ಮುಂಬೈ: ಚೆನ್ನೈನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಇಂಡಿಗೋ 6E 5314 ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಕರೆ ಕೇಳಿಬಂದ ಬೆನ್ನಲ್ಲೇ ಪೈಲೆಟ್ ವಿಮಾನವನ್ನು ಮುಂಬೈ ಏರ್ಪೋರ್ಟ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ.
ವಿಮಾನ ಮುಂಬೈಗೆ ಬಂದಿಳಿದ ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಿದ ವಿಮಾನ ಸಿಬ್ಬಂದಿಗಳು, ಭದ್ರತಾ ಏಜೆನ್ಸಿಯ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆ. ವಿಮಾನವು ಪ್ರಸ್ತುತ ತಪಾಸಣೆಗೆ ಒಳಪಟ್ಟಿದ್ದು, ಎಲ್ಲಾ ಭದ್ರತಾ ತಪಾಸಣೆಗಳನ್ನು ಪೂರ್ಣಗೊಳಿಸಿದ ನಂತರವೇ ವಿಮಾನವನ್ನು ಟರ್ಮಿನಲ್ ಪ್ರದೇಶದಲ್ಲಿ ಹಿಂತಿರುಗಿಸಲಾಗುತ್ತದೆ ಎಂದು ಏರ್‌ಲೈನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವಾರ ಇದೇ ರೀತಿಯಲ್ಲಿ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆಯೊಂದು ಕೇಳಿಬಂದಿತ್ತು. ಈ ಹಿಂದೆ ಮೇ.28ರಂದು ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ವಿಮಾನಕ್ಕೆ ಇದೇ ರೀತಿ ದುಷ್ಕರ್ಮಿಗಳು ಬೆದರಿಕೆ ಹಾಕಿ, ಪ್ರಯಾಣಿಕರನ್ನು ಭಾರೀ ಆತಂಕಕ್ಕೆ ದೂಡಿದ್ದರು. ಮಾಹಿತಿ ಪಡೆಯುತ್ತಿದ್ದಂತೆ ಪ್ರಯಾಣಿಕರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ನಿರ್ಗಮನದ ಮೂಲಕ ಸ್ಥಳಾಂತರಿಸಲಾಗಿತ್ತು,(ಏಜೆನ್ಸೀಸ್).