ಹಾಸನ: ಫಸಲಿಗೆ ಬಂದ 700ಕ್ಕೂ ಹೆಚ್ಚು ಕಾಫಿ ಗಿಡ, ಕಾಳುಮೆಣಸು ಗಿಡಗಳನ್ನು ದುಷ್ಕರ್ಮಿಗಳು ಜೆಸಿಬಿ ಮೂಲಕ ನಾಶ ಮಾಡಿರುವ ಘಟನೆ ಆಲೂರು ತಾಲೂಕು ಕೆ.ಹೊಸಕೋಟೆ ಹೋಬಳಿ ಕುಡಿದೆಲೆ ಗ್ರಾಮದಲ್ಲಿ ಸಂಭವಿಸಿದೆ.
ಕುಡಿದೆಲೆ ಗ್ರಾಮದ ಕಾಫಿ ಬೆಳಗಾರ ಪ್ರವೀಣ್ ಎಂಬುವವರಿಗೆ ಸೇರಿದ ತೋಟದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಎಂದಿನಂತೆ ಇಂದು ಬೆಳಗ್ಗೆ ತೋಟಕ್ಕೆ ಹೋದ ಪ್ರವೀಣ್ಗೆ ಆಘಾತ ಕಾದಿತ್ತು. ಎದೆಯೆತ್ತರಕ್ಕೆ ಬೆಳೆದು ನಿಂತಿದ್ದ ಕಾಫಿತೋಟ ನೆಲಸಮವಾಗಿವೆ. ಕಾಳುಮೆಣಸಿನ ಬಳ್ಳಿಗಳೂ ನಾಶವಾಗಿವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನನಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಪ್ರವೀಣ್ ಮನವಿ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್)