ನ್ಯೂಸ್

ಕೋವಿಶೀಲ್ಡ್​ ಲಸಿಕೆಗೆ 200 ರೂಪಾಯಿ; 1.1 ಕೋಟಿ ಡೋಸೇಜ್​ ಖರೀದಿಸಿದ ಕೇಂದ್ರ

ನವದೆಹಲಿ: ಆಕ್ಸ್​ಫರ್ಡ್​ ಮತ್ತು ಅಸ್ತ್ರಾಜೆನೆಕಾ ಸಂಸ್ಥೆ ಜಂಟಿಯಾಗಿ ತಯಾರಿಸಿರುವ ಕೋವಿಶೀಲ್ಡ್​ ಲಸಿಕೆಯನ್ನು ಭಾರತದಲ್ಲಿ 200 ರೂಪಾಯಿ ಡೋಸೇಜ್​ಗೆ ಮಾರಾಟ ಮಾಡುವುದಾಗಿ ಲಸಿಕೆ ತಯಾರಿಸುತ್ತಿರುವ ಸಿರಂ ಇನ್ಸ್ಟಿಟ್ಯೂಟ್​ ತಿಳಿಸಿದೆ. ಸರ್ಕಾರದೊಂದಿಗೆ ಒಪ್ಪಂದದ ಮೊದಲೇ ಲಸಿಕೆಯ ದರವನ್ನು ನಿಗದಿ ಮಾಡಿದ್ದಾಗಿ ತಿಳಿಸಲಾಗಿದೆ.

ಲಸಿಕೆಯ ದರದ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಕೆಲವು ಒಪ್ಪಂದಗಳು ಬಾಕಿಯಿತ್ತು. ಇದೀಗ ಆ ಕೆಲಸವೂ ಮುಗಿದಿದೆ ಎಂದು ಸೆರಂ ಇನ್​ಸ್ಟಿಟ್ಯೂಟ್​ ತಿಳಿಸಿದೆ. 200 ರೂಪಾಯಿಯೊಂದಿಗೆ ಸಿಎಸ್​ಟಿ 10 ರೂಪಾಯಿ ಸೇರಲಿದ್ದು, 210 ರೂಪಾಯಿಗೆ ಒಂದು ಡೋಸೇಜ್​ ಲಸಿಕೆ ಮಾರಾಟವಾಗಲಿದೆ.

ಕೇಂದ್ರ ಆರೋಗ್ಯ ಸಚಿವಾಲಯದಿಂದ ಲಸಿಕೆಗೆ ಆರ್ಡರ್​ ಇದ್ದು, ಅದರಲ್ಲಿ 11 ಮಿಲಿಯನ್​ ಡೋಸೇಜ್​ ಲಸಿಕೆಯನ್ನು ಮೊದಲ ಹಂತದಲ್ಲಿ ಕಳುಹಿಸಿಕೊಡುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. ಮುಂಬರುವ ವಾರಗಳಲ್ಲಿ ಆ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)