ನ್ಯೂಸ್

5,000ದ ಗಡಿ ದಾಟಿತು ಬೆಂಗಳೂರಿನಲ್ಲಿ ಕೋವಿಡ್​ 19 ಕೇಸ್​- ರಾಜ್ಯದಲ್ಲಿಂದು 1272 ಪ್ರಕರಣಗಳು

ಬೆಂಗಳೂರು: ಕರೊನಾ ಕೋವಿಡ್ 19 ಕೇಸ್​ಗಳ ಸಂಖ್ಯೆ ರಾಜ್ಯ ರಾಜಧಾನಿಯಲ್ಲಿ ದಿನೇದಿನೆ ತ್ವರಿತಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಇಂದು (ನಿನ್ನೆ ಸಂಜೆ 5ಗಂಟೆಯಿಂದ ಇಂದು ಸಂಜೆ 5 ಗಂಟೆ ಅವಧಿ) ಒಂದೇ ದಿನ 735 ಕೇಸ್​ ಖಚಿತವಾಗಿವೆ. ಇದರೊಂದಿಗೆ ರಾಜಧಾನಿಯಲ್ಲಿ ಕೋವಿಡ್ ಕೇಸ್​ಗಳ ಸಂಖ್ಯೆ 5290ಕ್ಕೆ ಏರಿಕೆಯಾಗಿದೆ. ಈ ಪೈಕಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 543. ಸಕ್ರಿಯ ಕೇಸ್​ಗಳ ಸಂಖ್ಯೆ 4649. ಮರಣ ಪ್ರಮಾಣ ಬೆಂಗಳೂರಿನಲ್ಲಿ ಇದುವರೆಗೆ 97 ಆಗಿದೆ.

ಕೋವಿಡ್​ನಿಂದಾಗಿ ಇಂದು ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 7 ಆಗಿದ್ದು, ಒಟ್ಟು ಮರಣ ಪ್ರಮಾಣ 253 ಆಗಿದೆ. ಈ ಪೈಕಿ ನಾಲ್ಕು ಕೇಸ್​ಗಳಲ್ಲಿ ಕೋವಿಡ್​ ಸೋಂಕಿತರು ಅನ್ಯ ಕಾರಣಗಳಿಗೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 16,514 ಕೇಸ್​ಗಳಾಗಿವೆ. ಸಕ್ರಿಯ ಕೇಸ್​ಗಳ ಸಂಖ್ಯೆ 8,194. ರಾಜ್ಯದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 145. ಇದುವರೆಗೆ ಒಟ್ಟು ಬಿಡುಗಡೆಯಾದವರ ಸಂಖ್ಯೆ 8063 ಆಗಿದೆ. ಐಸಿಯುನಲ್ಲಿ 292 ರೋಗಿಗಳು ಚಿಕಿತ್ಸೆಪಡೆಯುತ್ತಿದ್ದಾರೆ.

ಜಿಲ್ಲಾವಾರು ಡೇಟಾ ಗಮನಿಸಿದರೆ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಇಂದಿನ ಮಟ್ಟಿಗೆ ಟಾಪ್ 5ರ ಪಟ್ಟಿಯಲ್ಲಿ ಬಳ್ಳಾರಿ 85, ದಕ್ಷಿಣ ಕನ್ನಡ 84, ಧಾರವಾಡ 35, ಬೆಂಗಳೂರು ಗ್ರಾಮಾಂತರ 29 ಕೇಸ್​ಗಳು ಖಚಿತವಾಗಿವೆ. ಒಟ್ಟು ಪ್ರಕರಣ ಪೈಕಿ ಬೆಂಗಳೂರಿನಲ್ಲೇ ಅಧಿಕ 5290, ಕಲಬುರಗಿ 1450, ಉಡುಪಿ 1228, ಯಾದಗಿರಿ 949, ಬಳ್ಳಾರಿ 919 ಕೇಸ್​ಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ.