ಬೆಂಗಳೂರು: ರಾಜ್ಯದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗತೊಡಗಿದೆ. ಬರೋಬ್ಬರಿ ಎರಡು ತಿಂಗಳ ಬಳಿಕ 24 ಗಂಟೆಗಳಲ್ಲಿ ಕೇವಲ 5,041 ಪ್ರಕರಣಗಳು ಪತ್ತೆಯಾಗಿವೆ. 115 ಜನರು ಸಾವನ್ನಪ್ಪಿದ್ದಾರೆ.
ಒಂದೇ ದಿನದಲ್ಲಿ ರಾಜ್ಯಾದ್ಯಂತ 1,32,600 ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 5,041 ಜನರಿಗೆ ಕರೊನಾ ದೃಢವಾಗಿದೆ. ಸದ್ಯ ಒಟ್ಟಾರೆ ಪ್ರಕರಣಗಳ 27,77,010ಕ್ಕೆ ಏರಿದ್ದು, ಅದರಲ್ಲಿ 1.62 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯಿವೆ. ರಾಜ್ಯದಲ್ಲಿ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 3.8ಕ್ಕೆ ಕುಸಿದಿದೆ. ಮರಣ ಪ್ರಮಾಣ ಶೇ. 2.28ರಷ್ಟಿದೆ.
ಇಂದು ಬೆಂಗಳೂರಿನಲ್ಲಿ 985 ಪ್ರಕರಣ ಪತ್ತೆಯಾಗಿದೆ. ನಗರದಲ್ಲಿ 15 ಮಂದಿ ಸೋಂಕಿಗೆ ಸಾವನ್ನಪ್ಪಿದ್ದು 15,335ಕ್ಕೆ ಏರಿದೆ. 83,195 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಇನ್ನುಳಿದಂತೆ ಮೈಸೂರಿನಲ್ಲಿ 490, ದಕ್ಷಿಣ ಕನ್ನಡದಲ್ಲಿ 482, ತುಮಕೂರಿನಲ್ಲಿ 329, ಶಿವಮೊಗ್ಗದಲ್ಲಿ 282, ಚಿಕ್ಕಮಗಳೂರಿನಲ್ಲಿ 224, ಮಂಡ್ಯದಲ್ಲಿ 213 ಮತ್ತು ದಾವಣಗೆರೆಯಲ್ಲಿ 183 ಪ್ರಕರಣಗಳು ಪತ್ತೆಯಾಗಿವೆ. (ಏಜೆನ್ಸೀಸ್)