ನ್ಯೂಸ್

ಬಿಗ್​ಬಾಸ್​ ಖ್ಯಾತಿಯ Pratham ಜತೆಗೆ Darshan ಫ್ಯಾನ್ಸ್​ ಕಿರಿಕ್​; ಘಟನೆ ಬಗ್ಗೆ ನಟ ಹೇಳಿದ್ದಿಷ್ಟು

ಬೆಂಗಳೂರು: ಬಿಗ್​ಬಾಸ್​ ಖ್ಯಾತಿಯ ನಟ ಪ್ರಥಮ್​ (Pratham) ಹಾಗೂ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ (Darshan) ಅಭಿಮಾನಿಗಳ ನಡುವೆ ದಿನ ಕಳೆದಂತೆ ಒಂದಿಲ್ಲೊಂದು ಕಾರಣಕ್ಕೆ ಸಂಘರ್ಷಗಳಾಗುತ್ತಿದ್ದು, ಈ ಸಂಬಂಧ ನಟ ದರ್ಶನ್​ ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಮತ್ತೊಮ್ಮೆ ದರ್ಶನ್​ ಅಭಿಮಾನಿಗಳು ಪ್ರಥಮ್​ ನಡುವೆ ಸಂಘರ್ಷ ನಡೆದಿದ್ದು ಈ ಸಂಬಂಧ ನಟ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

ಹೋಟೆಲ್‌ವೊಂದಕ್ಕೆ ತೆರಳಿದ ಸಂದರ್ಭದಲ್ಲಿ ಏಕಾಎಕಿ ಬಂದು ಜೈ ಡಿಬಾಸ್ ಅಂತ ಕೂಗಿ ಅಂತ ಫ್ಯಾನ್ಸ್ ಗಲಾಟೆ ಮಾಡಿದರು. ಅಶ್ಲೀಲ ಪದ ಬಳಸಿ ಕೈಮಿಲಾಯಿಸೋಕೆ ಫ್ಯಾನ್ಸ್ ಯತ್ನಿಸಿದರು. ಆ ನಂತರ ಹೋಟೆಲ್‌ನ 8 ಜನ ಬೌನ್ಸರ್ ಆ ಗೂಂಡಾಗಳನ್ನು ಹೊರಗೆ ತಳ್ಳಿದ್ದರು ಎಂದು ಘಟನೆಯ ಬಗ್ಗೆ ಪ್ರಥಮ್ ವಿವರಿಸಿದ್ದಾರೆ.

ಆ ನಂತರ ಹೋಟೆಲ್ ಸಿಬ್ಬಂದಿ ಮತ್ತು ಮ್ಯಾನೇಜರ್ ಮನವಿಯ ಮೇರೆಗೆ ನಾನು ಕಂಪ್ಲೇಂಟ್​ ಕೊಡಬಾರದು ಎಂದು ನಿರ್ಧರಿಸಿದೆ. ನಮ್ಮ ಪಾಡಿಗೆ ನಾವಿದ್ದೇವೆ. ನಿಮ್ಮ ಪಾಡಿಗೆ ನೀವಿರಿ. ದರ್ಶನ್ ಸರ್ ಅವರ ಪಾಡಿಗೆ ಇದ್ದಾರೆ. ಈ ಮಿನಿ ಗೂಂಡಾಗಳ ನಿಗರಾಟ ನೋಡೋಕೆ ಆಗುತ್ತಿಲ್ಲ. ಈ ಘಟನೆ ಎಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ಎಂದು ಎಕ್ಸ್‌ನಲ್ಲಿ ನಟ ತಿಳಿಸಿದ್ದಾರೆ.