More

    ಸಿಲಿಕಾನ್ ಸಿಟಿಯ ಚುನಾವಣಾ ಕಣದಲ್ಲಿ ಕೋಟ್ಯಧಿಪತಿಗಳು; ಇಲ್ಲಿದೆ ಅಭ್ಯರ್ಥಿಗಳ ಕೋಟಿ ರೂ. ಆಸ್ತಿ ವಿವರ…

    ಶಂಕರ್​ ಐದು ಕಾರುಗಳ ಒಡೆಯ

    ಬಸವನಗುಡಿ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಅರಮನೆ ಶಂಕರ್​ (ಕೆ.ವಿ.ಶಂಕರ್​) 1,49,17,912 ರೂ. ಮೌಲ್ಯದ ಚರಾಸ್ತಿ ಹೊಂದಿದ್ದರೆ, ಅವರ ಪತ್ನಿ ಎನ್​.ಜೆ.ರಂಜಿತಾ ಬಳಿ 48,10,351 ರೂ. ಚರಾಸ್ತಿ ಇದೆ. ಶಂಕರ್​ ಬಳಿ 51,658 ನಗದು ಇದ್ದರೆ, ಪತ್ನಿ ಬಳಿ 19,652 ರೂ. ಇದೆ. ಶಂಕರ್​ ಬಳಿ 41,10,,000 ರೂ. ಬೆಲೆಯ 750 ಗ್ರಾಂ ಚಿನ್ನ, 4,81,620 ರೂ. ಬೆಲೆಯ 6 ಕೆಜಿ ಬೆಳ್ಳಿ ಇದ್ದರೆ, ಪತ್ನಿ ಬಳಿಯೂ 750 ಗ್ರಾಂ ಚಿನ್ನ, 7 ಕೆಜಿ ಬೆಳ್ಳಿ ಇದೆ. ಶಂಕರ್​ ಮನೆ, ಭೂಮಿ, ಕಟ್ಟಡ ಸೇರಿ ಒಟ್ಟು 5.11 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಹೆಸರಿನಲ್ಲಿ 2,70,55,750 ರೂ. ಸಾಲವಿದೆ.

    ವಾಹನ: 35.99 ಲ ರೂ. ಬೆಲೆ ಬಾಳುವ ಮರ್ಸಿಡಿಸ್​ ಬೆಂಜ್​, 9.05 ರೂ. ಬೆಲೆಯ ಮಾರುತಿ ಸಿಯಾಜ್​, 13 ಲ ಮೌಲ್ಯದ ರೆನಾಲ್ಟ್​ ಡಸ್ಟರ್​, 3.18 ಲ ಮೌಲ್ಯದ ಟಾಟಾ ಹಾಗೂ 2.55 ಲ ರೂ. ಬೆಲೆಯ ಫೀಯಟ್​ ಪುಂಟೊ ಕಾರುಗಳನ್ನು ಹೊಂದಿದ್ದಾರೆ.

    ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ಎಂಟಿಬಿ ನಾಗರಾಜ್ | 1510 ಕೋಟಿ ರೂ. ಆಸ್ತಿ ಘೋಷಣೆ; ಕಳೆದ ಬಾರಿಗಿಂತ 495 ಕೋಟಿ ರೂ. ಆಸ್ತಿ ಹೆಚ್ಚಳ

