ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 35 ವರ್ಷದ ಶುಶ್ರೂಷಕನಿಗೆ ಕರೊನಾ ಪಾಸಿಟಿವ್ ಬಂದಿದೆ. ಇದು ಜಿಲ್ಲೆಯಲ್ಲಿ ಕರೊನಾ ವಾರಿಯರ್ಗೆ ಸೋಂಕು ತಗುಲಿರುವ ಮೊದಲ ಪ್ರಕರಣ. ಸೋಂಕಿತನಿಗೆ ರೋಗದ ಯಾವುದೇ ಲಕ್ಷಣವೂ ಕಂಡು ಬಂದಿಲ್ಲ. ಕೆಲಸದ ವೇಳೆ ಸುರಕ್ಷತಾ ಕ್ರಮವನ್ನೂ ಅನುಸರಿದ್ದರು. ಆದರೂ ಕೋವಿಡ್19 ದೃಢಪಟ್ಟಿದೆ!
ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡ್ನಲ್ಲಿ ಡ್ಯೂಟಿ ಮಾಡುತ್ತಿದ್ದ ಇವರನ್ನು 14 ದಿನಗಳ ಕೆಲಸದ ಬಳಿಕ ನಿಯಮದಂತೆ 14 ದಿನದ ಹೋಟೆಲ್ ಕ್ವಾರಂಟೈನ್ನಲ್ಲಿದ್ದರು. ಆ ವೇಳೆ ಕರೊನಾ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
ಸೋಂಕಿತನಿಗೆ ರೋಗದ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಪಿಪಿಇ ಕಿಟ್ ಸೇರಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಶುಶ್ರೂಷಕ ಕಾರ್ಯನಿರ್ವಹಿಸಿದ್ದ. ಆದಾಗ್ಯೂ ಸೋಂಕು ಹೇಗೆ ಹರಡಿತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ. ಸೋಂಕಿತ ಕ್ವಾರಂಟೈನ್ನಲ್ಲಿದ್ದ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ಪ್ರದೇಶ ಘೋಷಣೆಯಿಲ್ಲ.
ಇದನ್ನೂ ಓದಿರಿ VIDEO/ ಕೊನೆಗೂ ಸೇಡು ತೀರಿಸಿಕೊಂಡ ಎಮ್ಮೆ!