ನ್ಯೂಸ್

ಸ್ವತಃ ಗುಂಡು ಹಾರಿಸಿಕೊಂಡು ತೀವ್ರ ಗಾಯಗೊಂಡ ಸಿಆರ್​ಪಿಎಫ್ ಪೇದೆ

ನವದೆಹಲಿ: ಕೇಂದ್ರ ಮಿಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಸೈನಿಕನೊಬ್ಬ ಶುಕ್ರವಾರ ಬೆಳಿಗ್ಗೆ ಮಧ್ಯ ಕಾಶ್ಮೀರದ ಶ್ರೀನಗರ ಜಿಲ್ಲೆಯ ಡಾಲ್‌ಗೇಟ್‌ನಲ್ಲಿ ತನ್ನ ಸೇವಾ ರೈಫಲ್‌ನಿಂದ ಸ್ವತಃ ಗುಂಡು ಹಾರಿಸಿಕೊಂಡು ತೀವ್ರವಾಗಿ ಗಾಯಗೊಂಡಿದ್ದಾನೆ.

61 ನೇ ಬೆಟಾಲಿಯನ್‌ನ ಸಿಆರ್‌ಪಿಎಫ್ ಯೋಧ ತನ್ನ ಸೇವಾ ರೈಫಲ್‌ನಿಂದ ಸ್ವತಃ ಗುಂಡು ಹಾರಿಸಿಕೊಂಡಿದ್ದರಿಂದ ಆತ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಆತನನ್ನು ಕಾನ್‌ಸ್ಟೆಬಲ್ ಪರ್ವೀನ್ ಮುಂಡಾ ಎಂದು ಗುರುತಿಸಲಾಗಿದ್ದು, ಆತನನ್ನು ತುರ್ತು ಚಿಕಿತ್ಸೆಗಾಗಿ 92 ನೇ ಬೇಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆತನ ಈ ಆತಂಕಕಾರಿ ನಡೆಗೆ ಹಿಂದಿನ ಕಾರಣ ತಿಳಿಯಲು ಈ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.