    ಆರ್​.ಕೆ.ರಮೇಶ್​ ಸ್ಥಿರಾಸ್ತಿ ಮೌಲ್ಯ 69 ಕೋಟಿ ರೂ., 28 ಕೋಟಿ ರೂ. ಸಾಲ

    ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಆರ್​.ಕೆ.ರಮೇಶ್​ ಬ್ಯಾಂಕ್​ ಠೇವಣಿ, ಹೂಡಿಕೆ, ಬೇರೆಯವರಿಂದ ಬರಬೇಕಾದ ಹಣ ಸೇರಿ 17,29,40,834 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತ್ನಿ ಆರ್​.ಶೈಲ ಹೆಸರಿನಲ್ಲಿ 3,48,94,214 ರೂ. ಹಾಗೂ ಕುಟುಂಬದ ಹೆಸರಿನಲ್ಲಿ 1,39,18,448 ರೂ. ಚರಾಸ್ತಿ ಇದೆ. ಭೂಮಿ, ಕೃಷಿ ಭೂಮಿ, ವಸತಿ ಕಟ್ಟಡ, ಜಂಟಿ ಮಾಲೀಕತ್ವದ ಕಟ್ಟಡ ಒಳಗೊಂಡಂತೆ 68,95,26,686 ರೂ. ಹಾಗೂ ಪತ್ನಿ ಹೆಸರಿನಲ್ಲಿ 3,58,88,110 ರೂ. ಬೆಲೆಯ ಸ್ಥಿರಾಸ್ತಿ ಹೊಂದಿದ್ದಾರೆ. ರಮೇಶ್​ ಹೆಸರಿನಲ್ಲಿ 27,89,27,818 ರೂ. ಸಾಲ, ಪತ್ನಿ ಹೆಸರಿನಲ್ಲಿ 3,26,44,055 ರೂ. ಸಾಲ ಹಾಗೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ 55 ಲ ರೂ. ಸಾಲವಿದೆ.

    ತಮ್ಮೇಶ್​ಗೌಡ ಬಳಿ ಬೈಕ್​ ಇದೆ, ಕಾರಿಲ್ಲ!

    ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್​.ಸಿ.ತಮ್ಮೇಶ್​ಗೌಡ ಬಳಿ ಬಜಾಜ್​ ಪಲ್ಸರ್​ ಬೈಕ್​ ಬಿಟ್ಟರೆ, ಕಾರು ಸೆರಿದಂತೆ ಬೇರೆ ಯಾವುದೇ ವಾಹನವಿಲ್ಲ. 44.03 ಲಕ್ಷ ರೂ. ಬೆಲೆಯ ಚರಾಸ್ತಿ, 1.87 ಕೋಟಿ ರೂ. ಸ್ಥಿರಾಸ್ತಿ ಮತ್ತು ಕೈಯಲ್ಲಿ 2.25 ಲಕ್ಷ ರೂ. ನಗದು ಇದೆ. ಪತ್ನಿ ಬಳಿ 41.15 ಲಕ್ಷ ರೂ. ಚರಾಸ್ತಿ, 1.87 ಕೋಟಿ ರೂ. ಸ್ಥಿರಾಸ್ತಿ, ಕೈಯಲ್ಲಿ 1.52 ಲಕ್ಷ ರೂ ಇದೆ.

    ಇದನ್ನೂ ಓದಿ: ಅತೀ ಹೆಚ್ಚು ಸಾಲ ಹೊಂದಿರುವ ಮುಖ್ಯಮಂತ್ರಿಗಳಲ್ಲಿ ಬೊಮ್ಮಾಯಿಗೆ 2ನೇ ಸ್ಥಾನ; ಸಿಎಂ ಆಸ್ತಿ ವಿವರ ಹೀಗಿದೆ…

    ಕೃಷ್ಣ ಬೈರೇಗೌಡರ ಬಳಿ ಚಿನ್ನಾಭರಣವಿಲ್ಲ!

    ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಕೃಷ್ಣ ಬೈರೇಗೌಡ ಬಳಿ ಯಾವುದೇ ಚಿನ್ನಾಭರಣಗಳಿಲ್ಲ. ಬಹುಶ@ ಯಾವ ಆಭರಣಗಳು ಇಲ್ಲ ಎಂದು ಘೋಷಿಸಿಕೊಂಡಿರುವ ಕೆಲವೇ ಅಭ್ಯರ್ಥಿಗಳಲ್ಲಿ ಕೃಷ್ಣ ಬೈರೇಗೌಡ ಪ್ರಮುಖರು. ಇನ್ನೋವಾ ಕಾರು ಹೊಂದಿರುವ ಅವರು 1.87 ಕೋಟಿ ರೂ. ಚರಾಸ್ತಿ, 3.33 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಕೋಲಾರ ಜಿಲ್ಲೆ ನರಸಾಪುರ ಹೋಬಳಿ ಗರುಡಪಾಳ್ಯ ಬಳಿ 44.17 ಎಕರೆ ಕೃಷಿಭೂಮಿ ಇದೆ. ಕಳೆದ 6 ವರ್ಷದಲ್ಲಿ 10 ಲಕ್ಷ ರೂ. ಇದ್ದ ವಾರ್ಷಿಕ ಆದಾಯ ಈಗ ರೂ.16 ಲಕ್ಷಕ್ಕೆ ಏರಿಕೆ ಆಗಿದೆ. ಅವರ ಪತ್ನಿ ಆದಾಯ ರೂ.45 ಲಕ್ಷದಿಂದ ರೂ.58 ಲಕ್ಷಕ್ಕೆ ಏರಿಕೆ ಆಗಿದೆ. ಪತ್ನಿ ಬಳಿ 380 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ ಸೇರಿ 3.52 ಕೋಟಿ ರೂ ಚರಾಸ್ತಿ, 6.44 ಕೋಟಿ ಸ್ಥಿರಾಸ್ತಿ ಇದೆ.

    ಸಹಸ್ರ ಕೋಟಿ ಒಡೆಯ ಪ್ರಿಯಕೃಷ್ಣ

    ಗೋವಿಂದರಾಜನಗರ ಕ್ಷೇತ್ರದ ಅಭ್ಯರ್ಥಿ ಪ್ರಿಯಕೃಷ್ಣ ಸಹಸ್ರ ಕೋಟಿ ಒಡೆಯರಾಗಿದ್ದಾರೆ! ಪ್ರಿಯಕೃಷ್ಣ ಬಳಿ 935 ಕೋಟಿ ರೂ. ಚರಾಸ್ತಿ, 221.83 ಕೋಟಿ ರೂ. ಸ್ಥಿರಾಸ್ತಿ ಇದೆ. 5 ವರ್ಷಗಳ ಹಿಂದೆ ಪ್ರಿಯಕೃಷ್ಣ ಆಸ್ತಿ 1,020.53 ಕೋಟಿ ರೂ.ಗಳಿತ್ತು. ಅದೀಗ, 136.3 ಕೋಟಿ ರೂ. ಹೆಚ್ಚಾಗಿದೆ. ಪ್ರಸ್ತುತ 1.40 ಕೆಜಿ ಚಿನ್ನಾಭರಣವಿದೆ. 17 ವಾಹನಗಳಿದ್ದು, ಅದರಲ್ಲಿ ಬೆನ್ಜ್​, ಆಡಿ ಸೇರಿ 10 ಕಾರುಗಳಿವೆ. ಸಾವಿರ ಕೋಟಿ ರೂ. ಆಸ್ತಿ ಹೊಂದಿದ್ದರೂ ಪ್ರಿಯಕೃಷ್ಣ 881.99 ಕೋಟಿ ರೂ. ಹೊಣೆಗಾರಿಕೆಯನ್ನೂ ಹೊಂದಿದ್ದಾರೆ.

    ಇದನ್ನೂ ಓದಿ: ತಾವೇ ಹಣ ಹಾಕಿ ಯಾಮಾರಿಸುವ ಕಿಲಾಡಿಗಳು! ಪಾರ್ಟ್​ ಟೈಮ್​ ಉದ್ಯೋಗ ಹೆಸರಿನಲ್ಲಿ ‘ಫುಲ್​ ಟೈಮ್​’ ಧೋಖಾ

    ಎಂ. ಕೃಷ್ಣಪ್ಪ ಬಳಿ 20 ಕೆಜಿ ಚಿನ್ನ, 18 ಕೆಜಿ ಬೆಳ್ಳಿ 5 ಐಷಾರಾಮಿ ಕಾರು, 5 ಟ್ರ್ಯಾಕ್ಟರ್​ ಮಾಲೀಕ

    ವಿಜಯನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಕೃಷ್ಣಪ್ಪ 399.73 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಆ ಪೈಕಿ 103.81 ಕೋಟಿ ರೂ. ಚರಾಸ್ತಿ ಆಗಿದ್ದರೆ, 295.92 ಕೋಟಿ ರೂ. ಸ್ಥಿರಾಸ್ತಿಯಾಗಿದೆ. ಅವರ ಬಳಿ ಬರೋಬ್ಬರಿ 20.5 ಕೆಜಿ ಚಿನ್ನವಿದ್ದು, 18 ಕೆಜಿ ಬೆಳ್ಳಿ ಇದೆ. ಅಲ್ಲದೆ, ಎಂ.ಕೃಷ್ಣಪ್ಪ 48.24 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಕೃಷ್ಣಪ್ಪ 8,17,118 ರೂ., ಪತ್ನಿ ಪ್ರಿಯದರ್ಶಿನಿ ಬಳಿ 1,58,926 ರೂ. ಹಾಗೂ ಕುಟುಂಬದ ಬಳಿ 1,46,100 ರೂ. ನಗದು ಇದೆ. 5 ಐಷಾರಾಮಿ ಕಾರುಗಳ ಒಡೆಯರಾಗಿರುವ ಕೃಷ್ಣಪ್ಪ, 5 ಟ್ರಾಕ್ಟರ್​ಗಳನ್ನು ಹೊಂದಿದ್ದಾರೆ. ಕೃಷ್ಣಪ್ಪ ಕುಟುಂಬ ವಿವಿಧ ಹಣಕಾಸು ಸಂಸ್ಥೆ ಮತ್ತು ವ್ಯಕ್ತಿಗಳಿಂದ 40.51 ಕೋಟಿ ರೂ. ಸಾಲ ಹಾಗೂ ಅವರ ಪತ್ನಿ ಹಸರಿನಲ್ಲಿ 36.64 ಕೋಟಿ ರೂ. ಸಾಲ ಪಡೆದಿರುವುದಾಗಿ ದಾಖಲಿಸಲಾಗಿದೆ.

    42 ಕೋಟಿ ರೂ. ಸಾಲಗಾರ ಜಮೀರ್​

    ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಜಮೀರ್​ ಅಹ್ಮದ್​ ಖಾನ್​ ಒಟ್ಟು 72 ಕೋಟಿ ರೂ. ಚರ-ಸ್ಥಿರಾಸ್ತಿ ಹೊಂದಿದ್ದರೆ, 42 ಕೋಟಿ ರೂ. ಸಾಲಗಾರರೂ ಆಗಿರುವುದನ್ನು ಅಫಿಡವಿಟ್​ನಲ್ಲಿ ಬಹಿರಂಗಪಡಿಸಿದ್ದಾರೆ. ರಾಜಾಜಿನಗರದ ಕಾಂಗ್ರೆಸ್​ ಅಭ್ಯರ್ಥಿಗೆ 1.50 ಕೋಟಿ ರೂ. ಸಾಲ ಕೊಟ್ಟು, ಒಂದು ಕೋಟಿ ರೂ. ಕೈಗಡ ಪಡೆದಿದ್ದಾರೆ. ಕಬಡ್ಡಿ ಬಾಬು ಅವರಿಂದಲೂ 50 ಲಕ್ಷ ರೂ. ಕೈಗಡ ಪಡೆದಿದ್ದಾರೆ. ಕುಪೇಂದ್ರರೆಡ್ಡಿಗೆ ಒಂದು ಕೋಟಿ ರೂ., ಆರ್​.ದಿನೇಶ್​ ಗುಂಡೂರಾವ್​ಗೆ 30 ಲಕ್ಷ ರೂ., ಚೆಲುವರಾಯಸ್ವಾಮಿಗೆ 27 ಲಕ್ಷ ರೂ. ಸೇರಿ ಒಟ್ಟು 42.93 ಕೋಟಿ ರೂ. ಸಾಲ ಪಾವತಿಸಬೇಕಾಗಿದೆ.

