ನ್ಯೂಸ್

ಭಾರತದಲ್ಲಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಕರೊನಾ ರೋಗಿಗಳ ಸಂಖ್ಯೆ; 979 ಮಂದಿಯಲ್ಲಿ ಸೋಂಕು ದೃಢ, 25 ಸಾವು

ನವದೆಹಲಿ: ಕರೊನಾ ವೈರಸ್​ ಸೋಂಕಿತರ ಸಂಖ್ಯೆ ಭಾರತದಲ್ಲಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಕಾಲಕಾಲಕ್ಕೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡುತ್ತಿದೆ.

ಇಂದು ಬೆಳಗ್ಗೆ 10 ಗಂಟೆಯ ಹೊತ್ತಿಗೆ ಭಾರತದಲ್ಲಿ ಕರೊನಾ ರೋಗಿಗಳು 867 ಜನರಿದ್ದರು. ಆದರೆ ಈ ಸಂಖ್ಯೆ ಮಧ್ಯಾಹ್ನದ ವೇಳೆಗೆ 979ಕ್ಕೆ ಏರಿದೆ. ಇಲ್ಲಿಯವರೆಗೆ ಕರೊನಾದಿಂದ ಮೃತಪಟ್ಟವರು ಒಟ್ಟು 25 ಜನ.

ಕರೊನಾ ವೈರಸ್​ನಿಂದ ಇದುವರೆಗೆ ಮಹಾರಾಷ್ಟ್ರದಲ್ಲಿ 6 ಮಂದಿ, ಗುಜರಾತ್​ನಲ್ಲಿ ನಾಲ್ಕು, ಕರ್ನಾಟಕದಲ್ಲಿ ಮೂರು, ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ತಲಾ ಇಬ್ಬರು, ಕೇರಳ, ತೆಲಂಗಾಣ, ತಮಿಳುನಾಡು, ಬಿಹಾರ್​, ಪಂಜಾಬ್​, ಪಶ್ಚಿಮಬಂಗಾಳ, ಜಮ್ಮುಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

979 ಕರೊನಾ ಸೋಂಕಿತರಲ್ಲಿ 48 ಮಂದಿ ವಿದೇಶಿಗರು. ಒಟ್ಟು 86 ಜನರು ಗುಣಮುಖರಾಗಿದ್ದಾರೆ. (ಏಜೆನ್ಸೀಸ್​)