ಹೇಗಿವೆ ಗೊತ್ತಾ ನಿಖಿಲ್​- ರೇವತಿ ಮದುವೆ ಫೋಟೋಸ್​?

nikhil
Published on

ಬೆಂಗಳೂರು: ಏ. 17ರಂದು ಲಾಕ್​ಡೌನ್​ ನಡುವೆಯೇ ರಾಮನಗರದ ಕೇತುಗಾನಹಳ್ಳಿಯ ತೋಟದ ಮನೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್​ ಮತ್ತು ರೇವತಿ ಮದುವೆ ನೆರವೇರಿತ್ತು. ಸರಳವಾಗಿಯೇ ನಡೆದ ಮದುವೆಗೆ ಆಪ್ತರು, ಕುಟುಂಬಸ್ಥರು ಭಾಗವಹಿಸಿ ನವಜೋಡಿಗೆ ಆಶೀರ್ವದಿಸಿದ್ದರು.

ಈ ನಡುವೆ ಮದುವೆಯಾದ ಬಳಿಕ ಒಂದೆರಡು ಫೋಟೋಗಳು ಹೊರಬಂದಿದ್ದನ್ನು ಬಿಟ್ಟರೆ, ಪೂರ್ತಿ ಮದುವೆಯ ಫೋಟೋಗಳು ಲಭ್ಯವಾಗಿರಲಿಲ್ಲ. ಇದೀಗ ಆ ಪೈಕಿ ಒಂದಷ್ಟು ಫೋಟೋಗಳನ್ನು ಆರ್​ಜಿ ಫೋಟೋಗ್ರಾಫಿಯ ಛಾಯಾಗ್ರಾಹಕ ಪ್ರವೀಣ್​ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅವುಗಳ ಸಣ್ಣ ಝಲಕ್​ ಇಲ್ಲಿದೆ.

ಚಿತ್ರ ಕೃಪೆ: ಪ್ರವೀಣ್ (rg_photography04)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net