More

    ಸಾರಿಗೆ ಸಿಬ್ಬಂದಿ ಸಮಯಪ್ರಜ್ಞೆಯಿಂದ ಪಾರಾದ ರೋಗಿ; ವ್ಯಾಪಕ ಮೆಚ್ಚುಗೆ

    ತುಮಕೂರು: ಪ್ರಯಾಣಿಕರೊಬ್ಬರು ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಕೆಎಸ್​ಆರ್​ಟಿಸಿ ಚಾಲಕ ಹಾಗೂ ನಿರ್ವಾಹಕ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮರೆದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ನಡೆದಿದೆ.

    ಶಿವಮೊಗ್ಗದಿಂದ ಬೆಂಗಳೂರಿನತ್ತ ಬಸ್​ನಲ್ಲಿ ಘಟನೆ ನಡೆದಿದ್ದು, ಅಸ್ವಸ್ಥಗೊಂಡವರನ್ನು ಭದ್ರಾವತಿ ಮೂಲದ ಈಶ್ವರ್​ ರೆಡ್ಡಿ ಎಂದು ಗುರುತಿಸಲಾಗಿದೆ. ಬಸ್​ ಚಾಲಕ ಪ್ರಕಾಶ್​ ಹಾಗೂ ನಿರ್ವಾಹಕ ಓಂಕಾರ್​ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    KSRTC
    ಚಾಲಕ ಪ್ರಕಾಶ್​

    ಇದನ್ನೂ ಓದಿ: VIDEO| ಧಾರ್ಮಿಕ ಸೌಹಾರ್ದತೆಗೆ ಧಕ್ಕೆ; ಆರೋಪಿಗಳ ಮನೆ ಮೇಲೆ ಜೆಸಿಬಿ ಕಾರ್ಯಾಚರಣೆ

    ಶಿವಮೊಗ್ಗದಿಂದ ಬೆಂಗಳೂರಿನತ್ತ ಬರುತ್ತಿದ್ದ ಬಸ್​ ತಿಪಟೂರು ತಲುಪಿದ ವೇಳೆ ಈಶ್ವರ್​ ರೆಡ್ಡಿ ಕುಸಿದು ಬಿದ್ದಿದ್ದು ಏಕಾಏಕಿ ಅವರ ಬಾಯಿಂದ ನೊರೆ ಹಾಗೂ ನಾಲಗೆಯಿಂದ ರಕ್ತಬರಲು ಶುರುವಾಗಿದೆ. ಇದನ್ನು ಗಮನಿಸಿದ ನಿರ್ವಾಹಕ ಓಂಕಾರ್​ ಕೂಡಲೇ ಬಸ್​ಅನ್ನು ಸರ್ಕಾರಿ ಆಸ್ಪತ್ರೆಯತ್ತ ತಿರುಗಿಸುವಂತೆ ಚಾಲಕ ಪ್ರಕಾಶ್​ಗೆ ಸೂಚಿಸಿದ್ದಾರೆ.

    ಸಮಯಕ್ಕೆ ಸರಿಯಾಗಿ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಅವರ ಜೀವ ಉಳಿಸಿದ ಕೆಎಸ್​​ಆರ್​ಟಿಸಿ ಸಿಬ್ಬಂದಿ ಸಮಯಪ್ರಜ್ಞೆ ಹಾಗು ಮನುಷ್ಯತ್ವ ಗುಣಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts