ನ್ಯೂಸ್

ಬ್ಯಾಂಕಾಕ್​ನಿಂದ ಬಂತು ಹೊಸ ಐಫೋನ್​ 14 ಮೊಬೈಲ್; ಕಸ್ಟಮ್ಸ್​ ಅಧಿಕಾರಿಗಳು ಶಾಕ್

ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳ ಕಾರ್ಯಚಾರಣೆ ಮುಂದುವರಿದಿದೆ. ಹೊಚ್ಚ ಹೊಸ ಐಫೋನ್​ 14 ಮೊಬೈಲ್ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಆರೋಪಿ ಹೊಸ ಸರಣಿಯ ಐಫೋನ್​ 14 ಮೊಬೈಲ್​ನ್ನು ಬ್ಯಾಂಕಾಕ್​ನಿಂದ ಬೆಂಗಳೂರಿಗೆ ತಂದಿದ್ದಾನೆ. ಈ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಐಫೋನ್ 14 ಮೊಬೈಲ್​ನ್ನು ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.

ಬಂಧಿತ ಆರೋಪಿ ಬ್ಯಾಂಕಾಕ್​ನಿಂದ ತಂದಿರುವ ಐಫೋನ್​ 14 ಮೊಬೈಲ್​ನ ಭಾರತದ ಬೆಲೆ 1 ಲಕ್ಷದ 90 ಸಾವಿರ ರೂ. ಈ ಮೊಬೈಲ್ ವಿದೇಶದಲ್ಲಿ 96 ಸಾವಿರ ರೂಪಾಯಿಗೆ ಲಭ್ಯವಿದೆ. ಹೀಗಾಗಿ ಕಡಿಮೆ ಬೆಲೆಗೆ ವಿದೇಶದಿಂದ ಕಳ್ಳಸಾಗಣೆ ಮೂಲಕ ತಂದು, ಭಾರತದಲ್ಲಿ ಹೆಚ್ಚಿನ ಬೆಲೆ ಮಾರಾಟ ಮಾಡುವ ಸಿದ್ಧತೆಯಲ್ಲಿದ್ದ.

ಇದೀಗ ಕಸ್ಟಮ್ಸ್​ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ಮಾಹಿತಿಗೆ ತನಿಖೆಗೆ ಒಳಪಡಿಸಿದ್ದಾರೆ. ಕಳ್ಳ ಸಾಗಣೆ ಮೂಲಕ ಭಾರತದ ವಿಮಾನ ನಿಲ್ದಾಣ ಪ್ರವೇಶಿಸಿದ್ದ ಐಫೋನ್​ 14 ಮೊಬೈಲ್​ನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.