

ಬೆಂಗಳೂರು: ಎಮ್ಮೆಯ ಬಂಡಿ ಮೇಲೆ ಕುಳಿತು ಅಮಾನವೀಯವಾಗಿ ಹೆದ್ದಾರಿಯಲ್ಲಿ ಮನಸೋಇಚ್ಛೆ ಸವಾರಿ ಮಾಡುತ್ತ, ವೇಗವಾಗಿ ಹೋಗುವಂತೆ ಆ ಮೂಕ ಪ್ರಾಣಿಗೆ ಹೊಡೆದು ಹಿಂಸಿಸುತ್ತಿದ್ದ ವ್ಯಕ್ತಿಗಳು ಬಂಡಿ ಸಮೇತ ಪಲ್ಟಿ ಹೊಡೆದು ಶಿಕ್ಷೆ ಅನುಭವಿಸುವ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ. ಅಜಾಗರೂಕತೆಯಿಂದ ವರ್ತಿಸುತ್ತಿದ್ದ ಸವಾರರ ಮೇಲೆ ಎಮ್ಮೆ ನಯವಾಗಿಯೇ ಬುದ್ಧಿ ಕಲಿಸಿದೆ. ಇದು ಎಮ್ಮೆಯ ಸೇಡು!... ಎಂದೆಲ್ಲ ನೆಟ್ಟಿಗರು ಬಣ್ಣಿಸಿದ್ದಾರೆ.
ಇದನ್ನೂ ಓದಿರಿ ಬ್ಯಾಂಕ್ ಉದ್ಯೋಗಿಗೂ ವಕ್ಕರಿಸಿದ ಕರೊನಾ!
'ಪಾಪಾ! ಎಮ್ಮೆಯ ಬಂಡಿ ಮೇಲೆ ಕಳಿತ ಐವರು ಜೋರಾಗಿ ಲಲ್ಲೆ ಹೊಡೆಯುತ್ತ, ರೇಸ್ಗೆ ಬಿದ್ದವರಂತೆ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಸವಾರಿ ಮಾಡುತ್ತಿರುತ್ತಾರೆ. ವೇಗವಾಗಿ ಹೋಗುವಂತೆ ಸವಾರರ ಪೈಕಿ ಇಬ್ಬರು ಎಮ್ಮೆಗೆ ಹೊಡೆಯುತ್ತಲೇ ಇರುತ್ತಾರೆ. ಹಿಂದೆ ಎರಡ್ಮೂರು ಬೈಕ್ನಲ್ಲಿ ಬರುತ್ತಿದ್ದ ಸವಾರರೂ ಕೂಡ ಜೋರಾಗಿ ಹೋಗುವಂತೆ ಹುರಿದುಂಬಿಸುತ್ತಾರೆ. ಇವರ ಹಿಂಸೆ ಸಹಿಸದ ಮೂಕ ಪ್ರಾಣಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಬಲಕ್ಕೆ ಸಂಚರಿಸಿದೆ. ಆಗ ರಸ್ತೆ ವಿಭಜಕಕ್ಕೆ ತಾಗಿದ ಬಂಡಿಯು ಕೆಳಕ್ಕೆ ಅಪ್ಪಳಿಸುತ್ತದೆ. ಎಮ್ಮೆ ದೂರ ಓಡಿ ಹೋಗುತ್ತದೆ, ಪಲ್ಟಿ ಹೊಡೆದ ಸವಾರರು ಗಾಯಗೊಳ್ಳುತ್ತಾರೆ'. ಅಲ್ಲಿಗೆ ವಿಡಿಯೋ ಕೊನೆಗೊಳ್ಳುತ್ತದೆ.
ಈ ದೃಶ್ಯ ವೈರಲ್ ಆಗಿದ್ದು, 'ಪ್ರಾಣಿಗೆ ಹಿಂಸಿಸುವವರಿಗೆ ತಕ್ಕಶಾಸ್ತಿ ಆಯ್ತು, ಎಮ್ಮೆ ಪರಿಪೂರ್ಣ ಪ್ರತೀಕಾರ ತೀರಿಸಿಕೊಂಡಿತು' ಎಂದೆಲ್ಲ ಕಮೆಂಟ್ಸ್ ಬರುತ್ತಿವೆ. ಆದರೆ, ಇದು ಎಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿಲ್ಲ.
ಈ ವಿಡಿಯೋ ನೋಡಿ..