇದರ ಬೆನ್ನಲ್ಲೇ ಆತನ ತಂದೆ, ಗರ್ಲ್ಫ್ರೆಂಡ್ ಜತೆ ಮನೆಯಲ್ಲಿರುವುದು ಗೊತ್ತಾಗುತ್ತದೆ.
ತಂದೆಯ ಅಕ್ರಮ ಸಂಬಂಧದ ಬಗ್ಗೆ ತಿಳಿಯುತ್ತಿದ್ದಂತೆ ಮಾರ್ಗ ಮಧ್ಯೆಯೇ ಮಗ ಮನಗೆ ಹಿಂದಿರುಗುತ್ತಾನೆ. ಈ ವೇಳೆ ತಂದೆ ಮತ್ತು ಗರ್ಲ್ಫ್ರೆಂಡ್ ಬೆತ್ತಲೆ ಸ್ಥಿತಿಯಲ್ಲಿರುವುದನ್ನು ಮಗ ನೋಡುತ್ತಾನೆ. ಇಬ್ಬರ ಅಕ್ರಮ ಸಂಬಂಧ ವಿಚಾರ ನೇರವಾಗಿಯೇ ಮಗನಿಗೆ ತಿಳಿಯುತ್ತದೆ. ಬಳಿಕ ತಂದೆ ಮತ್ತು ಮಗನ ನಡುವೆ ವಾಗ್ವಾದವೇ ನಡೆಯುತ್ತದೆ.
ತಂದೆಯ ಮಾತಿನಿಂದ ಕೋಪಗೊಂಡ ಮಗ, ತಂದೆ ಮತ್ತು ಮಹಿಳೆಗೆ ಗುಂಡಿನ ದಾಳಿ ಮಾಡಿ, ಅಲ್ಲಿಂದ ಪರಾರಿಯಾಗುತ್ತಾನೆ. ಇತ್ತ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸುತ್ತಾರೆ.
ಪ್ರಕರಣ ಸಂಬಂಧ ಮಾತನಾಡಿರುವ ಎತವಾದ ಫ್ರೆಂಡ್ಸ್ ಕಾಲನಿ ಇನ್ಸ್ಪೆಕ್ಟರ್ ಅನಿಲ್ ಕುಮಾರ್, ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಗಾಯಗೊಂಡ ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ತಂದೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)