ನ್ಯೂಸ್

ಕೆಳಗಿಳಿಯುತ್ತಿಲ್ಲ ಕರೊನಾ; ರಾಜ್ಯದಲ್ಲೀಗ 3 ಲಕ್ಷ ದಾಟಿದ ಕೋವಿಡ್​ ರೋಗಿಗಳು; 5 ಸಾವಿರ ಸಾವು

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ವ್ಯಾಪಿಸುತ್ತಿರುವುದು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಒಂದೇ ತಿಂಗಳಲ್ಲಿ ನಾಲ್ಕನೇ ಬಾರಿಗೆ ಕೋವಿಡ್​ ಪೀಡಿತರ ಸಂಖ್ಯೆ 8 ಸಾವಿರದ ಗಡಿ ದಾಟಿದೆ. ನಿನ್ನೆ ಒಟ್ಟು 8,580 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜತೆಗೆ, ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದಂತಾಗಿದೆ.

ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದ್ದು, ಒಟ್ಟು 133 ಜನರು ಮೃತಪಟ್ಟಿದ್ದಾರೆ. ಆ ಮೂಲಕ ಒಟ್ಟಾರೆ ಸಾವಿನ ಪ್ರಮಾಣವೂ 5 ಸಾವಿರ ದಾಟಿ, 5091ಕ್ಕೆ ತಲುಪಿದೆ. 7,249 ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈವರೆಗೆ ಕೋವಿಡ್​ನಿಂದ ಚೇತರಿಕೆ ಕಂಡವರ ಸಂಖ್ಯೆ 2,11,688 ಆಗಿದೆ. ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 83,608ಕ್ಕೆ ತಲುಪಿದಂತಾಗಿದೆ. ಒಟ್ಟು 760 ಜನರು ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು, ರಾಜಧಾನಿಯಲ್ಲಿಯೂ ಮತ್ತೊಮ್ಮೆ ಸೋಂಕಿತರ ಸಂಖ್ಯೆ 3 ಸಾವಿರದ ಗಡಿ ದಾಟಿದೆ. ನಿನ್ನೆ ಒಟ್ಟು 3,284 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಕೋವಿಡ್​ ರೋಗಿಗಳ ಸಂಖ್ಯೆ 1,15,371 ಆಗಿದೆ.

ಇನ್ನೊಂದೆಡೆ, 31 ಜನರು ಸಾವಿಗೀಡಾಗುವ ಮೂಲಕ 1,786 ಜನರು ಈವರೆಗೆ ಮೃತಪಟ್ಟಿದ್ದಾರೆ. ಒಟ್ಟು 2,300 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸದ್ಯ ಸಕ್ರಿಯ ಕೇಸ್​ಗಳ ಸಂಖ್ಯೆ 36,053ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಕೋವಿಡ್​ ವಿವರ