ನ್ಯೂಸ್

ಕಾಂಗ್ರೆಸ್​ನ 40 ಜನ ಸ್ಟಾರ್ ಪ್ರಚಾರಕರಲ್ಲಿ ಜಗದೀಶ್ ಶೆಟ್ಟರ್​ಗೆ ಸ್ಥಾನ

ಬೆಂಗಳೂರು: ಚನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ಇದೀಗ ಕಾಂಗ್ರೆಸ್ ತನ್ನ 40 ಜನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.

ಚುನಾವಣೆ ಗೆಲ್ಲುವ ದೃಷ್ಟಿಯಿಂದ ಈಗಾಗಲೇ ಎಲ್ಲಾ ಪಕ್ಷಗಳು ಒಂದು ಹಂತದ ಪ್ರಚಾರ ನಡೆಸಿವೆ. ಇದೀಗ ಕಾಂಗ್ರೆಸ್ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ನಟಿ ರಮ್ಯಾ, ಜಗದೀಶ್ ಶೆಟ್ಟರ್, ಅಶೋಕ್ ಗೆಹ್ಲೋಟ್, ಪೃಥ್ವಿರಾಜ್ ಚೌಹಾಣ್, ಮಾಜಿ ಕ್ರಿಕೆಟ್ ಆಟಗಾರ ಮೊಹಮದ್ ಅಜರ್​ವುದ್ದಿನ್, ಕನ್ಹಯ್ಯ ಕುಮಾರ್
ಮುಂತಾದವರಿಂದ ಮತದಾರರನ್ನು ಸೆಳೆಯಲು ಪ್ರಚಾರ ನಡೆಸಲು ನಿರ್ಧರಿಸಿದೆ.

ಬಿಜೆಪಿ ಪರ ಸುದೀಪ್ ಬ್ಯಾಟಿಂಗ್

ಒಂದೆಡೆ ಭರ್ಜರಿ ರೋಡ್​ ಶೋ ನಡೆಸುತ್ತಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಇನ್ನು ಬಿಜೆಪಿ ಪಕ್ಷದ ಪರ ನಟ ಕಿಚ್ಚ ಸುದೀಪ್ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಅಲ್ಲದೇ ಚುನಾವಣಾ ಮತಬೇಟೆಯ ದೃಷ್ಟಿಯಿಂದ ಈಗಾಗಲೇ 40 ಜನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ತನ್ನ ಪಕ್ಷದ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದೆ.

ಕಾಂಗ್ರೆಸ್​ನ ಸ್ಟಾರ್ ಪ್ರಚಾರಕ ಪಟ್ಟಿ ಇಂತಿದೆ