More

    ಸೂಚನೆ ನೀಡಿ ತಡೆದರೂ ನಮ್ಮ ಮೇಲೆಯೇ ಕೇಸ್: ಭಜರಂಗದಳ ಆಕ್ರೋಶ

    ಮಂಗಳೂರು: ಭಜರಂಗದಳ ಕಾರ್ಯಕರ್ತರ ಮೇಲೆ ಗಡಿಪಾರು ಆದೇಶ ಹಿನ್ನಲೆ ಪೊಲೀಸರ ಕ್ರಮದ ವಿರುದ್ಧ ಹಿಂದೂ ಪರ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪೆಡಿಸುತ್ತಿದ್ದು, ಕಾಂಗ್ರೆಸ್​ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಈ ಕುರಿತು ಮಾತನಾಡಿರುವ ಭಜರಂಗದಳದ ಮುಖಂಡ ಪುನೀತ್​ ಅತ್ತಾವರ ನಾವು ಇಷ್ಟು ದಿನ ಪೊಲೀಸರಿಗೆ ಗೋವುಗಳ ಕಳ್ಳಸಾಗಾಣೆ ಬಗ್ಗೆ ಮಾಹಿತಿ ನೀಡಿ ನಡೆಯುತ್ತಿದ್ದೆವು. ಇನ್ನು ಮುಂದೆ ಹಾಗೆ ಮಾಡುವುದಿಲ್ಲ ನಾವೇ ನೇರವಾಗಿ ಹೋಗುತ್ತೇವೆ.

    Bajrangdal workers

    ಇದನ್ನೂ ಓದಿ: ಭಜರಂಗದಳ ಕಾರ್ಯಕರ್ತರ ಗಡಿಪಾರಿಗೆ ಸಿದ್ಧತೆ? ಡಿಸಿಪಿ ಎದುರು ಹಾಜರಾಗಲು ಸೂಚನೆ

    ಗೋವುಗಳ ಕಳ್ಳಸಾಗಾಣೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಗಡಿಪಾರಿನ ನೋಟಿಸ್​ ನೀಡಿದ್ದಾರೆ. ಕಣ್ಣೆದುರೇ ಅಕ್ರಮಗಳು ನಡೆದಾಗ ಸುಮ್ಮನೇ ಇರಬೇಕಾ. ಗೋ ಹತ್ಯೆ ನಿಷೇಧದ ಬಗ್ಗೆ ಸರ್ಕಾರದ ಆದೇಶವೇ ಇದೆ. ಪೊಲೀಸರಿಗೆ ಮಾಹಿತಿ ನೀಡಿಯೇ ಗೋಹತ್ಯೆ ತಡೆದರೆ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ.

    ಹೋಳಿ ಆಚರಣೆ ನೆಪದಲ್ಲಿ ಮದ್ಯ ಹಾಗೂ ಡ್ರಗ್ಸ್​ ಪಾರ್ಟಿ ಮಾಡುತ್ತಿದ್ದರು ಅದನ್ನು ಸಹ ಪೊಲೀಸರಿಗೆ ಮಾಹಿತಿ ನೀಡಿ ತಡೆದಿದ್ದೇವೆ. ಕಾಂಗ್ರೆಸ್​ ಸರ್ಕಾರ ತುಷ್ಠೀಕರಣದ ರಾಜಕೀಯ ಮಾಡುತ್ತಿದೆ. ಮೊದಲು ಭಜರಂಗದಳ ಬ್ಯಾನ್​ ಮಾಡುವುದಾಗಿ ಹೇಳಿದರು ಈಗ ಕಾರ್ಯಕರ್ತರನ್ನು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಮುಖಂಡ ಪುನೀತ್​ ಅತ್ತಾವರ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts