More

    ರಾಜ್ಯದಲ್ಲಿ ಶನಿವಾರ 41 ಹೊಸ ಕೋವಿಡ್​ ಪ್ರಕರಣಗಳು, ಒಟ್ಟು ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಶನಿವಾರ ಹೊಸದಾಗಿ ಒಟ್ಟು 41 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ.

    ಬೆಂಗಳೂರು ನಗರದಲ್ಲಿ ಗರಿಷ್ಠ 12 ಜನರಲ್ಲಿ ಸೋಂಕು ದೃಢಟ್ಟಿದ್ದರೆ, ಭಟ್ಕಳದಲ್ಲಿ 8, ದಾವಣಗೆರೆಯಲ್ಲಿ 6, ತುಮಕೂರಿನಲ್ಲಿ 4, ಬೀದರ್​, ಬಂಟ್ವಾಳ ಮತ್ತು ಚಿತ್ರದುರ್ಗದಲ್ಲಿ ತಲಾ ಮೂರು ಹಾಗೂ ವಿಜಯಪುರ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.

    ಇದನ್ನೂ ಓದಿ: ಸಿಬಿಎಸ್​ಇ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಭಾನುವಾರ ಆರಂಭ

    ಮಂಡ್ಯದಲ್ಲಿ ಮೂವರು, ಮೈಸೂರು, ಕಲಬುರಗಿ ಮತ್ತು ಬೆಂಗಳೂರು ನಗರದಲ್ಲಿ ಇಬ್ಬರು ಹಾಗೂ ತುಮಕೂರಿನ ಒಬ್ಬರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದರಿಂದಾಗಿ ಇದುವರೆಗೆ ಗುಣಮುಖರಾಗಿ ಬಿಡುಗಡೆಯಾಗಿರುವವರ ಸಂಖ್ಯೆ 377ಕ್ಕೆ ಏರಿಕೆಯಾಗಿದೆ. ಶನಿವಾರ ಸಂಜೆಯವರೆಗೆ ಒಟ್ಟು 30 ಜನರು ಮೃತಪಟ್ಟಿದ್ದಾರೆ.

    ಬೆಂಗಳೂರು ನಗರದಲ್ಲಿ ಪಿ-419 ಸೋಂಕಿತನಿಂದ ಒಟ್ಟು ಐವರಿಗೆ ಸೋಂಕು ಪ್ರಸರಣವಾಗಿದೆ. ಪಿ-454 ಸೋಂಕಿತನಿಂದ ಒಟ್ಟು ನಾಲ್ವರಿಗೆ ಸೋಂಕು ಹರಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಜೆ 5 ಗಂಟೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: 38 ದಿನ ವೆಂಟಿಲೇಟರ್​ ಹಾಕಿಸಿಕೊಂಡಿದ್ದರೂ ಕೋವಿಡ್​ ಗೆದ್ದ ಹೀರೋ!

    ದಾವಣಗೆರೆಯ ಪಿ-651ರ ಸಂಪರ್ಕಕ್ಕೆ ಬಂದಿದ್ದ ಐವರಲ್ಲಿ ಸೋಂಕು ಖಚಿತಪಟ್ಟಿದೆ. ಬಂಟ್ವಾಳದಲ್ಲಿ ಪಿ-578ರಿಂದ ಸೋಂಕು ಪ್ರಸರಣವಾಗಿದ್ದರೆ, ಭಟ್ಕಳದಲ್ಲಿ ಪಿ-659ರ ದ್ವಿತೀಯ ಸಂಪರ್ಕದಿಂದ ಸೋಂಕು ಹರಡಿದೆ. ತುಮಕೂರು ಮತ್ತು ಚಿತ್ರದುರ್ಗದಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಅಹಮದಾಬಾದ್​ಗೆ ಪ್ರಯಾಣಿಸಿದವರು ಹೆಚ್ಚಾಗಿದ್ದಾರೆ.

    ಬಾಂಗ್ಲಾ ಹಿಂದುಗಳ ಮೇಲೆ ಮಿತಿಮೀರಿದೆ ದೌರ್ಜನ್ಯ- ಕಳೆದ ತಿಂಗಳ ಪಟ್ಟಿ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts