More

  ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ ಕಿಚ್ವ ಸುದೀಪ್

  – ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ‌ ಜತೆಗೆ ರೋಡ್ ಶೋನಲ್ಲಿ ಭಾಗಿ
  – ಮೇ 7ರವರೆಗೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಾಧ್ಯತೆ

  ಬೆಂಗಳೂರು: ನಿರೀಕ್ಷೆಯಂತೆ ಖ್ಯಾತ ನಟ ಕಿಚ್ಚ ಸುದೀಪ್ ತಮ್ಮ ನೆಚ್ಚಿನ ‘ಮಾಮ’ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪ್ರತಿನಿಧಿಸುವ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಿಂದ ಚುನಾವಣಾ ಪ್ರಚಾರ ಬುಧವಾರ ಆರಂಭಿಸಲಿದ್ದಾರೆ.

  ಸಿಎಂ ಬೊಮ್ಮಾಯಿ‌ ಇಂದು ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಭರ್ಜರಿ ರೋಡ್ ಶೋ, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವ ಕಮಲ ಪಡೆಯ ಅಧಿಕೃತ ಸಮರಾಂಗಣ ಪ್ರವೇಶವನ್ನು ಸಾರಲಿದ್ದು, ಪ್ರತಿಸ್ಪರ್ಧಿಗಳಿಗೆ ಸ್ವಕ್ಷೇತ್ರದಲ್ಲೇ ರಣವೀಳ್ಯ ನೀಡಲಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಂಡು ಕಾರ್ಯಕರ್ತರಿಗೆ ಹುರಿದುಂಬಿಸಲಿದ್ದಾರೆ.

  ಇದನ್ನೂ ಓದಿ: ದಯವಿಟ್ಟು ಮದುವೆಗೆ ಬರಬೇಡಿ…ಲಗ್ನ ಪತ್ರಿಕೆ ನೋಡಿ ಅತಿಥಿಗಳು ಹೇಳಿದ್ದೇನು..?

  ಸಿಎಂ ಬೊಮ್ಮಾಯಿ‌ ಅವರ ರೋಡ್ ಶೋ, ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲೆಂದು ಶಿಗ್ಗಾಂವಿಗೆ ತೆರಳುವ ಮುನ್ನ ಕಿಚ್ಚ ಸುದೀಪ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ ಹೊಸದೇನಲ್ಲ‌. ಹಿಂದೆಯೂ ಅನೇಕ ಸ್ನೇಹಿತರ ಪರವಾಗಿ ಪ್ರಚಾರ ಮಾಡಿದ್ದೆ ಎಂದರು.

  ಇದನ್ನೂ ಓದಿ: ಸೀರೆ ಧರಿಸಿ 42.5 ಕಿಮೀ ಮ್ಯಾರಾಥಾನ್​ನಲ್ಲಿ ಓಡಿದ ಮಹಿಳೆ
  ಪ್ರತಿ ಬಾರಿ ಚುನಾವಣೆಯಲ್ಲಿ ಯಾರಾದರೂ ಒಬ್ಬರು ಪ್ರಚಾರ ಮಾಡಲು ಆಹ್ವಾನಿಸುತ್ತಾರೆ. ಈ ಸಲ ಬಿಜೆಪಿ ಆಯ್ಕೆ ಮಾಡಿಕೊಂಡಿರುವೆ. ಮೇ 7ರವರೆಗೆ ಪ್ರಚಾರದಲ್ಲಿ ಭಾಗವಹಿಸಲು ಯೋಚಿಸಿರುವೆ. ಸಿಎಂ ಬೊಮ್ಮಾಯಿ‌ ಸೂಚಿಸಿದ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವೆ ಎಂದು ನಟ ಸುದೀಪ್ ಪುನರುಚ್ಚರಿಸಿದರು.

  ವಿಮಾನ ತುರ್ತು ಲ್ಯಾಂಡಿಂಗ್​; ಏರ್ ಇಂಡಿಯಾ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts