More

    77 ವರ್ಷದ ಬಳಿಕ ಗ್ರಾಮಕ್ಕೆ ಭೇಟಿ ಕೊಟ್ಟ 98 ವರ್ಷದ ವೃದ್ಧ!; ಮುಂದೆ ಆಗಿದ್ದೇನು?

    ಪಂಜಾಬ್​: ಕೆಲವೊಮ್ಮೆ ವಿಚಿತ್ರ ಮತ್ತು ವಿಭಿನ್ನ ಸಂಗತಿಗಳು ಸುದ್ದಿಯಾಗುತ್ತಲೇ ಇರುತ್ತವೆ. ಹೀಗೆ ಇಲ್ಲೊಬ್ಬ 98 ವರ್ಷದ ಪಂಜಾಬ್ ಮೂಲದ ವೃದ್ಧ 77 ವರ್ಷದ ಬಳಿಕ ತನ್ನ ಪೂರ್ವಜರ ಗ್ರಾಮಕ್ಕೆ ಭೇಟಿ ಕೊಟ್ಟು ಸುದ್ದಿಯಾಗಿದ್ದಾರೆ.

    ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಬಳಿಕ ಗಡಿಯಾಚೆಗೆ ಹೋಗಲು ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದರು. ಅವರಲ್ಲಿ ಪಂಜಾಬ್ ಮೂಲದ 98 ವರ್ಷದ ಬಾಬಾ ಪುರಾನ್ ಸಿಂಗ್ ಕೂಡ ಸೇರಿದ್ದು ಇತ್ತೀಚೆಗೆ ಅವರು 77 ವರ್ಷಗಳ ನಂತರ ಪಾಕಿಸ್ತಾನದ ತನ್ನ ಪೂರ್ವಜರ ಗ್ರಾಮಕ್ಕೆ ಭೇಟಿ ನೀಡಿದರು. ಪಾಕಿಸ್ತಾನದ ಗುಜ್ರಾನ್‌ವಾಲಾ ಜಿಲ್ಲೆಯ ಕೋಟ್‌ ದೇಸ್‌ರಾಜ್‌ನ ಕಿರಿದಾದ ಬೀದಿಗಳಲ್ಲಿ ಅವರು ಹೋಗುತ್ತಿದ್ದಂತೆ ಗ್ರಾಮದ ಜನರು ಅವರನ್ನು ಸ್ವಾಗತಿಸಿದರು. ತುಂಬಾ ಹೃದಯಸ್ಪರ್ಶಿ ವಿಡಿಯೋ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

    ಡೋಲ್ ಬಾರಿಸುತ್ತಾ, ತಮ್ಮ ಮನೆಗಳ ಛಾವಣಿಯಿಂದ ಮಹಿಳೆಯರು ಹೂಮಳೆ ಸುರಿಸಿ, ಬಾಬಾ ಪುರಾನ್ ಸಿಂಗ್ ಅವರಿಗೆ ಹಾರ ಹಾಕಿ ಭರ್ಜರಿಯಾಗಿ ಸ್ವಾಗತಿಸಿದರು. ಅವರೆಲ್ಲಾ ಹಳ್ಳಿಯ ಹುಡುಗನೊಬ್ಬ ಊರು ನೋಡಲು ಬಂದಿದ್ದಾನೆ ಎಂದರು. ಬಾಬಾ ಪುರಾನ್ ಸಿಂಗ್ ಚಿಕ್ಕವರಿದ್ದಾಗ ತಮ್ಮೊಂದಿಗಿದ್ದವರ ಹೆಸರುಗಳನ್ನು ನೆನಪಿಸಿಕೊಂಡು ಈಗ ಅವರು ಎಲ್ಲಿದ್ದಾರೆ ಎಂದು ಕೇಳಿದ್ದಾರೆ.

    ಇದನ್ನೂ ಓದಿ: ಮಕ್ಕಳಿಗೆ RCB ಜರ್ಸಿ ತೊಡಿಸಿ ಫೋಟೋಶೂಟ್ ಮಾಡಿಸಿದ ನಟಿ ಅಮೂಲ್ಯ
    ಪುರಾನ್ ಸಿಂಗ್ ಅವರು 21 ವರ್ಷದವರಾಗಿದ್ದಾಗ ಪಾಕಿಸ್ತಾನದ ತಮ್ಮ ಹಳ್ಳಿಯನ್ನು ತೊರೆದರು. ಹಳ್ಳಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗುವ ದಾರಿ ಇನ್ನೂ ನೆನಪಿದೆಯೇ ಎಂದು ಕೇಳಿದಾಗ, ಈಗ ರಸ್ತೆಗಳು ಬದಲಾಗಿವೆ ಎಂದು ಅವರು ಹೇಳುತ್ತಾರೆ. ಮೊದಲು ತಮ್ಮ ಗ್ರಾಮದಿಂದ ಹತ್ತಿರದ ಸ್ಥಳಗಳಿಗೆ ನೇರ ಮಾರ್ಗವಿದ್ದುದರಿಂದ ಎಲ್ಲೆಂದರಲ್ಲಿ ಕಾಲ್ನಡಿಗೆಯಲ್ಲಿಯೇ ಪ್ರಯಾಣಿಸುತ್ತಿದ್ದರು ಎಂದು ತಮ್ಮ ಹಳ್ಳಿಯಲ್ಲಿ ತಾವು ಕಳೆದ ಕ್ಷಣಗಳನ್ನು ನೆನೆಪಿಸಿಕೊಂಡಿದ್ದಾರೆ.

    ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ ಕಿಚ್ವ ಸುದೀಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts