RSS : ಆರ್ಎಸ್ಎಸ್ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಗುರುಕುಲ ಶಿಕ್ಷಣವನ್ನು ಮುಖ್ಯವಾಹಿನಿ ಶಿಕ್ಷಣಕ್ಕೆ ಸೇರಿಸಬೇಕು ಎಂದು ಗುರುವಾರ ಒತ್ತಾಯಿಸಿದ್ದು, ಗುರುಕುಲ ಶಿಕ್ಷಣವು ಆಶ್ರಮದಲ್ಲಿ ವಾಸಿಸುವುದರ ಬಗ್ಗೆ ಅಲ್ಲ, ಬದಲಾಗಿ ದೇಶದ ಸಾಂಪ್ರದಾಯಗಳ ಬಗ್ಗೆ ಕಲಿಯುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಭಾಗವತ್ ಸಂಸ್ಕೃತವನ್ನು ಕಡ್ಡಾಯಗೊಳಿಸುವ ಬದಲು ದೇಶದ ಸಾಂಪ್ರದಯ ಹಾಗೂ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಇಂದಿನ ತಂತ್ರಜ್ಞಾನ ಶಿಕ್ಷಣವನ್ನು ನಾನು ವಿರೋಧಿಸುತ್ತಿಲ್ಲ. ಬದಲಾಗಿ, ಎರಡೂ ಶಿಕ್ಷಣವನ್ನು ಹೇಗೆ ಉಪಯೋಗಿಸಬೇಕು ಎಂಬುದು ಜನರ ಕೈಯಲ್ಲೇ ಇದೆ ಎಂದರು.
ಮುಖ್ಯವಾಹಿನಿಯೊಂದಿಗೆ ಗುರುಕುಲ ಶಿಕ್ಷಣ ಸಂಬಂಧ ಹೊಂದಿರಬೇಕು. ವೇದ ಯುಗದಲ್ಲಿರುವ 64 ಅಂಶಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ಗುರುಕುಲ ಶಿಕ್ಷಣವನ್ನು ಮುಖ್ಯವಾಹಿನಿಗೆ ತರಬೇಕೇ ಹೊರತು ಅವುಗಳೊಂದಿಗೆ ಅಳವಡಿಸಬಾರದು. ಇನ್ನು ನಮ್ಮ ಗುರುಕುಲ ಶಿಕ್ಷಣದ ಮಾದರಿಯು ಫಿನ್ಲ್ಯಾಂಡ್ ಶಿಕ್ಷಣವನ್ನು ಹೋಲುತ್ತದೆ. ಈ ಸಂಸ್ಥೆಯು ಶಿಕ್ಷಕರಿಗೆ ತರಬೇತಿ ನೀಡಲೆಂದು ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಹೊಂದಿದೆ. ಹಾಗೇ ಸ್ಥಳೀಯ ಜನಸಂಖ್ಯೆ ಕಡಿಮೆ ಇರುವುದರಿಂದ ಅನೇಕರು ವಿದೇಶಗಳಿಂದ ಬಂದು ಶಿಕ್ಷಣ ಪಡೆಯುತ್ತಾರೆ.
ಈ ವೇಳೆ ಹೊಸ ಶಿಕ್ಷಣ ನೀತಿ (ಎನ್ಇಪಿ) ಬಗ್ಗೆ ಭಾಗವತ್ ಮಾತನಾಡಿ, ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯು ಬಹಳ ಹಿಂದೆಯೇ ಹದಗೆಟ್ಟಿದೆ. ಹಾಗಾಗಿ ಈ ಹೊಸ ಶಿಕ್ಷಣ ನೀತಿಯು ಸರಿಯಾದ ಹೆಜ್ಜೆಯಲ್ಲಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಜಪಾನ್ ಭೇಟಿ; ಭಾರತದಲ್ಲಿ ಹೂಡಿಕೆ ಮಾಡಿ, ವಿಶ್ವದ ಬೆಳವಣಿಗೆಗೆ ಸಹಕರಿಸಿ ಎಂದ ನಮೋ! | Narendra Modi in Japan
ಈ ಹಿಂದೆ ವಿದೇಶಿ ಆಕ್ರಮಣಕಾರರ ಗುಲಾಮಗಿರಿಯಲ್ಲಿ ವಾಸಿಸುತ್ತಿದ್ದ ಕಾರಣ ಹೊಸ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಲಾಯಿತು. ಅವರು ಬರೀ ದೇಶವನ್ನು ಆಳಲು ಬಯಸಿದ್ದರೇ ಹೊರತು ಅಭಿವೃದ್ಧಿಯನ್ನಲ್ಲ. ಹಾಗಾಗಿ ರಚನಾಕರರು ದೇಶವನ್ನು ಹೇಗೆ ಅಭಿವೃದ್ಧಿಗೊಳಿಸಬೇಕೆಂದು ತಿಳಿದು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಆದರಿಂದ ನಾವಿಂದು ಸ್ವತಂತ್ರರಾಗಿದ್ದೇವೆ. ಹಾಗಾಗಿ ನಾವು ರಾಜ್ಯವನ್ನು ನಡೆಸುವುದರ ಜೊತೆಗೆ ಜನರನ್ನು ನಡೆಸಬೇಕು ಎಂದು ತಿಳಿಸಿದರು.
ಇಂದಿನ ಮಕ್ಕಳಿಗೆ ನಾವು ಏನನ್ನು ನೀಡಲು ಸಾಧ್ಯವಾಗುತ್ತಿದಿಯೋ ಅದನ್ನೆಲ್ಲನ್ನೂ ನೀಡಬೇಕು. ಹಿಂದಿನ ಕಾಲದ ಬಗ್ಗೆ ಅಗತ್ಯವಿರುವ ಮಾಹಿತಿಗಳನ್ನು ಮಕ್ಕಳಲ್ಲಿ ತುಂಬುವುದರಿಂದ ಅವರ ಮನಸ್ಥಿಯನ್ನು ಬೆಳೆಸಬೇಕು. ಕಳೆದ ಕೆಲವು ವರ್ಷಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಕಂಡಿದೆ. ಹಾಗೇ ಅದರ ಬಗ್ಗೆ ಇರುವ ಅರಿವು ಹೆಚ್ಚಾಗಿದೆ ಎಂದು ಮೋಹನ್ ಭಾಗವತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
(ಏಜೆನ್ಸೀಸ್)