More

    ರಾಹುಲ್ ಗಾಂಧಿ ಪ್ರಧಾನಿ ಆಗುವವರೆಗೆ ಸಾಲ ನೀಡುವುದಿಲ್ಲ! ವೈರಲ್ ಆಯ್ತು ಪಾನ್ ಅಂಗಡಿ ಮುಂದಿರುವ ಬೋರ್ಡ್

    ಮಧ್ಯಪ್ರದೇಶ: ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಗ್ರಾಹಕರು ನಮಗೆ ದೇವರಿದ್ದಂತೆ-ದೇವರಿಗೆ ಸಾಲ ಕೊಡುವಷ್ಟು ನಾವು ದೊಡ್ಡವರಲ್ಲ ಎಂಬಿತ್ಯಾದಿ ಬರಹಗಳ ಬೋರ್ಡ್​ಗಳು ಅಂಗಡಿ ಮುಂದೆ ನೇತಾಡುತ್ತಿರುತ್ತವೆ. ಈ ಮೂಲಕ ಪರೋಕ್ಷವಾಗಿ ಸಾಲ ಕೊಡುವುದಿಲ್ಲ, ಹಣ ಕೊಟ್ಟು ಅಗತ್ಯ ಸಾಮಾಗ್ರಿಗಳನ್ನು ಕೊಂಡೊಯ್ಯಬಹುದು ಎಂದು ಗ್ರಾಹಕರಿಗೆ ತಿಳಿಸಲಾಗುತ್ತದೆ.

    ಇದನ್ನೂ ಓದಿ: ವಂದೇ ಭಾರತ್​ ರೈಲು ತನ್ನ ಸಾಮರ್ಥ್ಯದ ಅರ್ಧಕ್ಕಿಂತ ಕಡಿಮೆ ವೇಗದಲ್ಲಿ ಸಂಚರಿಸುತ್ತಿದೆ! ಕಾರಣ ಬಹಿರಂಗಪಡಿಸಿದ ರೈಲ್ವೇ ಇಲಾಖೆ…

    ಇದೀಗ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಕರ್ಬಲಾ ಚೌಕ್‌ನಲ್ಲಿರುವ ಪಾನ್ ಅಂಗಡಿಯ ಮಾಲೀಕ ಮೊಹಮ್ಮದ್ ಹುಸೇನ್ ಎಂಬುವರು ಗಮನ ಸೆಳೆಯುವ ರೀತಿಯಲ್ಲಿ ಪೋಸ್ಟರ್ ಒಂದನ್ನು ಅಳವಡಿಸಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಗ್ರಾಹಕರಿಗೆ ಸಾಲ ನೀಡಲು ಸಾಧ್ಯವಿಲ್ಲ ಎಂದು ಬರೆದಿರುವ ಪೋಸ್ಟರ್​ನ್ನು ಅಂಗಡಿ ಮುಂದೆ ನೇತಾಡಿಸಿದ್ದಾರೆ.

    ಫೋಟೋ ವೈರಲ್

    ಮೊಹಮ್ಮದ್ ಹುಸೇನ್ ರಾಹುಲ್​ ಗಾಂಧಿಯನ್ನು ಉಲ್ಲೇಖಿಸಿ ಹಾಕಿರುವ ಪೋಸ್ಟರ್​ನ ಫೋಟೋವನ್ನು ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು ಸಾಕಷ್ಟು ಕಮೆಂಟ್​ಗಳು ಬರುತ್ತಿವೆ. ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಭರಿತ ವ್ಯಾಖ್ಯಾನಗಳು ನಡೆಯುತ್ತಿವೆ.

    ಗ್ರಾಹಕರು ಪಾನ್ ಖರೀದು ಮಾಡುತ್ತಾರೆ. ದುಡ್ಡು ಕೇಳಿದರೆ ಸಾಲ ಬರೆದಿಟ್ಟುಕೋ ಎನ್ನುತ್ತಾರೆ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿ, ಕಳೆದ ಜನವರಿ 1ರಿಂದ ಸಾಲ ನೀಡುವುದನ್ನು ನಿಲ್ಲಿಸಿದ್ದೇನೆ ಎಂದು ಮೊಹಮ್ಮದ್ ಹುಸೇನ್ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: VIDEO | ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ವಿನಂತಿಸಿದ ಪೊಲೀಸ್; ಅಧಿಕಾರಿಯ ಕಾರ್ಯಕ್ಕೆ ಸಿಎಂ ಶ್ಲಾಘನೆ

    ರಾಹುಲ್ ಪ್ರಧಾನಿ ಆಗುವವರೆಗೆ ಸಾಲ ನೀಡಲ್ಲ!

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗುವ ಸಾಧ್ಯತೆ ಕಡಿಮೆ. ಪ್ರಧಾನಿ ಆಗಬಾರದೆಂದು ನಾನು ಹೇಳುತ್ತಿಲ್ಲ, ವಾಸ್ತವದಲ್ಲಿ ರಾಹುಲ್​ಗೆ ಪ್ರಧಾನಿ ಪಟ್ಟವೇರುವ ಅವಕಾಶ ಕಡಿಮೆ ಇದೆ. ಹೀಗಾಗಿ ರಾಹುಲ್ ಗಾಂಧಿ ಪ್ರಧಾನಿ ಆಗುವವರೆಗೆ ಸಾಲ ನೀಡುವುದಿಲ್ಲ ಎಂಬುದನ್ನು ಉಲ್ಲೇಖಿಸಿ ಬೋರ್ಡ್ ಅಳವಡಿಸಿದೆ ಎಂದು ಮೊಹಮ್ಮದ್ ಹುಸೇನ್ ಹೇಳಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಬೇಕೆಂದು ಟವರ್ ಏರಿದ ಕಾರ್ಯಕರ್ತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts