ಬ್ರಿಜ್ ಭೂಷಣ್, ಲೈಂಗಿಕ ದೌರ್ಜನ್ಯದ ಆರೋಪಿ 
ನ್ಯೂಸ್

ಮಹಿಳಾ ಕುಸ್ತಿಪಟುಗಳ ನಾಡಿಮಿಡಿತ ಚೆಕ್ ಮಾಡಿದ್ದೆ, ಅಷ್ಟೇ..: ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬ್ರಿಜ್​ ಭೂಷಣ್ ಹೇಳಿಕೆ

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ, ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಇಂದು ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ ಗಮನ ಸೆಳೆದಿದೆ.

ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯಕ್ಕೆ ಹಾಜರಾಗಿದ ಬ್ರಿಜ್ ಭೂಷಣ್, ನಾನು ಬರೀ ನಾಡಿಮಿಡಿತ ನೋಡಿದ್ದೆ, ಲೈಂಗಿಕ ಉದ್ದೇಶವಿಲ್ಲದೆ ನಾಡಿಮಿಡಿತ ನೋಡುವುದು ಅಪರಾಧವಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಬ್ರಿಜ್ ಭೂಷಣ್ ಹೇಳಿಕೆಯನ್ನು ದಾಖಲಿಸಿಕೊಂಡು ವಾದ-ಪ್ರತಿವಾದ ಆಲಿಸಿದ ಅಡಿಷನಲ್ ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್​ ಮುಂದಿನ ವಿಚಾರಣೆಯನ್ನು ಅ. 19ರಂದು ನಡೆಸುವುದಾಗಿ ಘೋಷಿಸಿದರು.

ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರು ಮಹಿಳಾ ಕುಸ್ತಿಪಟುಗಳು ಆರೋಪಿಸಿದ್ದ ಹಿನ್ನೆಲೆಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ವಿನೋದ್ ತೋಮರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಾಗಿದ್ದು, ದೋಷಾರೋಪಣ ಪಟ್ಟಿ ಕೂಡ ಸಲ್ಲಿಕೆ ಆಗಿತ್ತು.