ನ್ಯೂಸ್

ಭಾರತದಲ್ಲಿ ದಿನಕ್ಕೆ 95 ಸಾವಿರ ಜನರಿಗೆ ಕೋವಿಡ್​ ಪರೀಕ್ಷೆ

ನವದೆಹಲಿ: ದೇಶದಲ್ಲಿ ಪ್ರತಿದಿನದ ಕೋವಿಡ್​ 19 ಪರೀಕ್ಷಾ ಸಾಮರ್ಥ್ಯವನ್ನು 95 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ತಿಳಿಸಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿನ ಕರೊನಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಈ ಮಾಹಿತಿ ನೀಡಿದ್ದು, ಇದುವರೆಗೆ 332 ಸರ್ಕಾರಿ ಮತ್ತು 121 ಖಾಸಗಿ ಪ್ರಯೋಗಾಲಯಗಳ ಸಹಾಯದಿಂದ ದೇಶಾದ್ಯಂತ ಒಟ್ಟು 15.25 ಲಕ್ಷ (15,25,631) ಜನರಿಗೆ ಕೋವಿಡ್​ ಪರೀಕ್ಷೆ ಮಾಡಿರುವುದಾಗಿ ಹೇಳಿದರು.

ಇದನ್ನೂ ಓದಿ: ರಾಜ್ಯದಲ್ಲಿ ಶನಿವಾರ 41 ಹೊಸ ಕೋವಿಡ್​ ಪ್ರಕರಣಗಳು, ಒಟ್ಟು ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ತಂಬಾಕು ಆಧಾರಿತ ಪದಾರ್ಥ ತಿಂದು ಉಗುಳುವುದನ್ನು ನಿರ್ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ತನ್ಮೂಲಕ ಕರೊನಾ ಹರಡುವಿಕೆಯನ್ನು ತಡೆಗಟ್ಟಲಾಗುವುದು ಎಂದು ತಿಳಿಸಿದರು.

ಅರುಣಾಚಲಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಲ್ಯಾಂಡ್​, ತ್ರಿಪುರ ಮತ್ತು ಸಿಕ್ಕಿಂ ರಾಜ್ಯದ ಅಧಿಕಾರಿಗಳು ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಬಾಂಗ್ಲಾ ಹಿಂದುಗಳ ಮೇಲೆ ಮಿತಿಮೀರಿದೆ ದೌರ್ಜನ್ಯ- ಕಳೆದ ತಿಂಗಳ ಪಟ್ಟಿ ನೋಡಿ…

ಈಶಾನ್ಯ ರಾಜ್ಯದ ಬಹುತೇಕ ಪ್ರದೇಶಗಳು ಹಸಿರು ವಲಯದಲ್ಲಿ ಇರುವುದನ್ನು ನೋಡಲು ಸಂತೋಷವಾಗುತ್ತಿದೆ. ಅಸ್ಸಾಂ ಮತ್ತು ತ್ರಿಪುರದಲ್ಲಿ ಮಾತ್ರ ಕರೊನಾದ ಸಕ್ರಿಯ ಪ್ರಕರಣಗಳಿವೆ. ಉಳಿದ ರಾಜ್ಯಗಳೆಲ್ಲವೂ ಹಸಿರು ವಲಯದಲ್ಲಿವೆ. ಈ ಪ್ರದೇಶಗಳಲ್ಲಿರುವ ಕಿತ್ತಳೆ ವಲಯವನ್ನು ಹಸಿರು ವಲಯವಾಗಿ ಪರಿವರ್ತಿಸಲು ಪ್ರಯತ್ನಿಸಬೇಕು ಎಂದು ಈಶಾನ್ಯ ರಾಜ್ಯದ ಅಧಿಕಾರಿಗಳಿಗೆ ತಿಳಿಸಿದರು.

ತ್ರಿಪುರದಾದಲ್ಲಿ 118, ಅಸ್ಸಾಂನಲ್ಲಿ 59, ಮೇಘಾಲಯದಲ್ಲಿ 12 ಮತ್ತು ಮಣಿಪುರ ಹಾಗೂ ಮಿಜೋರಾಂನಲ್ಲಿ ತಲಾ ಒಂದೊಂದು ಕರೊನಾ ಸೋಂಕು ಪ್ರಕರಣ ಪತ್ತೆಯಾಗಿವೆ.