ನ್ಯೂಸ್

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು! ಕರುಗೆ ಹಾಲುಣಿಸಲಾಗದೆ ನರಳುತ್ತಿದೆ ಮೂಕಜೀವಿ

arunakunigal

ಗದಗ: ಗೋವು ಅಂದ್ರೆ ಸಾಕ್ಷಾತ್​ ದೇವರು. ಅಂತಹ ಗೋ ಮಾತೆಯ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬಾಲ ಕತ್ತರಿಸಿ ಕೆಚ್ಚಲನ್ನ ಕೊಯ್ದಿರುವ ಅಮಾನವೀಯ ಘಟನೆ ‌ರಾಧಾಕೃಷ್ಣ ನಗರದಲ್ಲಿ ಸಂಭವಿಸಿದೆ.

ಮೂರು ದಿನಗಳ ಹಿಂದೆ ಈ ಆಕಳು ಕರುವಿಗೆ ಜನ್ಮ ನೀಡಿತ್ತು. ಭಾನುವಾರ ರಾತ್ರಿ ಕಿಡಿಗೇಡಿಗಳು ಹಸುವಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಕೆಚ್ಚಲಿಗೆ ಬಲವಾದ ಏಟು ಬಿದ್ದಿದ್ದು, ಕರುವಿಗೆ ಹಾಲು ಕುಡಿಸಲು ಆಗದ ಸ್ಥಿತಿಯಲ್ಲಿ ನರಳುತ್ತಿದೆ. ಸೋಮವಾರ ಮುಂಜಾನ ಈ ದುರ್ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿರಿ ಡಿಕೆಶಿ ಮನೆಗೆ ಶಿವರಾಜ್​ಕುಮಾರ್​ ದಿಢೀರ್ ಭೇಟಿ ನೀಡಿದ್ದೇಕೆ?

ಗೋವಿನ ಸ್ಥಿತಿ ಕಂಡು ಗೋಪಾಲಕಿ ಕಣ್ಣೀರಿಡುತ್ತಿದ್ದಾರೆ. ಗೋಹತ್ಯೆ ನಿಷೇಧದ ಬಳಿಕ‌ ಮೊದಲ ಬಾರಿಗೆ ನಗರದಲ್ಲಿ ಇಂಥ ಅಮಾನವೀಯ ಜರುಗಿದ್ದು, ಕೂಡಲೇ ಗೋವಿನ ಮೇಲೆ ಪೈಶಾಚಿಕ ಕೃತ್ಯ ಎಸಗಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.