Gold Price: ಇಂದು ಚಿನ್ನದ ಬೆಲೆಯಲ್ಲಿ ಸಾಧಾರಣ ಕುಸಿತ ಕಂಡುಬಂದಿದೆ. ಮಂಗಳವಾರ (ಮಾ.11) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ದೇಶದಲ್ಲಿ ಚಿನ್ನದ ಬೆಲೆ 300 ರೂ.ಗೆ ಇಳಿಕೆಯಾಗಿದೆ. ಅದೇ ರೀತಿ, ಬೆಳ್ಳಿ ಬೆಲೆಯಲ್ಲಿ 1000 ರೂ. ಕುಸಿದಿದೆ. ಜನರು ಚಿನ್ನವೇ ಭವಿಷ್ಯದ ಉತ್ತಮ ಹೂಡಿಕೆ ಎಂಬ ಯೋಚನೆಯಲ್ಲಿದ್ದು, ಚಿನ್ನವನ್ನು ಖರೀದಿಸಲು ಸೂಕ್ತ ಸಮಯ ನೋಡುತ್ತಿರುವುದು ಗಮನಾರ್ಹ.
ಅಂತರರಾಷ್ಟ್ರೀಯವಾಗಿ ಕೇಂದ್ರೀಯ ಬ್ಯಾಂಕುಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿವೆ. ಚಿನ್ನದ ಬೆಲೆಗಳು ಆರ್ಥಿಕ ಅನಿಶ್ಚಿತತೆಯಿಂದ ಚೇತರಿಸಿಕೊಳ್ಳುತ್ತವೆ ಎಂಬ ಕಾರಣಕ್ಕೆ ಕೇಂದ್ರೀಯ ಬ್ಯಾಂಕುಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿವೆ. ಗೋಲ್ಡ್ ಹೂಡಿಕೆಯತ್ತ ಹೆಚ್ಚು ಒಲವು ತೋರುತ್ತಿರುವ ಜನರು, ಪ್ರತಿದಿನ ಚಿನ್ನದ ದರದಲ್ಲಿ ಎಷ್ಟು ಇಳಿಕೆಯಾಗುತ್ತದೆ? ಎಷ್ಟು ಏರಿಕೆಯಾಗುತ್ತದೆ? ಎಂಬ ಮಾಹಿತಿಯನ್ನು ತಪ್ಪದೇ ಅನುಸರಿಸುತ್ತಿದ್ದಾರೆ. ಇದರ ಮೇಲೆ ತಮ್ಮ ಕೊಳ್ಳುವಿಕೆ ಕುರಿತು ನಿರ್ಧರಿಸುತ್ತಾರೆ. ಅಸಲಿಗೆ, ಇಂದಿನ ಚಿನ್ನದ ಬೆಲೆ ಎಷ್ಟಿದೆ? ದೇಶದ ಪ್ರಮುಖ ನಗರಗಳಲ್ಲಿ ಎಷ್ಟಾಗಿದೆ? ಎಂಬುದರ ವಿವರ ಹೀಗಿದೆ ಗಮನಿಸಿ.
ಇದನ್ನೂ ಓದಿ: ಮಾಲಿವುಡ್ ಸ್ಟಾರ್ ನಟ ಮುಮ್ಮಟ್ಟಿಗೆ ಮಗಳಾಗಿ, ಲವರ್ ಆಗಿ, ತಾಯಿಯಾಗಿ ನಟಿಸಿದ ಏಕೈಕ ಸ್ಟಾರ್ ನಟಿ ಈಕೆ! South Actress ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಚಿನ್ನದ ಬೆಲೆ 80,000 ರೂ. ಗಡಿದಾಟಿದೆ. ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 80,200 ರೂ. ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 87,490 ರೂ. ತಲುಪಿದೆ.
ಬೆಳ್ಳಿ ಬೆಲೆಯಲ್ಲಿ 1000 ರೂ. ಇಳಿಕೆಯಾಗಿದ್ದು, ವಿವಿಧ ನಗರಗಳಲ್ಲಿ ಇಂದಿನ ದರಗಳು ಹೀಗಿವೆ