Gold Rates: ಕಳೆದ ಎರಡು ವಾರಗಳಲ್ಲಿ ಭಾರೀ ಏರಿಕೆಗೊಂಡ ಚಿನ್ನದ ಬೆಲೆ, ಇಂದು ದಿಢೀರ್ ಇಳಿಕೆ ಕಂಡಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಒಂದು ಲಕ್ಷ ರೂ. ಗಡಿದಾಟಿ ಹೋಗಿರುವ ಗೋಲ್ಡ್ ಬೆಲೆ ಕಡೆಗೂ ಇಳಿಕೆಯತ್ತ ಮುಖ ಮಾಡಿರುವುದು ಚಿನ್ನದಂತ ಖರೀದಿದಾರರಲ್ಲಿ ಹೊಸ ಭರವಸೆ ತಂದಿದೆ. ಮದುವೆ, ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡಬೇಕು ಎಂಬ ಯೋಚಿಸುತ್ತಿದ್ದೀರಾ? ಹಾಗಿದ್ದರೆ, ಈ ಸುದ್ದಿ ನಿಮಗಾಗಿ.
ಇದನ್ನೂ ಓದಿ: ಕೇಳೋದಕ್ಕೆ ನೀನ್ಯಾರು? ಸಂಚಾರ ನಿಯಮ ಉಲ್ಲಂಘನೆ ಪ್ರಶ್ನಿಸಿದ್ದಕ್ಕೆ ದಾವಣಗೆರೆ ಡಿಸಿಗೆ ಅವಾಜ್ ಹಾಕಿದ ಭೂಪ! Davangere DC
ಇಂದು ಚಿನ್ನದ ಬೆಲೆ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯೂ ಗಣನೀಯವಾಗಿ ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಅನಿಶ್ಚಿತತೆಯಿಂದಾಗಿ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ತೀವ್ರವಾಗಿ ಏರಿಕೆ ಕಂಡಿತ್ತು. ಆದಾಗ್ಯೂ, ಇಂದಿನ ಚಿನ್ನದ ದರ ಗಣನೀಯವಾಗಿ ಕುಸಿದಿದೆ. ಶುಕ್ರವಾರ (ಜೂ.20) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 600 ರೂ. ಕಡಿಮೆಯಾಗಿದೆ. 22 ಕ್ಯಾರೆಟ್ ಚಿನ್ನದ ದರ 550 ರೂ. ಇಳಿದಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವೂ ಇಳಿಕೆಯಾಗಿದೆ.
ಒಂದು ಔನ್ಸ್ ಚಿನ್ನದ ಬೆಲೆ 18 ಡಾಲರ್ ಕಡಿಮೆಯಾಗಿದೆ. ಪ್ರಸ್ತುತ, ಒಂದು ಔನ್ಸ್ ಚಿನ್ನದ ಬೆಲೆ 3,356 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆಯೂ ಗಣನೀಯವಾಗಿ ಕಡಿಮೆಯಾಗಿದೆ. ಭಾರತದಲ್ಲಿ, ಒಂದು ಕೆಜಿ ಬೆಳ್ಳಿಯ ಬೆಲೆ 2,000 ರೂ. ಇಳಿಕೆ ಕಂಡಿದೆ. ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಾಗಿದೆ? ಎಂಬುದರ ವಿವರ ಹೀಗಿದೆ ಗಮನಿಸಿ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ದಯವಿಟ್ಟು ಗಮನಿಸಿ.