ನ್ಯೂಸ್

ನೈಸರ್ಗಿಕ ಅನಿಲಕ್ಕಾಗಿ 10 ಸಾವಿರ ಅಡಿ​ ಭೂಮಿ ಕೊರೆಯಲು ಮುಂದಾದ ಚೀನಾ

ಚೀನಾ: ಬರುವ ವರ್ಷಗಳಲ್ಲಿ ಇಂಧನಕ್ಕೆ ಬೇಡಿಕೆ ಹೆಚ್ಚಾಗು ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಚೀನಾ ನೈಸರ್ಗಿಕ ಅನಿಲದ ನಿಕ್ಷೇಪಗಳ ಹುಡುಕಾಟದಲ್ಲಿ ತೊಡಗಿದೆ.

ಈ ನಿಟ್ಟಿನಲ್ಲಿ ಚೀನಾ ನ್ಯಾಷನಲ್​ ಪೆಟ್ರೋಲಿಯಂ ಕಾರ್ಪೋರೇಷನ್​(CNPC) ಸಿಚುವಾನ್​ನ ಶೆಂಡಿ ಚುಂಕೆ ಪ್ರಾಂತ್ಯದಲ್ಲಿ ಬಾವಿಯನ್ನು ಕೊರೆಯಲು ಪ್ರಾರಂಭಿಸಿದ್ದು, 10,520(6.5 ಮೈಲಿ) ಮೀಟರ್​ ಅಗೆಯಲು ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಅಗತ್ಯ ತಯಾರಿಗಳನ್ನು ಸಹ ಮಾಡಿಕೊಂಡಿದೆ.

ಈ ವರ್ಷ ಮೇ ತಿಂಗಳಲ್ಲಿ ಕ್ಸಿನ್‌ಜಿಯಾಂಗ್‌ನಲ್ಲಿ ಚೀನಾ ನ್ಯಾಷನಲ್​ ಪೆಟ್ರೋಲಿಯಂ ಕಾರ್ಪೋರೇಷನ್​ ಮೊದಲಿಗೆ ಬಾವಿ ಕೊರೆಯಲು ಪ್ರಾರಂಭಿಸಿತ್ತು. ಈಗ ನಡೆಸಲು ಉದ್ಧೇಶಿಸಿರುವ ಯೋಜನೆಯು ಮೊದಲಿಗಿಂತಲೂ ದೊಡ್ಡದ್ದು ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಎನ್​ಪಿಸಿಯ ಅಧಿಕಾರಿಯೊಬ್ಬರು ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬಾವಿ ಕೊರೆಯಲಾಗಿತ್ತು ಮತ್ತು ಎರಡನೇಯದ್ದು, ನೈಸರ್ಗಿಕ ಅನಿಲದ ನಿಕ್ಷೇಪಗಳನ್ನು ಹುಡುಕಲು ಆಳವಾದ ಬಾವಿಯನ್ನು ಕೊರೆಯಲಾಗುತ್ತಿದೆ. ಭೂಮಿಯ ಆಂತರಿಕ ಡೇಟಾವನ್ನು ಪಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ.

ಸಿಚುವಾನ್​ ಒ್ರದೇಶವು ನೈಸರ್ಗಿಕ ಕಾಡು ಹಾಗೂ ಬೆಟ್ಟ ಗುಡ್ಡಗಳಿಂದ ಸುತ್ತುವರೆದಿದ್ದು, ಚೀನಾದ ಹೆಸರಾಂತ ಅನಿಲ ನಿಕ್ಷೇಪಗಳಿಗೆ ನೆಲೆಯಾಗಿದೆ. ಬರುವ ವರ್ಷಗಳಲ್ಲಿ ಇಂಧನದ ಅಭಾವ ಉಂಟಾಗುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಘಿರುವ ಚೀನಾ ಸರ್ಕಾರವು ಪೆಟ್ರೋಲಿಯಂ ಕಂಪನಿಗಳಿಗೆ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹುಡುಕುವಂತೆ ಒತ್ತಡ ಹೇರುತ್ತಿದೆ.