ನ್ಯೂಸ್

ಸಾಲದ ಸುಳಿ! KCR ಪಾಪಗಳ ಪಟ್ಟಿ ಶೀಘ್ರವೇ ಬಯಲು ಮಾಡ್ತೀವಿ: ಸಿಎಂ ರೇವಂತ್ ವಾಗ್ದಾಳಿ | CM Revanth

ಮೋಹನ್​ ಶೆಟ್ಟಿ

Revanth Reddy: ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್​ (ಕೆಸಿಆರ್) ಬಣ್ಣ ಬಯಲು ಮಾಡ್ತೇನೆ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಶಿವನಿಪಲ್ಲಿ ಪ್ರಜಾಪಾಲನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೇವಂತ್​, ಕೆಸಿಎಆರ್​ ನೇತೃತ್ವದ ಸರ್ಕಾರ ಮಾಡಿದ ಪಾಪಗಳ ಪಟ್ಟಿ ಶೀಘ್ರವೇ ಹೊರಬರಲಿದೆ. ಇದೇ 19 ಮತ್ತು 20ರಂದು ಅವುಗಳನ್ನು ಬಹಿರಂಗಪಡಿಸುತ್ತೇನೆ ಎಂದು ಗುಡುಗಿದರು.

"ನಾನು ಇಲ್ಲಿಯವರೆಗೆ ಹೇಳಿದ್ದು ಇಂಟರ್​ವಲ್​ ಮಾತ್ರ. ಅಸಲಿ ಚಿತ್ರ ಇನ್ನು ಮುಂದಿದೆ. ಹೋರಾಡಿ ಗೆದ್ದ ತೆಲಂಗಾಣವನ್ನು ಶ್ರೀಮಂತ ರಾಜ್ಯವನ್ನಾಗಿ ಮಾಡಿದ ಹತ್ತು ವರ್ಷಗಳಲ್ಲಿ, 8.29 ಲಕ್ಷ ಕೋಟಿ ರೂ. ಸಾಲವಾಗಿದೆ. ಕೆಸಿಆರ್​ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಎಸಗಿದೆ. ಅವರು ಭ್ರಷ್ಟರಾಗಿದ್ದಾರೆ. ಈ ಸಾಲದ ಹೊರೆಗೆ ನಮ್ಮ ಸರ್ಕಾರವು, ವರ್ಷದಲ್ಲಿ 1.53 ಲಕ್ಷ ಕೋಟಿ ರೂ. ಪಾವತಿಸಿದೆ. ಇದರಲ್ಲಿ ಸಾಲಗಳಿಗೆ ಮೂಲ ಮತ್ತು ಮೇಲಾಧಾರವೂ ಸೇರಿದೆ" ಎಂದರು.

"ಆ ಹಣ ಸಾಲಕ್ಕೆ ವ್ಯಯವಾಗದೆ ಇದ್ದಿದ್ದರೆ, ರಾಜ್ಯದ 30 ಲಕ್ಷ ಬಡವರಿಗೆ ಇಂದಿರಮ್ಮನ ಮನೆಗಳು ಪೂರ್ಣಗೊಳ್ಳುತ್ತಿದ್ದವು. ಕೆಸಿಆರ್ ಆಳ್ವಿಕೆಯ ಹತ್ತು ವರ್ಷಗಳಲ್ಲಿ ಶ್ರೀಮಂತ ರಾಜ್ಯ ಈಗ ಸಾಲದ ಸುಳಿಗೆ ಸಿಲುಕಿದೆ. ದಿವಾಳಿಯಾದ ರಾಜ್ಯವನ್ನು ನಾವು ಅಧಿಕಾರಕ್ಕೆ ಬಂದಾಗ ನಮ್ಮ ಕೈಗೆ ಹಸ್ತಾಂತರಿಸಲಾಯಿತು. ಆ ಸಮಯದಲ್ಲಿ ತಿಂಗಳಿಗೆ ಅಸಲು ಮತ್ತು ಬಡ್ಡಿ ಸೇರಿ 500 ಕೋಟಿ ರೂ. ಸಾಲವಿದ್ದರೆ, ಇಂದು ನಾವು ಪ್ರತಿ ತಿಂಗಳು 6,500 ಕೋಟಿ ರೂ. ಬಡ್ಡಿಯನ್ನೇ ಪಾವತಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದರು.

"ಕೆಸಿಆರ್ ಆಳ್ವಿಕೆಯಲ್ಲಿ 8.29 ಲಕ್ಷ ಕೋಟಿ ರೂ. ಸಾಲ ಉಂಟಾಗಿದೆ. ಇದರ ಮಧ್ಯೆಯೂ ಅಧಿಕಾರಕ್ಕೆ ಬಂದ ಎರಡು ದಿನಗಳಲ್ಲಿ, ಚುನಾವಣೆಯಲ್ಲಿ ನಾವು ಕೊಟ್ಟ 'ಹೆಣ್ಣು ಮಕ್ಕಳಿಗೆ ಆರ್‌ಟಿಸಿ ಉಚಿತ ಬಸ್ ಪ್ರಯಾಣ' ಯೋಜನೆ ಭರವಸೆಯನ್ನು ಜಾರಿಗೆ ತಂದಿದ್ದೇವೆ" ಎಂದು ಹೇಳಿದರು,(ಏಜೆನ್ಸೀಸ್).