ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಕ್ರಾಂತಿಕಾರವೆನ್ನಿಸಿರುವ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್, ಅದರ ಸಾಮರ್ಥ್ಯದಲ್ಲಿ ಅರ್ಧಕ್ಕಿಂತ ಕಡಿಮೆ ವೇಗದಲ್ಲಿ ಸಂಚುರಿಸುತ್ತಿದೆ. ಈ ರೈಲಿಗೆ ಗರಿಷ್ಠ ವೇಗದಲ್ಲಿ ಸಂಚರಿಸಲು ಹಳಿಗಳು ಪೂರಕವಾಗಿಲ್ಲದಿರುವುದು ಕಾರಣ ಎಂದು ಮಾಹಿತಿ ಹಕ್ಕು ಅರ್ಜಿ (ಆರ್ಟಿಐ)ಗೆ ನೀಡಿದ ಉತ್ತರದಿಂದ ತಿಳಿದುಬಂದಿದೆ. ಮಧ್ಯಪ್ರದೇಶದ ಚಂದ್ರಶೇಖರ್ ಗೌರ್ ಸಲ್ಲಿಸಿದ ಅರ್ಜಿಗೆ ರೈಲ್ವೆ ಇಲಾಖೆ ಈ ಪ್ರತಿಕ್ರಿಯೆ ನೀಡಿದೆ.
ಇದನ್ನೂ ಓದಿ: ಬಂಗಾಳದ ಕಾರ್ಮಿಕನಿಗೆ ಕೇರಳದಲ್ಲಿ ಒಲಿಯಿತು ಅದೃಷ್ಟ; ಲಾಟರಿಯಲ್ಲಿ ಹಣ ಗೆಲ್ಲುತ್ತಿದ್ದಂತೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ!
ಹಳಿಗಳ ಗುಣಮಟ್ಟ ಕಡಿಮೆ!
- ವಂದೇ ಭಾರತ್ ರೈಲು ತಾಸಿಗೆ 180 ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ, 2021-22ರಲ್ಲಿ ಈ ರೈಲು ಸಂಚರಿಸಿದ ವೇಗ ಸರಾಸರಿ 84.48 ಕಿ.ಮೀ. 2022-23ರಲ್ಲಿ 81.38 ಕಿ.ಮೀ.
- ಮುಂಬೈ-ಶಿರಡಿ ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ನ ಗರಿಷ್ಠ ವೇಗ 64 ಕಿ.ಮೀ.
- 2019ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸಂಚಾರ ಆರಂಭವಾದ ನವದೆಹಲಿ-ವಾರಾಣಸಿ ಮಧ್ಯೆಯ ವಂದೇ ಭಾರತ ಎಕ್ಸ್ಪ್ರೆಸ್ನ ವೇಗ 95 ಕಿ.ಮೀ.
- 180 ಕಿ.ಮೀ. ಗರಿಷ್ಠ ಸಾಮರ್ಥ್ಯವಾದರೂ ಹಳಿಗಳ ಗುಣಮಟ್ಟ ಕಡಿಮೆ ಇರುವ ಕಾರಣ 130 ಕಿ.ಮೀ.ಗೆ ಅನುಮತಿ ನೀಡಲಾಗಿದೆ.
- ವಂದೇ ಭಾರತ್ ರೈಲನ್ನು ಆರ್ಡಿಎಸ್ಒ ವಿನ್ಯಾಸಗೊಳಿಸಿದ್ದು, ಚೆನ್ನೆ$ನ ಐಸಿಎಫ್ನಲ್ಲಿ ತಯಾರಾಗುತ್ತದೆ.
ಇದನ್ನೂ ಓದಿ: ಕರೊನಾದಿಂದ ಮೃತಪಟ್ಟಿದ್ದ ವ್ಯಕ್ತಿ ಎರಡು ವರ್ಷಗಳ ಬಳಿಕ ಪ್ರತ್ಯಕ್ಷನಾದ!