ನ್ಯೂಸ್

ಮನೆಗೇ ನುಗ್ಗಿ ಪೊಲೀಸ್​ಗೆ ಗುಂಡಿಟ್ಟು ಕೊಂದ ಉಗ್ರರು; ಕಾಶ್ಮೀರದಲ್ಲಿ ಮೂರು ದಿನಗಳಲ್ಲಿ ಮೂರನೇ ದಾಳಿ

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಮೂರು ದಿನಗಳಿಂದ ಭಯೋತ್ಪಾದಕ ದಾಳಿ ನಡೆಯುತ್ತಿದ್ದು, ಇಂದು ಉಗ್ರರ ದಾಳಿಗೆ ಪೊಲೀಸ್​ ಕಾನ್​ಸ್ಟೆಬಲ್ ಒಬ್ಬರು ಬಲಿಯಾಗಿದ್ದಾರೆ. ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಈ ಘಟನೆ ನಡೆದಿದೆ.

ಬಾರಾಮುಲ್ಲಾ ಜಿಲ್ಲೆಯ ಕರಲ್ಪೊರ ಎಂಬಲ್ಲಿನ ನಿವಾಸಿ, ಪೊಲೀಸ್ ಕಾನ್​ಸ್ಟೆಬಲ್ ಗುಲಾಮ್ ಮೊಹಮ್ಮದ್ ದಾರ್ ಉಗ್ರರಿಂದ ಹತ್ಯೆಗೀಡಾದ ವ್ಯಕ್ತಿ. ಮನೆಗೇ ನುಗ್ಗಿದ ಉಗ್ರರು ಈತನನ್ನು ಗುಂಡಿಟ್ಟು ಕೊಂದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಈತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಸಾವು ಸಂಭವಿಸಿದೆ ಎಂದು ವೈದ್ಯರು ಬಳಿಕ ಖಚಿತ ಪಡಿಸಿದ್ದಾರೆ.

ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಆರೋಪಿಗಳಿಗೆ ಹುಡುಕಾಟ ಆರಂಭಿಸಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಇದು ಮೂರು ದಿನಗಳಲ್ಲಿ ಮೂರನೇ ದಾಳಿ. ನಿನ್ನೆ ವಲಸೆ ಕಾರ್ಮಿಕರೊಬ್ಬರನ್ನು ಪುಲ್ವಾಮಾದಲ್ಲಿ ಕೊಲ್ಲಲಾಗಿತ್ತು. ಭಾನುವಾರ ಪೊಲೀಸ್ ಇನ್​ಸ್ಪೆಕ್ಟರ್​ಗೇ ಶೂಟ್ ಮಾಡಲಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು.