Threatened : ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬ ತನ್ನ ವಿರುದ್ಧ ತೀರ್ಪು ನೀಡಿದ ನ್ಯಾಯಧೀಶೆಗೆ ಬೆದರಿಕೆ ಹಾಕಿದ ಘಟನೆ ದೆಹಲಿ ಕೋರ್ಟ್ವೊಂದರಲ್ಲಿ ಸೋಮವಾರ ನಡೆದಿದೆ.
ದೆಹಲಿಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಎನ್‌ಐಆಕ್ಟ್) ಶಿವಂಗಿ ಮಂಗಳಾ ಅವರ ಮುಂದೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 138 ರ ಅಡಿಯಲ್ಲಿ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದೆ. ಅಲ್ಲದೆ, ಶಿಕ್ಷೆಯ ಬಳಿಕ, ಆರೋಪಿಗೆ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 437 ಎ ಅಡಿಯಲ್ಲಿ ಜಾಮೀನು ಬಾಂಡ್‌ಗಳನ್ನು ಒದಗಿಸುವಂತೆ ನ್ಯಾಯಾಧೀಶರು ಸೂಚಿಸಿದರು.
ಆದರೆ, ತೀರ್ಪಿನಿಂದ ಕುಪಿತಗೊಂಡ ಅಪರಾಧಿಯು ನ್ಯಾಯಾಧೀಶರತ್ತ ವಸ್ತುವನ್ನು ಎಸೆಯಲು ಪ್ರಯತ್ನಿಸಿದಾಗ ಪರಿಸ್ಥಿತಿ ನಾಟಕೀಯ ಘಟನೆ ನಡೆದಿದೆ. ತೀರ್ಪು ರದ್ದಾಗಲು ''ಏನು ಬೇಕಾದರೂ ಮಾಡಿ" ಎಂದು ತಮ್ಮ ವಕೀಲರಿಗೆ ಸೂಚಿಸಿದ ಆರೋಪಿ, ನೀವು ಯಾರು? ನನ್ನನ್ನು ಹೊರಗೆ ಭೇಟಿ ಬನ್ನಿ ಮತ್ತು ನೀವು ಹೇಗೆ ಮನೆಗೆ ಹಿಂದಿರುಗಿಸುತ್ತೀರಿ ಎಂದು ನೋಡೋಣ ಎಂದು ನ್ಯಾಯಧೀಶೆಗೆ ಬೆದರಿಕೆ ಹಾಕಿದ್ದಾನೆ ಎಂದು ವರದಿ ಉಲ್ಲೇಖಿಸಿದೆ.
ಆರೋಪಿ ಮತ್ತು ಆತನ ವಕೀಲ ಅತುಲ್ ಕುಮಾರ್ ಬೆದರಿಕೆ ಹಾಕಿದ್ದಲ್ಲದೆ, ತನ್ನ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರುವ ಪ್ರಯತ್ನದಲ್ಲಿ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನೂ ನೀಡಿದ್ದಾರೆ ಎಂದು ನ್ಯಾಯಮೂರ್ತಿ ಮಂಗಳಾ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಸ್ಪಾಡೆಕ್ಸ್ ಡಾಕಿಂಗ್ ಮಿಷನ್ ಪೂರ್ಣಗೊಳಿಸಿದ ಇಸ್ರೋ| ಎರಡನೇ ಬಾರಿಗೆ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆ| Isro
"ಬೆದರಿಕೆ ಮತ್ತು ಕಿರುಕುಳಕ್ಕಾಗಿ ದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಆರೋಪಿಗಳ ವಿರುದ್ಧ ಕೆಳಗೆ ಸಹಿ ಮಾಡಿರುವವರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.(ಏಜೆನ್ಸೀಸ್)