ನ್ಯೂಸ್

ತನ್ನ ನೌಕರರಿಗೆ 100 ಕಾರು ಗಿಫ್ಟ್​​ ಮಾಡಿದೆ ಈ ಕಂಪನಿ!

ಚೆನ್ನೈ: ಕೆಲಸ ಮಾಡಿಸಿಕೊಂಡು ಸಂಬಳ ಕೊಡದ ಕಾಲದಲ್ಲಿ ಇಲ್ಲೊಂದು ಕಂಪನಿ ಕೆಲಸಗಾರರಿಗೆ ಕಾರುಗಳನ್ನು ಗಿಫ್ಟ್​ ಮಾಡುವ ಮೂಲಕ ಭಾರೀ ಮೆಚ್ಚುಗೆ ಗಳಿಸಿದೆ.

ಕಾರ್ಪೊರೆಟ್ ವಲಯದ ಐಡಿಯಾಸ್​-2 ಕಂಪನಿ ತನ್ನ ನೌಕರರಿಗೆ ಮಾರುತಿ ಸುಜುಕಿಯ 100 ಕಾರುಗಳನ್ನು ಗಿಫ್ಟ್​ ಮಾಡಿದೆ. ತಮ್ಮ ಕಂಪನಿ ಯಶಸ್ಸಿಗೆ ನೌಕರರೇ ಕಾರಣ ಹಾಗಾಗಿ ಅವರಿಗೆ ಕಾರು ಗಿಫ್ಟ್​ ಮಾಡುವ ಮೂಲಕ ನಮ್ಮ ಯಶಸ್ಸಿನ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದೇವೆ ಎಂದು ಮಾರ್ಕೆಟಿಂಗ್​ ಮುಖ್ಯಸ್ಥ ಸುಬ್ರಮಣಿಯನ್​ ಹೇಳಿದ್ದಾರೆ.

ಸಂಸ್ಥೆ ಬೆಳೆಯಲು ನೌಕರರು ಅತಿಹೆಚ್ಚು ಪರಿಶ್ರಮ ಹಾಕಿರುತ್ತಾರೆ. ಇದು ಉಡುಗೊರೆ ಅಲ್ಲ ಅವರ ಪರಿಶ್ರಮದ ಫಲ ಎಂದು ಸಂಸ್ಥಾಪಕ ಮುರುಳಿ ವಿವೇಕಾನಂದಂ ಹೇಳಿದ್ದಾರೆ. ಏನೇ ಆದರೂ ಈ ಕಂಪನಿ ನೌಕರರ ಪಾಲಿಗೆ ಅದೃಷ್ಟವೇ ಸರಿ.