ನ್ಯೂಸ್

ಜೂನ್​ನಿಂದ ಸಿನಿಮಾ ಚಿತ್ರೀಕರಣಕ್ಕೆ ಅನುವು!; ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸ್ಟಾರ್​ಗಳು

ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಪೋಸ್ಟ್​ ಪ್ರೊಡಕ್ಷನ್​, ಡಬ್ಬಿಂಗ್​, ರೀ ರೆಕಾರ್ಡಿಂಗ್​, ಸಂಗೀತ ಸೇರಿ ಹಲವು ಕೆಲಸಗಳಲ್ಲಿ ಸಿನಿಮಾ ಮಂದಿ ತೊಡಗಿಸಿಕೊಂಡಿದ್ದಾರೆ. ಇದೀಗ ಶೂಟಿಂಗ್​ಗೆ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ ಚಿತ್ರನಿರ್ಮಾಪಕರು. ಅದರಂತೆ ಟಾಲಿವುಡ್​ ಸಿನಿಮಾ ಇಂಡಸ್ಟ್ರಿಯಲ್ಲಿ ಚಿತ್ರೀಕರಣಕ್ಕೂ ತಾತ್ಕಾಲಿಕ ಅನುಮತಿ ಸಿಕ್ಕಿದ್ದು, ಶೀಘ್ರದಲ್ಲಿ ಅಧಿಕೃತ ಘೋಷಣೆ ಆಗಲಿದೆ.

ಇತ್ತೀಚೆಗಷ್ಟೇ ಟಾಲಿವುಡ್​ ಸ್ಟಾರ್ ಕಲಾವಿದರಾದ ಚಿರಂಜೀವಿ, ನಾಗಾರ್ಜುನ ಮತ್ತು ನಿರ್ದೇಶಕ ರಾಜಮೌಳಿ ಸಿಎಂ ಕೆ. ಚಂದ್ರಶೇಖರ್​ ರಾವ್​ ಅವರನ್ನು ಭೇಟಿಯಾಗಿ, ಶೂಟಿಂಗ್​ ಅನುಮತಿ ವಿಚಾರ ಪ್ರಸ್ತಾಪಿಸಿದ್ದಾರೆ.

'ಈಗಾಗಲೇ ಟಿವಿ ಮತ್ತು ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ಗೆ ಅನುಮತಿ ನೀಡಲಾಗಿದೆ. ಅದೇ ರೀತಿ ಜೂನ್​ ತಿಂಗಳಿಂದ ಸಿನಿಮಾ ಚಿತ್ರೀಕರಣಕ್ಕೂ ಅನುಮತಿ ಕೊಡಲಾಗುವುದು. ಸಿನಿಮಾ ಸೆಟ್​ನಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳ ಕೈಗೊಳ್ಳುವುದು ಕಡ್ಡಾಯ. ಆ ಬಳಿಕ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಗೆಯ ಬಗ್ಗೆ ಚರ್ಚಿಸಲಾಗುವುದು‘ ಎಂದು ಸಿಎಂ ಕೆಸಿಆರ್ ತಿಳಿಸಿದ್ದಾರೆ. (ಏಜೆನ್ಸೀಸ್​)