    ಥಾರ್​ ಮೋಟಾರ್​ ಕಾರ್​ ಸೇರಿ 6.58 ಕೋಟಿ ರೂ. ಮೌಲ್ಯದ ಚರಾಸ್ತಿ, ಪತ್ನಿ ಬಳಿ 31.31 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. ಮನೆ, ನಿವೇಶನಗಳು ಸೇರಿ ಒಟ್ಟು 65.82 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಇನ್ನೂ ದೋಷಾರೋಪ ಪತ್ರ ಸಲ್ಲಿಸಿಲ್ಲ. ಜಾರಿ ನಿರ್ದೇಶನಾಲಯದಲ್ಲೂ ಪ್ರಕರಣ ಇರುವುದನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: 77 ವರ್ಷದ ಬಳಿಕ ಗ್ರಾಮಕ್ಕೆ ಭೇಟಿ ಕೊಟ್ಟ 98 ವರ್ಷದ ವೃದ್ಧ!; ಮುಂದೆ ಆಗಿದ್ದೇನು?

    ರಾಮಲಿಂಗಾ ರೆಡ್ಡಿ ಆದಾಯದಲ್ಲಿ ಭಾರಿ ಕುಸಿತ

    ಬಿಟಿಎಂ ಲೇಔಟ್​ ಕಾಂಗ್ರೆಸ್​ ಅಭ್ಯರ್ಥಿ ರಾಮಲಿಂಗಾರೆಡ್ಡಿ ಆದಾಯದಲ್ಲಿ ಭಾರಿ ಪ್ರಮಾಣದ ಕುಸಿತವಾಗಿದೆ. 2017-18ರಲ್ಲಿ 4.10 ಕೋಟಿ ರೂ. ಆದಾಯವಿದ್ದರೆ, 2021-22ರಲ್ಲಿ 43.45 ಲಕ್ಷ ರೂ.ಗೆ ಕುಸಿದಿದೆ ಎಂದು ಅಫಿಡವಿಟ್​ನಲ್ಲಿ ನಮೂದಿಸಿದ್ದಾರೆ. ಬ್ಯಾಂಕ್​ ಠೇವಣಿ, ಹೂಡಿಕೆ, ಇನ್ನೋವಾ ಕ್ರಿಸ್ಟ ಕಾರು ಸೇರಿ 21.23 ಕೋಟಿ ರೂ. ಚರಾಸ್ತಿ ಇದೆ.

    ಪತ್ನಿ ಬಳಿ ಒಂದೂವರೆ ಕೆಜಿ ಬಂಗಾರ, ಒಂಬತ್ತೂವರೆ ಕೆಜಿ ಬೆಳ್ಳಿ ಸೇರಿ 14.89 ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ. ರಾಮಲಿಂಗಾ ರೆಡ್ಡಿ ಮನೆ, ನಿವೇಶನಗಳ ಸಹಿತ 58.07 ಕೋಟಿ ರೂ., ಪತ್ನಿ 6.47 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗೆ ಮಾಲೀಕರಾಗಿದ್ದಾರೆ. ವಿವಿಧ ಹಣಕಾಸು ಸಂಸ್ಥೆಗಳಲ್ಲಿ 27.02 ಕೋಟಿ ರೂ., ಪತ್ನಿ 8.06 ಕೋಟಿ ರೂ. ಸಾಲ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts